ಸುದೀಪ್ 'ಕೋಟಿಗೊಬ್ಬ-3' ಬಿಡುಗಡೆ ತಡವಾಗುತ್ತಿರುವುದೇಕೆ?

ಕಿಚ್ಚ ಸುದೀಪ್ ನಟನೆಯ ಎರಡು ಬಹುನಿರೀಕ್ಷೆಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಕೋಟಿಗೊಬ್ಬ-3 ಸಿನಿಮಾ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿ ನಿಂತಿದೆ. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಬಿಡುಗಡೆ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ.

ಇನ್ನೇನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕೋಟಿಗೊಬ್ಬನ ದರ್ಶನ ಆಗಲಿದೆ ಎಂದು ಕಾದುಕುಳಿತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಆದರೆ ಕೋಟಿಗೊಬ್ಬ-3 ಬಿಡುಗಡೆಗೂ ಮುನ್ನ ಸುದೀಪ್ ನಟನೆಯ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ, ಕೋಟಿಗೊಬ್ಬ-3 ರಿಲೀಸ್ ತಡವಾಗಲಿದೆ ಎನ್ನುವ ಮಾತುಕೇಳಿಬರುತ್ತಿದೆ. ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದರೂ ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ ಧೈರ್ಯವಾಗಿ ಘೋಷಣೆ ಮಾಡಿದೆ. ಆದರೆ ಸದ್ಯ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ-3 ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

Kiccha Sudeep starrer kotigobba-3 may release delayed

ಸದ್ಯ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತೆ ನಿಯಮ ಸಡಿಲಿಕೆ ಆಗುವುದು ತಡವಾಗುವ ಸಾಧ್ಯತೆ ಇದೆ. ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ನೀಡುವವರೆಗೂ ಕೋಟಿಗೊಬ್ಬ-3 ಬಿಡುಗಡೆ ಮಾಡದಿರಲು ಸಿನಿಮಾತಂಡ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಕೋಟಿಗೊಬ್ಬ-3ಗಿಂತ ಮೊದಲು ವಿಕ್ರಾಂತ್ ರೋಣ ತೆರೆಗೆ ಬರುವ ಸಾಧ್ಯತೆ ಇದೆ.

ಕೋಟಿಗೊಬ್ಬ-3 ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಶಿವ ಕಾರ್ತಿಕ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಸದ್ಯ ಕೋಟಿಗೊಬ್ಬನ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಸಂತಸ ಹೆಚ್ಚಿಸಿದೆ.

Recommended Video

ಕೋಟಿಗೊಬ್ಬ ಪೋಸ್ಟರ್ ಡಿಸೈನರ್‌ನ ಮತ್ತೆ ಕರೆ ತರ್ತಾರಾ ಕಿಚ್ಚ ಸುದೀಪ್ | Filmibeat kannada

More from Filmibeat

English summary
Kiccha Sudeep starrer kotigobba-3 may release delayed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X