ಅಕ್ಕನ ಮಗನ ಮದುವೆ ಸಮಾರಂಭದಲ್ಲಿ ಕಿಚ್ಚ; ಮಗಳು ಸಾನ್ವಿಗೂ ಹಳದಿ ಹಚ್ಚಿದ ಬಾದ್‌ಷಾ ಫೋಟೋ ವೈರಲ್
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಸದಾ ತಮ್ಮ ವೃತ್ತಿ ಬದುಕಿನ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಆದರೆ ಕೆಲವೊಮ್ಮೆ ವೈಯಕ್ತಿಕ ಜೀವನದ ಅಪರೂಪದ ಕ್ಷಣಗಳು ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತವೆ. ಸದ್ಯಕ್ಕೀಗ ಕಿಚ್ಚ ಸುದೀಪ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಸ್ಯಾಂಡಲ್‌ವುಡ್ ಬಾದ್‌ಷಾ ಸುದೀಪ್ ಅಕ್ಕ ಸುರೇಖಾ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಸಂಪ್ರದಾಯದಂತೆ ಹಳದಿ ಶಾಸ್ತ್ರ ನೆರವೇರಿಸಲಾಗಿದೆ. ಈ ಸಮಾರಂಭದ ಸಂಭ್ರಮದ ಕ್ಷಣಗಳನ್ನು ಸುದೀಪ್ ಪುತ್ರಿ ಸಾನ್ವಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಪುತ್ರಿಗೂ ಅರಿಶಿಣ ಹಚ್ಚಿ ಸಂಭ್ರಮಿಸಿದ ಕ್ಷಣಗಳು ಕ್ಯೂಟ್ ಆಗಿವೆ.

ಕಿಚ್ಚನ ಮನೆಯಲ್ಲಿ ಸಂಭ್ರಮ
ಕಿಚ್ಚ ಸುದೀಪ್ ಕುಟುಂಬದ ಸದಸ್ಯರೆಲ್ಲರೂ ಮದುವೆ ಸಂಭ್ರಮದಲ್ಲಿ ಒಟ್ಟಾಗಿ ಸೇರಿಕೊಂಡಿದ್ದಾರೆ. ಸುದೀಪ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಕುಟುಂಬದ ಸಂಭ್ರಮಗಳಲ್ಲಿ ಭಾಗಿಯಾಗುತ್ತಾರೆ. ನಟನೊಬ್ಬ ಸ್ಟಾರ್‌ಗಿಂತ ಮೊದಲು ತಾನೊಬ್ಬ ಫ್ಯಾಮಿಲಿ ಮ್ಯಾನ್ ಅನ್ನೋದನ್ನು ಅದೆಷ್ಟೋ ಬಾರಿ ಸಾಬೀತುಪಡಿಸಿದ್ದಾರೆ. ಈ ಆಪ್ತ, ಸರಳ ಹಾಗೂ ಸಂಭ್ರಮದ ಕ್ಷಣಗಳನ್ನು ಸುದೀಪ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಮದುವೆ ಸಂಭ್ರಮದಲ್ಲಿ ಕಿಚ್ಚನ ಕುಟುಂಬ
ತಾರಿಣಿ ಎಂಬುವವರ ಜೊತೆ ಕಿಚ್ಚ ಸುದೀಪ್ ಅಕ್ಕನ ಮಗ ಶರಣ್ ಸುರೇಶ್ ಮದುವೆ ನಡೆಯುತ್ತಿದೆ. ನಾಳೆ ಅಂದರೆ, ಡಿಸೆಂಬರ್ 4ರಂದು ವಿವಾಹ ಜರುಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಹಳದಿ ಶಾಸ್ತ್ರವು ನಡೆದಿದೆ. ಸುದೀಪ್ ಸಿನಿಮಾ, ಬಿಗ್ ಬಾಸ್, ಸಿಸಿಎಲ್ ಪ್ರಾಕ್ಟೀಸ್‌ನಿಂದ ಕೊಂಚ ಬಿಡುವು ಮಾಡಿಕೊಂಡು ಕುಟುಂಬದ ಈ ಪ್ರಮುಖ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಿಚ್ಚನ ಜೊತೆ ಪತ್ನಿ ಪ್ರಿಯಾ ಸುದೀಪ್ ಅವರು ಈ ಎಲ್ಲ ಕಾರ್ಯಕ್ರಮಗಳನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಸುದೀಪ್ ಕುಟುಂಬದ ಈ ಸರಳ ಹಾಗೂ ಸಂಪ್ರದಾಯಬದ್ಧ ಜೀವನಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ವೃತ್ತಿಪರ ಬದುಕಿನಲ್ಲಿ ಬಿಡುವಿಲ್ಲದ ಸುದೀಪ್
ಒಂದು ಕಡೆ ವೈಯಕ್ತಿಕ ಜೀವನದಲ್ಲಿ ಕುಟುಂಬದ ಸಮಾರಂಭಗಳ ಸಂಭ್ರಮವಿದ್ದರೆ ಮತ್ತೊಂದು ಕಡೆ ಕಿಚ್ಚ ಸುದೀಪ್ ವೃತ್ತಿ ಬದುಕು ಯಶಸ್ಸಿನ ಉತ್ತುಂಗದಲ್ಲಿದೆ. ಪ್ರಸ್ತುತ ಸುದೀಪ್ ತಮ್ಮ ಬಹುನಿರೀಕ್ಷಿತ 'ಮಾರ್ಕ್' ಬಿಡುಗಡೆ ಬಗ್ಗೆ ಗಮನ ಹರಿಸಿದ್ದಾರೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಿರುವ 'ಮಾರ್ಕ್' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮಾಸ್ ಎಂಟರ್ಟೈನರ್ ಸಿನಿಮಾದ ಕುರಿತು ಭಾರಿ ನಿರೀಕ್ಷೆಗಳಿದ್ದು, ಸುದೀಪ್ ಪಾತ್ರ, ಅವರ ಹೊಸ ಲುಕ್ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಇದರೊಂದಿಗೆ ಅವರು ಇತರ ನಿರ್ಮಾಣ ಸಂಸ್ಥೆಯಿಂದ ಹೊಸ ಪ್ರಾಜೆಕ್ಟ್‌ಗಳು ಲಾಂಚ್ ಆಗುತ್ತಿವೆ. ವೀಕೆಂಡ್‌ನಲ್ಲಿ ಬಿಗ್‌ಬಾಸ್ ನಿರೂಪಣೆ, ಸಿಸಿಎಲ್ ಪ್ರಾಕ್ಟೀಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಸಿನಿಮಾ ತಾರೆಯ ಕೌಟುಂಬಿಕ ಮೌಲ್ಯಗಳು
ಸಾಮಾನ್ಯವಾಗಿ ಸ್ಟಾರ್ ನಟರು ತಮ್ಮ ವೈಯಕ್ತಿಕ ಬದುಕನ್ನು ತೆರೆಮರೆಯಲ್ಲಿ ಇಡಲು ಬಯಸುತ್ತಾರೆ. ಆದರೆ ಸುದೀಪ್ ಕುಟುಂಬ ಮತ್ತು ಸಂಪ್ರದಾಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ಪುತ್ರಿ ಸಾನ್ವಿ ಸುದೀಪ್ ಅವರು ತಮ್ಮದೇ ಆದ ಶೈಲಿಯಲ್ಲಿ ಇನ್ಸ್ಟಾಗ್ರಾಂ ಮೂಲಕ ಕೌಟುಂಬಿಕ ಕ್ಷಣಗಳನ್ನು ಹಂಚಿಕೊಳ್ಳುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಫೋಟೋ ತಾರೆಯರ ಲೋಕದ ರಿಯಲ್ ಲೈಫ್ ಅನ್ನು ತೆರೆದಿಟ್ಟಿದೆ.


Click it and Unblock the Notifications











