ದೀಪಾವಳಿಗೆ ಸುದೀಪ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಹೆಚ್ಚಿನ ಭಾಗ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದ್ದೂರಿ ಸೆಟ್ ನಿರ್ಮಾಣ ಮಾಡಿ, ಫ್ಯಾಂಟಮ್ ಲೋಕನ್ನು ಸೃಷ್ಟಿಸಿ ಚಿತ್ರೀಕರಣ ಮಾಡಲಾಗಿದೆ.

ಈ ಸಿನಿಮಾ ಜೊತೆಗೆ ಕಿಚ್ಚ ಸುದೀಪ್ ಕೋಟಿಗೊಬ್ಬ-3 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ತಡವಾಗಿದೆ. ಆದೀಗ ಕೋಟಿಗೊಬ್ಬ-3 ತಂಡ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಮುಂದೆ ಓದಿ..

ನವೆಂಬರ್ 15ಕ್ಕೆ ಕೋಟಿಗೊಬ್ಬ-3 ಸಾಂಗ್ ರಿಲೀಸ್

ನವೆಂಬರ್ 15ಕ್ಕೆ ಕೋಟಿಗೊಬ್ಬ-3 ಸಾಂಗ್ ರಿಲೀಸ್

ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೋಟಿಗೊಬ್ಬ-3 ಸಿನಿಮಾದ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್ 15 ದೀಪಾವಳಿಗೆ ಕೋಟಿಗೊಬ್ಬ-3 ಸಿನಿಮಾದ ಬಹುನಿರೀಕ್ಷೆಯ ಹಾಡು ರಿಲೀಸ್ ಆಗುತ್ತಿದೆ.

ಸುದೀಪ್ ಜೊತೆ ಆಶಿಕಾ ಡ್ಯಾನ್ಸ್

ಸುದೀಪ್ ಜೊತೆ ಆಶಿಕಾ ಡ್ಯಾನ್ಸ್

ಈ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆ ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿಗೆ, ಆಶಿಕಾ ಸುದೀಪ್ ಜೊತೆ ತೆರೆಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಆಶಿಕಾ ಇದೇ ಮೊದಲ ಬಾರಿಗೆ ದೊಡ್ಡ ನಟನ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಆಶಿಕಾ ಚಿತ್ರದ ಇದೊಂದೆ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

ಅದ್ದೂರಿ ಸೆಟ್, ಅರ್ಜುನ್ ಜನ್ಯ ಸಂಗೀತ

ಅದ್ದೂರಿ ಸೆಟ್, ಅರ್ಜುನ್ ಜನ್ಯ ಸಂಗೀತ

'ಪಟಾಕಿ ಪೋರೀಯೋ..' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ನಟ ಅರುಣ್ ಸಾಗರ್ ಸೆಟ್ ನಿರ್ಮಾಣ ಮಾಡಿದ್ದಾರಂತೆ. ಸದ್ಯ ದೀಪಾವಳಿಗೆ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ಕೋಟಿಗೊಬ್ಬ-3 ತಂಡ, ಮುಂದಿನ ವರ್ಷ 2021 ಜನವರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ.

Recommended Video

ದುಬಾರಿ ಯಾಗಿ ಬರಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | Dhruva Sarja | Nanda kishore | Chandan Shetty
ಕಿಚ್ಚನಿಗೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ

ಕಿಚ್ಚನಿಗೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ

ಈ ಸಿನಿಮಾದಲ್ಲಿ ಸುದೀಪ್ ಗೆ ಜೋಡಿಯಾಗಿ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಇನ್ನೂ ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಅಫ್ತಬ್ ಶಿವದಸನಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಶ್ರದ್ಧಾ ದಾಸ್ ಹಾಗೂ ಸುಧಾಂಶು ಪಾಂಡೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

More from Filmibeat

English summary
Kiccha Sudeep starrer Kotigobba-3 song will release on Deepavali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X