'ಪೈಲ್ವಾನ್' ಟೀಸರ್ ಬಗ್ಗೆ ಹೊಸ ಸುದ್ದಿ ಹಂಚಿಕೊಂಡ ಕಿಚ್ಚ
Recommended Video

ರಿಲೀಸ್ ಆಗ್ತಿದೆ ಪೈಲ್ವಾನ್ ಟೀಸರ್..! | FILMIBEAT KANNADA
ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸದ್ಯ ಕಾಯುತ್ತಿರುವ ಸಿನಿಮಾಗಳ ಪೈಕಿ 'ಪೈಲ್ವಾನ್' ಕೂಡ ಒಂದಾಗಿದೆ. ಈ ಸಿನಿಮಾದ ಕುರಿತು ಸುದೀಪ್ ಈಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.

'ಪೈಲ್ವಾನ್' ಸಿನಿಮಾದ ಮೊದಲ ಟೀಸರ್ ಡೇಟ್ ಅನ್ನು ಸುದೀಪ್ ಇದೀಗ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟೀಸರ್ ಹೊರ ಬರುವ ದಿನವನ್ನು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ, ಚಿತ್ರದ ಮೊದಲ ಟೀಸರ್ ಜನವರಿ 15 ರಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿದೆಯಂತೆ.
'ಪೈಲ್ವಾನ್' ಎಂಟು ಭಾಷೆಗಳಲ್ಲಿ ಬರುತ್ತಿರುವ ಸಿನಿಮಾವಾಗಿದ್ದು, ಮೊದಲು ಕನ್ನಡದ ಟೀಸರ್ ರಿಲೀಸ್ ಆಗಲಿದೆ. ಟೀಸರ್ ಡೇಟ್ ಜೊತೆಗೆ ತಮ್ಮ ಚಿತ್ರತಂಡಕ್ಕೆ ಟ್ವಿಟ್ಟರ್ ನ ಮೂಲಕ ಕಿಚ್ಚ ಶುಭ ಕೋರಿದ್ದಾರೆ.
'ಹೆಬ್ಬುಲಿ' ಬಳಿಕ ಮತ್ತೆ ಸುದೀಪ್ ಹಾಗೂ ನಿರ್ದೇಶಕ ಕೃಷ್ಣ ಈ ಸಿನಮಾದಲ್ಲಿಯೂ ಒಂದಾಗಿದ್ದಾರೆ. ಚಿತ್ರದ ನಿರ್ಮಾಣ ಕೂಡ ಕೃಷ್ಣ ಅವರೇ ಮಾಡುತ್ತಿದ್ದಾರೆ. ಆಕಾಂಕ್ಷ ಸಿಂಗ್ ಚಿತ್ರದ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
More from Filmibeat
English summary
Kiccha Sudeep's 'Pailwan' movie teaser will be releasing on january 15th. The movie is directed by krishna.


Click it and Unblock the Notifications











