For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಕೋಟಿಗೊಬ್ಬ3 ಚಿತ್ರಕ್ಕೆ ಅದ್ದೂರಿ ಚಾಲನೆ

  By Pavithra
  |
  ಕಿಚ್ಚನ ಕೋಟಿಗೊಬ್ಬ3 ಚಿತ್ರಕ್ಕೆ ಅದ್ದೂರಿ ಚಾಲನೆ | Filmibeat kannada

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ ವರ್ಷ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡಿದ್ದ ಕೋಟಿಗೊಬ್ಬ2 ಸಿನಿಮಾದ ನಂತ್ರ ಅದೇ ನಿರ್ಮಾಪಕರು ಹಾಗೂ ಕಿಚ್ಚ ಸೇರಿ ಕೋಟಿಗೊಬ್ಬ3 ಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ.

  ಸಾಕಷ್ಟು ವಿಚಾರಗಳಿಂದ ಈಗಾಗಲೇ ಭಾರಿ ಸುದ್ದಿ ಮಾಡಿರುವ ಕೋಟಿಗೊಬ್ಬ3 ಸಿನಿಮಾ ಆರಂಭದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿನ್ನೆಯಿಂದಲೇ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  ಅಭಿಮಾನಿಗಳ ಬಹುದಿನದ ಕನಸನ್ನು ನನಸು ಮಾಡಿದ ಕಿಚ್ಚಅಭಿಮಾನಿಗಳ ಬಹುದಿನದ ಕನಸನ್ನು ನನಸು ಮಾಡಿದ ಕಿಚ್ಚ

  ಭಾರಿ ಚರ್ಚೆಗೆ ಕಾರಣ ಮಾಡಿರುವ ಕೋಟಿಗೊಬ್ಬ3 ಸಿನಿಮಾ ಮಹೂರ್ತ ನಡೆದದ್ದು ಎಲ್ಲಿ? ಚಿತ್ರದ ಶೂಟಿಂಗ್ ಯಾವಾಗ ಆರಂಭ ಆಗುತ್ತೆ? ಪೂಜೆಯಲ್ಲಿ ಯಾರೆಲ್ಲಾ ಭಾಗಿ ಆಗಿದ್ದರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಶುರುವಾಯ್ತು ಕೋಟಿಗೊಬ್ಬ3 ಸಿನಿಮಾ '

  ಶುರುವಾಯ್ತು ಕೋಟಿಗೊಬ್ಬ3 ಸಿನಿಮಾ '

  ಕಿಚ್ಚ ಸುದೀಲ್ ಅಭಿನಯಿಸುತ್ತಿರುವ ಕೋಟಿಗೊಬ್ಬ3 ಸಿನಿಮಾ ಮಹೂರ್ತ ಇಂದು ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಪೂಜೆಯಲ್ಲಿ ಸುದೀಪ್ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಭಾಗಿ ಆಗಿದ್ದಾರೆ.

  ಕೋಟಿಗೊಬ್ಬ3 ನಿಗೆ ಕುಟುಂಬದ ಹಾರೈಕೆ

  ಕೋಟಿಗೊಬ್ಬ3 ನಿಗೆ ಕುಟುಂಬದ ಹಾರೈಕೆ

  ಕೋಟಿಗೊಬ್ಬ3 ಸಿನಿಮಾ ಮಹೂರ್ತದಲ್ಲಿ ಸುದೀಪ್ ಅವರ ತಂದೆ ಹಾಗೂ ಪತ್ನಿ ಭಾಗಿ ಆಗಿದ್ದರು. ಚಿತ್ರಕ್ಕೆ ಸುದೀಪ್ ತಂದೆ ಕ್ಯಾಮೆರಾ ಸ್ವಚ್ ಆನ್ ಮಾಡಿದ್ರೆ ಪತ್ನಿ ಪ್ರಿಯಾ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಕೋರಿದರು.

  ಚಿತ್ರಕ್ಕೆ ಕ್ಲಾಪ್ ಮಾಡಿದ ಮುನಿರತ್ನ

  ಚಿತ್ರಕ್ಕೆ ಕ್ಲಾಪ್ ಮಾಡಿದ ಮುನಿರತ್ನ

  ಸುದೀಪ್ ಫ್ಯಾಮಿಲಿ ಜೊತೆಯಲ್ಲಿ ಚಿತ್ರರಂಗದ ಕಡೆಯಿಂದ ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್ , ಸಿ ಆರ್ ಮನೋಹರ್ ಇನ್ನೂ ಅನೇಕರು ಭಾಗಿ ಆಗಿದ್ದರು.

  ಹೊಸ ನಿರ್ದೇಶಕರಿಗೆ ಅವಕಾಶ

  ಹೊಸ ನಿರ್ದೇಶಕರಿಗೆ ಅವಕಾಶ

  ನವ ನಿರ್ದೇಶಕ ಶಿವ ಕಾರ್ತಿಕ್ ಕೋಟಿಗೊಬ್ಬ3 ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ ಈ ತಿಂಗಳ ಅಂತ್ಯಕ್ಕೆ ಸಿನಿಮಾ ಚಿತ್ರೀಕರಣ ಶುರು ಮಾಡಬೇಕೆಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

  'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ 'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

  English summary
  Kannada actor Kiccha Sudeep starrer Kotigobba 3 film Shooting start from today. Shiva Karthik is directing Kotigobba 3 film, Surapappabu is producing cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X