For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!

  By Harshitha
  |

  ಕಾಲಿವುಡ್ ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಇತ್ತೀಚೆಗಷ್ಟೇ ಮುಗಿಯಿತು.

  ಇನ್ನು ಕೆಲವೇ ದಿನಗಳಲ್ಲಿ 'ಹೆಬ್ಬುಲಿ' ಚಿತ್ರದ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ಚಾಲನೆ ನೀಡಲಿದ್ದಾರೆ. ಈಗಾಗಲೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿದಂತೆ, 'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ ಹೊಸ ಅವತಾರ ತಾಳಲಿದ್ದಾರೆ. [ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ]

  'ಹೆಬ್ಬುಲಿ' ಚಿತ್ರಕ್ಕಾಗಿ ತಮ್ಮ ಉದ್ದದ ಸಿಲ್ಕಿ ಕೂದಲಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ ಕಿಚ್ಚ ಸುದೀಪ್. ಹೇಳಿಕೇಳಿ, 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ 'ಆರ್ಮಿ ಆಫೀಸರ್'. ಅಂದ್ಮೇಲೆ, ಮಿಲಿಟರಿ ಗೆಟಪ್ ನಲ್ಲಿ ಸುದೀಪ್ ಮಿಂಚ್ಬೇಕು. ಹೀಗಾಗಿ, ಆರ್ಮಿ ಕಟ್ ಮಾಡಿಸಿದ್ದಾರೆ 'ಅಭಿನಯ ಚಕ್ರವರ್ತಿ'.

  ತಮ್ಮ ಹೊಸ ಹೇರ್ ಸ್ಟೈಲ್ ನ ಕಿಚ್ಚ ಸುದೀಪ್ ಇನ್ನೂ ಬಹಿರಂಗ ಪಡಿಸಿಲ್ಲ. ಇತ್ತೀಚೆಗಷ್ಟೆ ನಡೆದ 'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭದಲ್ಲೂ ವುಲ್ಲನ್ ಕ್ಯಾಪ್ ತೊಟ್ಟು ಬಂದಿದ್ದ ಸುದೀಪ್, ತಮ್ಮ 'ಆರ್ಮಿ ಕಟ್' ಗುಟ್ಟನ್ನ ಬಿಟ್ಟುಕೊಡಲಿಲ್ಲ.

  ಹಾಗೇ, 'ನಾಗರಹಾವು' ಚಿತ್ರಕ್ಕೆ ಶುಭ ಹಾರೈಸಲು ಸುದೀಪ್ ಕ್ಲಿಕ್ ಮಾಡಿರುವ ಸೆಲ್ಫಿಯಲ್ಲೂ ಕ್ಯಾಪ್ ಹಾಕಿಕೊಂಡಿದ್ದಾರೆ. ಅಲ್ಲದೇ ಕುರುಚಲು ಗಡ್ಡ ಬಿಟ್ಟಿದ್ದಾರೆ. [ಅಭಿಮಾನಿಯಾಗಿ ವಿಷ್ಣುದಾದಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್]

  'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ 'ಆರ್ಮಿ ಕಟ್' ಮಾಡಿಸಿದ್ದಾರೆ ಅಂತ ಹೇಳೋಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ['ಹೆಬ್ಬುಲಿ'ಯಲ್ಲಿ ಸುದೀಪ್ ಗೆ ಎದುರಾಗಲಿರುವ ವಿಲನ್ ಇವರೇ]

  ಅಂದ್ಹಾಗೆ, 'ಹೆಬ್ಬುಲಿ' ಚಿತ್ರಕ್ಕೆ ಎಸ್.ಕೃಷ್ಣ ಆಕ್ಷನ್ ಕಟ್ ಹೇಳ್ತಿದ್ರೆ, ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್, ಸುದೀಪ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ. 'ಹೆಬ್ಬುಲಿ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

  English summary
  Kiccha Sudeep is sporting a shorter hair style for Kannada Movie 'Hebbuli', as the Actor will be portraying 'Army Officer' in the film directed by S.Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X