ಕೋಟಿಗೊಬ್ಬ3 ಚಿತ್ರಕ್ಕೆ ಮಹೂರ್ತ ಫಿಕ್ಸ್ ಮತ್ತೆ ಲೇಖನಿ ಹಿಡಿದ ಕಿಚ್ಚ
ಕಿಚ್ಚ ಸುದೀಪ್ ಈ ವರ್ಷ ಸಿನಿಮಾರಂಗದಲ್ಲಿ ಬ್ಯುಸಿ ಆಗಲಿದ್ದಾರೆ. ಕಳೆದ ವರ್ಷ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸುದೀಪ್ ಈಗ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಸುದೀಪ್ ಅವರೇ ಹೇಳಿರುವಂತೆ. ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ, ಕೋಟಿಗೊಬ್ಬ3, ಹಾಲಿವುಡ್ ಸಿನಿಮಾ ಹಾಗೂ ಪೈಲ್ವಾನ್ ಚಿತ್ರಗಳಲ್ಲಿ ಅಭಿನಯಿಸುತ್ತಾರೆ.
ಕಿಚ್ಚ ಸುದೀಪ್ ಅಧಿಕೃತವಾಗಿ ಹೇಳದೇ ಇರುವ ಎರಡು ಮೂರು ಚಿತ್ರಗಳಲ್ಲಿಯೂ ಸುದೀಪ್ ಆಕ್ಟ್ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇವುಗಳ ಮಧ್ಯೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾ ಮಹೂರ್ತ ದಿನಾಂಕ ಫಿಕ್ಸ್ ಆಗಿದೆ.
ಸೂರಪ್ಪ ಬಾಬು ನಿರ್ಮಾಣದಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡುತ್ತಿದ್ದು ಸಾಕಷ್ಟು ದಿನಗಳ ನಂತರ ಕಿಚ್ಚ ಮತ್ತೆ ಕೈ ನಲ್ಲಿ ಲೇಖನಿ ಹಿಡಿದಿದ್ದಾರೆ. ಕೋಟಿಗೊಬ್ಬ3 ಚಿತ್ರಕ್ಕೆ ಕಥೆ ಬರೆಯುವ ಮೂಲಕ ಮತ್ತೆ ಸುದೀಪ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಹಾಗಾದರೆ ಕಿಚ್ಚನ ಹೊಸ ಸಿನಿಮಾ ಸೆಟ್ಟೇರುವುದು ಯಾವಾಗ? ಕೋಟಿಗೊಬ್ಬ3 ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಿಚ್ಚನ ಹೊಸ ಚಿತ್ರಕ್ಕೆ ಮಹೂರ್ತ ಫಿಕ್ಸ್
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾ ಮಹೂರ್ತ ದಿನಾಂಕ ನಿಗದಿ ಆಗಿದೆ. ಮಾರ್ಚ್ 2 ರಂದು ಚಿತ್ರದ ಮಹೂರ್ತ ನಡೆಯಲಿದೆ ಎಂದು ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಕೋಟಿಗೊಬ್ಬನಿಗೆ ಸುದೀಪ್ ಕಥೆಗಾರ
ಕೋಟಿಗೊಬ್ಬ3 ಚಿತ್ರಕ್ಕೆ ಸುದೀಪ್ ಕಥೆಯನ್ನ ಬರೆದಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಹಾಗೂ ಮಾಣಿಕ್ಯ ಸಿನಿಮಾದ ನಂತರ ಕಿಚ್ಚ ಮತ್ತೆ ಲೇಖನಿ ಹಿಡಿದಿದ್ದಾರೆ.

ಕಿಚ್ಚನಿಗೆ ಶಿವ ಕಾರ್ತಿಕ್ ಆಕ್ಷನ್ ಕಟ್
ಕೋಟಿಗೊಬ್ಬ3 ಸಿನಿಮಾವನ್ನ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದು ಶಿವ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ಚಿತ್ರದ ನಂತರ ಮತ್ತೆ ಸೂರಪ್ಪ ಬಾಬು ಕಿಚ್ಚ ಒಂದಾಗಿದ್ದಾರೆ.

ಕೋಟಿಗೊಬ್ಬ3 ಎಂಟರ್ಟೈನ್ಮೆಂಟ್ ಚಿತ್ರ
ಮಹೂರ್ತ ವಿಚಾರವನ್ನ ಮಾತ್ರ ಬಿಟ್ಟುಕೊಟ್ಟಿರುವ ನಿರ್ಮಾಪಕರು ಚಿತ್ರೀಕರಣ ಹಾಗೂ ಯಾರೆಲ್ಲಾ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವುದನ್ನ ಬಿಟ್ಟುಕೊಟ್ಟಿಲ್ಲ. ಮಹೂರ್ತದ ನಂತರ ಮಿಕ್ಕ ವಿಚಾರಗಳನ್ನ ಹಂಚಿಕೊಳ್ಳಲಿದೆ ಚಿತ್ರತಂಡ


Click it and Unblock the Notifications











