Mark Trailer: 18 ಗಂಟೆ.. ಒಂದು ಚಾಲೆಂಜ್.. ಎಸ್‌ಪಿ 'ಮಾರ್ಕ್‌' ಮಿಷನ್ ಏನು?

ಕಿಚ್ಚ ಸುದೀಪ್ 'ಮಾರ್ಕ್' ಅವತಾರದ ಸಣ್ಣ ಝಲಕ್ ರಿವೀಲ್ ಆಗಿದೆ. ಡಿಸೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಭರ್ಜರಿ ಆಕ್ಷನ್ ಜೊತೆಗೆ ಕಿಚ್ಚನ ಮಾಸ್ ಪರ್ಫಾರ್ಮನ್ಸ್, ಜಬರ್ದಸ್ತ್ ಡೈಲಾಗ್ಸ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರಮಂದಿರಗಳಲ್ಲಿ ಕೂಡ ಟ್ರೈಲರ್ ಪ್ರದರ್ಶನ ಮಾಡಲಾಗಿದೆ.

ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ ಬರ್ತಿರೋ 2ನೇ ಸಿನಿಮಾ ಇದು. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮತ್ತೊಮ್ಮೆ ಕಳ್ಳ ಪೊಲೀಸ್ ಆಟವನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಮಾನವ ಕಳ್ಳ ಸಾಗಾಣಿಕೆ ಕಥೆ ಚಿತ್ರದಲ್ಲಿರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೊಲಿಟಿಕಲ್ ಅಂಶಗಳನ್ನು ಸೇರಿಸಿ ಪಕ್ಕಾ ಪೈಸಾ ವಸೂಲ್ ಸಿನಿಮಾ ಕಟ್ಟಿಕೊಟ್ಟಂತೆ ಕಾಣುತ್ತಿದೆ.

Kiccha Sudeep s Power-Packed Mark Trailer Promises a Thrilling One-Night Action Drama

ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಕಿಚ್ಚನ ಆರ್ಭಟ ಅಭಿಮಾನಿಗಳಿಗೆ ಹಬ್ಬದೂಟ ಆಗುವುದರಲ್ಲಿ ಸಂದೇಹವಿಲ್ಲ. ಆದಿಕೇಶವ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಏನೂ ಬೇಕಾದರೂ ಮಾಡ್ತಾನೆ. ಇದೇ ಹಾದಿನಲ್ಲಿ ಮಾರ್ಕ್ ಅಮಾನತಿನಲ್ಲಿ ಇರುತ್ತಾನೆ. ಆದರೆ ಆದಿಕೇಶವನ ನಿಜ ಬಣ್ಣದ ಬಯಲು ಮಾಡಲು ಒಂದ ಅವಕಾಶ ಸಿಗುತ್ತದೆ. ಅದನ್ನು ಉಪಯೋಗಿಸಿಕೊಂಡು ಹೇಗೆ ಮಾರ್ಕ್ ದುಷ್ಠರನ್ನು ಸದೆಬಡೆಯುತ್ತಾನೆ ಎನ್ನುವುದು ಚಿತ್ರದ ಒನ್‌ಲೈನ್‌ ಸ್ಟೋರಿ.

