ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ ಕಿಚ್ಚ ಸುದೀಪ್ ಹೇಳಿದ್ದೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಫ್ಯಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸುದೀಪ್ ಮತ್ತು ತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.

Recommended Video

'ಫ್ಯಾಂಟಮ್' ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅಭಿಮಾನಿಗಳಿಗೆ ಹಬ್ಬ | Filmibeat Kannada

ಸುಮಾರು 3 ತಿಂಗಳಿಂದ ಸಿನಿಮಾತಂಡ ಹೈದರಾಬಾದ್ ನಲ್ಲಿ ಬೀಡುಬಿಟ್ಟಿತ್ತು. ಲಾಕ್ ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದ ಫ್ಯಾಂಟಮ್ ತಂಡ ಹೈದರಾಬಾದ್ ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದಿದ್ದಾರೆ.

ಈ ನಡುವೆ ಸುದೀಪ್ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಹೌದು, ಕಿಚ್ಚ ಸುದೀಪ್ ಮತ್ತೆ ಜಿಮ್ ನತ್ತ ಮುಖಮಾಡಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಬಹಿರಂಗ ಪಡಿಸಿದ್ದಾರೆ. ದೀರ್ಘ ಗ್ಯಾಪ್ ನ ಬಳಿಕ ಮತ್ತೆ ವರ್ಕೌಟ್ ಶುರುಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ.

Kiccha Sudeep syas starts workout again after a long gap

ಪೈಲ್ವಾನ್ ಸಿನಿಮಾಗಾಗಿ ದೇಹ ಹುರಿಗೊಳಿಸಲು ಪ್ರಾರಂಭ ಮಾಡಿದ್ದ ಕಿಚ್ಚ ಬಳಿಕ ವರ್ಕೌಟ್ ಹಾಗೆ ಮುಂದುವರೆಸಿಕೊಂಡು ಬಂದಿದ್ದಾರೆ. ಪೈಲ್ವಾನ್ ಗಾಗಿ ಕಟ್ಟು ಮಸ್ತಾದ ದೇಹ ಬೆಳೆಸಿರುವ ಸುದೀಪ್ ವರ್ಕೌಟ್ ಗೆ ಕೆಲವು ಸಮಯ ಬ್ರೇಕ್ ನೀಡಿದ್ದರು. ಇದೀಗ ಮತ್ತೆ ಶುರಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, 'ಒಳ್ಳೆಯ ಆಹಾರ, ಯೋಗ್ಯವಾದ ಜೀವನ ಶೈಲಿ, ಸ್ವಲ್ಪ ಶಿಸ್ತು. ದೀರ್ಘ ಅಂತರದ ಬಳಿಕ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ. ಸುಮಾರು ಒಂದು ತಿಂಗಳಿಂದ ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಿದ್ದು, ಎಲ್ಲರನ್ನು ಸುಸ್ತಾಗಿಸಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಎದುರು ನೋಡುತ್ತಿದ್ದೀವಿ. ಡಿಸೆಂಬರ್ 4ರಿಂದ ಚಿತ್ರೀಕರಣ ಪ್ರಾರಂಭ' ಎಂದು ಕಿಚ್ಚ ಹೇಳಿದ್ದಾರೆ.

ಹೈದರಾಬಾದ್ ಚಿತ್ರೀಕರಣಕ್ಕೆ ಬಾಯ್ ಹೇಳಿ ಬಂದಿರುವ ಕಿಚ್ಚ ಸುದೀಪ್ ಫ್ಯಾಂಟಮ್ ತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಕೇರಳಕಡೆ ಹೊರಟಿದೆ. ಡಿಸಂಬರ್ 4ರಿಂದ ಕೇರಳದಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ನಡೆಯಲಿದೆ.

ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಫ್ಯಾಂಟಮ್ ಸಿನಿಮಾವನ್ನು ಹೈದರಾಬಾದ್ ನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ, ಬಹುತೇಕ ಚಿತ್ರವನ್ನು ಸೆಟ್ ನಲ್ಲಿ ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ವಿಕ್ರಾಂತ್ ರೋಣಾ ಎನ್ನುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಕೇರಳದ ಚಿತ್ರೀಕರಣ ಮುಗಿಸಿ ಬೆಂಗಳೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ಸಹ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಬೆಂಗಳೂರಿನಲ್ಲಿ ಸೆಟ್ ಹಾಕಿ, ಚಿತ್ರದ ಬಹುನಿರೀಕ್ಷೆಯ ಹಾಡನ್ನು ಸೆರೆಹಿಡಿಯಲಿದೆ. ಡಿಸೆಂಬರ್ ನಲ್ಲಿ ಚಿತ್ರೀಕರಣ ಮುಗಿಸಿರುವ ಸಿನಿಮಾ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆ. ಫ್ಯಾಂಟಮ್ ಸಿನಿಮಾ ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

More from Filmibeat

English summary
Kannada Actor Kiccha Sudeep starts workout again after a long gap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X