For Quick Alerts
  ALLOW NOTIFICATIONS  
  For Daily Alerts

  ನನ್ನಲ್ಲೂ ಕೊರತೆಗಳಿವೆ ಎಂದು ಅಭಿಮಾನಿಗೆ ಕಿಚ್ಚ ಹೇಳಿದ್ಯಾಕೆ?

  By Naveen
  |
  ನನ್ನಲ್ಲೂ ಕೊರತೆಗಳಿವೆ ಅಂತ ಸುದೀಪ್ ಹೇಳಿದ್ಯಾಕೆ...!? | Filmibeat Kannada

  ನಟ ಸುದೀಪ್ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ. ಸುದೀಪ್ ಅವರ ಅನೇಕ ಅಭಿಮಾನಿಗಳು ಅವರನ್ನು ದೇವರಂತೆ ಆರಾಧಿಸುತ್ತಾರೆ. ಆ ರೀತಿ ಒಬ್ಬ ಸುದೀಪ್ ಅಭಿಮಾನಿ ಅವರ ಫೋಟೋವನ್ನು ದೇವರಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾನೆ.

  ಕಿಚ್ಚನ ಅಭಿಮಾನಿ ತನ್ನ ಮನೆಯ ದೇವರ ಕೋಣೆಯಲ್ಲಿ ದೇವರ ರೀತಿ ಸುದೀಪ್ ಅವರ ಸಿನಿಮಾಗಳ ಪೋಸ್ಟರ್ ಗಳನ್ನು ಇಟ್ಟು ಪೂಜೆ ಮಾಡುತ್ತಿದ್ದ. ಕಿಚ್ಚನ ಈ ಅಭಿಮಾನಿ 'ಹೆಬ್ಬುಲಿ', 'ದಿ ವಿಲನ್', 'ರನ್ನ' ಚಿತ್ರದ ಪೋಟೋಗಳ ಜೊತೆಗೆ ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾದ ಪೋಸ್ಟರ್ ಗೆ ಕೂಡ ದಿನ ನಮಸ್ಕಾರ ಮಾಡುತ್ತಿದ್ದ. ಇಂತಹ ಅಭಿಮಾನಿಯ ಅಭಿಮಾನವನ್ನು ಕುರಿತು ಸುದೀಪ್ ಈಗ ಟ್ವೀಟ್ ಮಾಡಿದ್ದಾರೆ.

  'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ? 'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ?

  ''ನಿಮ್ಮ ಮನಸಿನಲ್ಲಿ ಕೊಟ್ಟಿರುವ ಸ್ಥಾನ ಸಾಕು. ನನ್ನನ್ನು ದೇವರ ಪಕ್ಕದಲ್ಲಿ ಇಡಬೇಡಿ. ನನ್ನಲ್ಲೂ ಕೊರತೆಗಳು ಇವೆ. ನಿಮ್ಮ ಈ ಪ್ರೀತಿಗೆ ಚಿರಋಣಿ'' ಎಂದು ಅಭಿಮಾನಿಗೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

  ಸುದೀಪ್ ಅಭಿಮಾನಿಯ ರೀತಿ ಇತ್ತೀಚಿಗಷ್ಟೆ ಪಕೀರಪ್ಪ ಎಂಬ ಶಿವಣ್ಣ ಅವರ ಅಭಿಮಾನಿ 500 ಕಿಲೋ ಮೀಟರ್ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಪ್ರಯಾಣ ಮಾಡಿ ಎಲ್ಲರಿಗು ಆಶ್ಚರ್ಯ ಪಡುವಂತೆ ಮಾಡಿದ್ದ.

  English summary
  Kannada actor Kiccha sudeep kiccha sudeep spoke about his fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X