ಮತ್ತೆ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಸುದೀಪ್; ತೆಲುಗು ನಿರ್ದೇಶಕ ಆಕ್ಷನ್ ಕಟ್

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಚಿತ್ರದಲ್ಲಿ ಮತ್ತೊಮ್ಮೆ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಸಿನಿಮಾ ತೆರೆಗೆ ಬರಬೇಕಿತ್ತು. ಆ ಬಳಿಕ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಸುದೀಪ್ ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಆಕ್ಷನ್ ಹೀರೊ ಆಗಿ ಅಬ್ಬರಿಸುವುದು ಹೆಚ್ಚಾಗಿದೆ. ಅವರ ಸಿನಿಮಾಗಳಲ್ಲಿ ಲವ್ ಟ್ರ್ಯಾಕ್ ಚೆನ್ನಾಗಿರುತಿತ್ತು. ಕೆಲ ಅಭಿಮಾನಿಗಳು ಕಿಚ್ಚನನ್ನು ಲವರ್ ಬಾಯ್ ಆಗಿ ಇಷ್ಟಪಟ್ಟಿದ್ದೇ ಹೆಚ್ಚು. ಕಮರ್ಷಿಯಲ್ ಸಿನಿಮಾಗಳಲ್ಲಿ ಕೂಡ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಸುದೀಪ್ ನಟಿಸಿ ಮೋಡಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕಿಚ್ಚನ ಸಿನಿಮಾಗಳಲ್ಲಿ ನಾಯಕಿಯರೇ ಇಲ್ಲದಂತಾಗಿದೆ.

Kiccha Sudeep Set for Romantic Comedy Comeback After Action-Packed Mark

'ಮ್ಯಾಕ್ಸ್' ಹಾಗೂ 'ಮಾರ್ಕ್' ಸಿನಿಮಾಗಳಲ್ಲಿ ನಾಯಕಿಯೇ ಇಲ್ಲ. ಬರೀ ಧಾಂ ಧೂಂ ಧಮಾಕ ಹೆಚ್ಚಾಗಿದೆ. ಹಾಗಾಗಿ ಬಹಳ ದಿನಗಳ ಬಳಿಕ ಒಂದು ರೊಮ್ಯಾಂಟಿಕ್ ಕಾಮಿಡಿ ಕಥೆಯನ್ನು ಸುದೀಪ್ ಫೈನಲ್ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಜೊತೆ ಜೊತೆಗೆ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಕೂಡ ನಡೆಯಲಿದೆ.

ಸುದೀಪ್ ಹೀರೊ ಆಗಿ ಒಂದಷ್ಟು ಸಿನಿಮಾಗಳು ಘೋಷಣೆ ಆಗಿದೆ. ಕೆಲ ನಿರ್ದೇಶಕರು ಕಥೆಗಳನ್ನು ಹೇಳಿದ್ದಾರೆ. ಅದರಲ್ಲಿ ಒಂದಷ್ಟು ಸುದೀಪ್ ಇಷ್ಟಪಟ್ಟಿದ್ದಾರೆ. 'ಯುವ' ಬಳಿಕ ಸಂತೋಷ್ ಆನಂದ್‌ರಾಮ್ ಕೂಡ ಕಿಚ್ಚನ ಜೊತೆ ಸಿನಿಮಾ ಮಾಡಬೇಕಿದೆ. ಇದೆಲ್ಲದರ ನಡುವೆ ತೆಲುಗು ನಿರ್ದೇಶಕ ಹೇಳಿದ ರೊಮ್ಯಾಂಟಿಕ್ ಕಾಮಿಡಿ ಸ್ಟೋರಿಯನ್ನು ಸಿನಿಮಾ ಮಾಡಲು ಸುದೀಪ್ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ತಂಡದಿಂದ ಕಥೆ ಬಂದಿದೆ. ಬಹಳ ವರ್ಷಗಳ ಬಳಿಕ ಇಂತಾದೊಂದು ಕಥೆ ಕೇಳ್ದೆ. ಬಹಳ ಚೆನ್ನಾಗಿದೆ, ಸ್ಟೈಲಿಶ್ ಆಗಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ. ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ಗೆದ್ದವರು ಸುಕುಮಾರ್. ಬಳಿಕ ಮಾಸ್ ಸಿನಿಮಾಗಳತ್ತ ಮುಖ ಮಾಡಿದ್ದರು. ಹಾಗಾಗಿ ಅವರ ಗರಡಿಯಲ್ಲಿ ಪಳಗಿದವರು ಕಿಚ್ಚನಿಗೆ ಆಕ್ಷನ್ ಕಟ್ ಹೇಳುವ ನಿರೀಕ್ಷೆಯಿದೆ. ಕನ್ನಡ ನಿರ್ಮಾಪಕರೇ ಹಣ ಹೂಡಲಿದ್ದಾರೆ. ಪ್ರೇಮ್ ಜೊತೆ ಒಂದು ಮೈಥಾಲಜಿ ಸ್ಟೋರಿ ಲೈನ್ ಹೇಳಿದ್ದಾರೆ. ಎಪಿ ಅರ್ಜುನ್ ಜೊತೆಗೂ ಸಿನಿಮಾ ಮಾಡ್ತಿದ್ದೀನಿ ಎಂದು ಸುದೀಪ್ ಹೇಳಿದ್ದಾರೆ.

ಮುಂದಿನ ವರ್ಷ ಸಾಧ್ಯವಾದರೆ 2 ಸಿನಿಮಾ ಮಾಡುವುದಾಗಿ ಸುದೀಪ್ ಹೇಳಿದ್ದಾರೆ. ಮುಂದಿನ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಮತ್ತೊಂದು ಸಿನಿಮಾ ಬರಬಹುದು, ಅದಕ್ಕೂ ಮುನ್ನ ಇನ್ನೊಂದು ಸಿನಿಮಾ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ಸುದೀಪ್ ಹೇಳಿದ್ದಾರೆ.

ತಮ್ಮದೇ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡಲು ಸುದೀಪ್ ತಯಾರಿ ನಡೆಸಿದ್ದಾರೆ. ಅದು ಯಾವಾಗ ಎನ್ನುವುದು ಖಚಿತವಾಗಿಲ್ಲ. ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಒಂದು ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ಬಿಗ್‌ಬಾಸ್, ಸಿಸಿಎಲ್ ಕ್ರಿಕೆಟ್ ಟೂರ್ನಿ, ಕೆಸಿಸಿ ಕ್ರಿಕೆಟ್ ಟೂರ್ನಿಗಳಲ್ಲಿ ಕೂಡ ಸುದೀಪ್ ಭಾಗವಹಿಸುತ್ತಿದ್ದಾರೆ. ಅದೆಲ್ಲದರ ನಡುವೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮ್ಯಾಕ್ಸ್' ಆಗಿ ಅಬ್ಬರಿಸಿದ್ದ ಸುದೀಪ್ ಈ ವರ್ಷ 'ಮಾರ್ಕ್' ಚಿತ್ರ ತೆರೆಗೆ ತರುತ್ತಿದ್ದಾರೆ. 6 ತಿಂಗಳ ಹಿಂದೆಯಷ್ಟೆ ಡಿಸೆಂಬರ್ 25ಕ್ಕೆ ಸಿನಿಮಾ ರಿಲೀಸ್ ಮಾಡ್ತೀವಿ ಎಂದಿದ್ದರು. ಹೇಳಿದಂತೆಯೇ ಬೇಗ ಚಿತ್ರೀಕರಣ ಮುಗಿಸಿ, ಪ್ರಮೋಷನ್ ಮಾಡಿ ಸಿನಿಮಾ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X