'ಮ್ಯಾಕ್ಸ್' ರೀತಿಯಲ್ಲೇ 'ಮಾರ್ಕ್‌' ಕೂಡ ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಎನಿಸ್ತಿದೆ. ಟ್ರೈಲರ್‌ನಲ್ಲಿರುವ ಬಹುತೇಕ ಸನ್ನಿವೇಶಗಳನ್ನು ನೈಟ್ ಎಫೆಕ್ಟ್‌ನಲ್ಲೇ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತದೆ. ಮಕ್ಕಳನ್ನು ಅಪಹರಿಸಿಟ್ಟ ದುಷ್ಟ 'ಮಾರ್ಕ್‌'ಗೆ 18 ಗಂಟೆಗಳಲ್ಲಿ ಕಾಪಾಡಿಕೊಳ್ಳಲು ಅವಕಾಶ ಕೊಡುತ್ತಾನೆ. ಮುಂದೇನು ಎನ್ನುವುದು ಸಿನಿಮಾ ಕಥೆ. ಮೇಲ್ನೋಟಕ್ಕೆ ಕಥೆ ಸಿಂಪಲ್ ಅನ್ನಿಸಿದರೂ ಟ್ರೀಟ್‌ಮೆಂಟ್ ಮಜವಾಗಿ ಇರುವ ಸಾಧ್ಯತೆಯಿದೆ. 'ಮ್ಯಾಕ್ಸ್' ಸಿನಿಮಾ ನೋಡಿದವರಿಗೆ ಅದು ಖಾತ್ರಿಯಾಗಿರುತ್ತದೆ.

ಸುದೀಪ್ ಜೊತೆ ಯೋಗಿ ಬಾಬು, ನವೀನ್ ಚಂದ್ರ, ದೀಪ್ಶಿಕಾ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ತಾರಾಗಣದಲ್ಲಿದ್ದಾರೆ. "ಹದ್ದು ಹರಡ್ಕೊಂಡು ಬರೋದು ಲೇಟ್ ಆಗ್ಬೋದು.. ಚಿರತೆ ಹೊಡ್ಕೊಂಡ ಬರೋದು ಲೇಟ್ ಆಗ್ಬೋದು.. ಆದ್ರೆ ಇದು ಮಾರ್ಕ್" ಎನ್ನುವ ಡೈಲಾಗ್ ಅಭಿಮಾನಿಗಳಿ ಸಖತ್ ಮಜಾ ಕೊಡುವಂತಿದೆ. ಇನ್ನು ಟ್ರೈಲರ್ ಕೊನೆಯಲ್ಲಿ ಬರುವ "ಧಮ್ ಹೊಡೆಯೋದು ಕಮ್ಮಿ ಮಾಡಬೇಕಲೈ" ಡೈಲಾಗ್ ಕೂಡ ಇಂಟ್ರೆಸ್ಟಿಂಗ್ ಆಗಿದೆ.

ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಟ್ರೈಲರ್ ಬಿಜಿಎಂ ಕಿಕ್ ಕೊಡುವಂತಿದೆ. ಸುದೀಪ್ ಹೇರ್‌ಸ್ಟೈಲ್ ಬದಲಿಸಿಕೊಂಡು ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ. ಟ್ರೈಲರ್‌ನಲ್ಲಿ 'ಮ್ಯಾಕ್ಸ್' ಛಾಯೆ ಕೂಡ ಕಾಣುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸುದೀಪ್ ಕೂಡ ಕೈ ಜೋಡಿಸಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಚೆನ್ನೈನಲ್ಲಿ ಸಾಕಷ್ಟು ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ 'ಸೈಕೋ ಸೈತಾನ್' ಸಾಂಗ್ ಬಂದು ಹಿಟ್ ಆಗಿದೆ. ಕನ್ನಡ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲಾ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಡಿಸೆಂಬರ್ 25ಕ್ಕೆ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಕೂಡ ತೆರೆಗೆ ಬರ್ತಿದೆ. ಎರಡೂ ಚಿತ್ರಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಸುಳಿವು ಸಿಕ್ಕಿದೆ.

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ '45' ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಕೆಆರ್‌ಜಿ ಸ್ಟುಡಿಯೋ ಸಂಸ್ಥೆ 'ಮಾರ್ಕ್' ಚಿತ್ರವನ್ನು ವಿತರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ 'ಮ್ಯಾಕ್ಸ್' ಚಿತ್ರವನ್ನು ಅದೇ ಸಂಸ್ಥೆ ಪ್ರೇಕ್ಷಕರ ಮುಂದೆ ತಂದಿತ್ತು.

More from Filmibeat

Read more about: sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X