»   » ಇದೇ ವರ್ಷ ಶುರು ಆಗಲಿದೆ ಸುದೀಪ್ 'ಕೋಟಿಗೊಬ್ಬ-3'

ಇದೇ ವರ್ಷ ಶುರು ಆಗಲಿದೆ ಸುದೀಪ್ 'ಕೋಟಿಗೊಬ್ಬ-3'

Posted By:
Subscribe to Filmibeat Kannada

2001 ರಲ್ಲಿ ತೆರೆಕಂಡ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. 2016 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರ ಕೂಡ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ 'ಕೋಟಿಗೊಬ್ಬ-3' ಸಿನಿಮಾ ಸೆಟ್ಟೇರುವ ಮುನ್ನವೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ.

'ದಿ ವಿಲನ್' ಚಿತ್ರದಲ್ಲಿ ಬಿಜಿಯಾಗಿರುವ ಸುದೀಪ್ ಇದೇ ವರ್ಷದಲ್ಲಿ 'ಕೋಟಿಗೊಬ್ಬ-3' ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಹಾಗಂತ ಸ್ವತಃ ಸುದೀಪ್ ಅವರೇ ಟ್ವಿಟ್ಟರ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

''ಕೋಟಿಗೊಬ್ಬ-3' ಸಿನಿಮಾ 2018 ರ ಮೊದಲಾರ್ಧದಲ್ಲಿ ಶುರು ಆಗಿದೆ. ನಿರ್ದೇಶಕ ಕಾರ್ತಿಕ್ ಹಾಗೂ ಸೂರಪ್ಪ ಬಾಬು ಉತ್ಸಾಹ ಕಂಡು ಖುಷಿ ಆಗಿದೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇನ್ನೂ, ಇದೇ ತಿಂಗಳ ಅಂತ್ಯದಲ್ಲಿ ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದ ಶೂಟಿಂಗ್ ಶುರು ಆಗಲಿದೆ ಎಂದು ಸಹ ಸುದೀಪ್ ಟ್ವೀಟ್ ಮಾಡಿದ್ದಾರೆ.

Kiccha Sudeep starrer Kotigobba 3 to take off by first half of 2018

'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ!

ಅಂದ್ಹಾಗೆ, ಸದ್ಯ ಸುದೀಪ್ ಕೈಯಲ್ಲಿ 'ದಿ ವಿಲನ್', 'ಪೈಲ್ವಾನ್', 'ಅಂಬಿ ನಿಂಗ್ ವಯಸ್ಸಾಯ್ತು', 'ಕೋಟಿಗೊಬ್ಬ-3' ಚಿತ್ರಗಳಿವೆ. ಈ ವರ್ಷ ಪೂರ್ತಿ ಸುದೀಪ್ ಸಿಕ್ಕಾಪಟ್ಟೆ ಬಿಜಿ.

English summary
Kiccha Sudeep starrer Kotigobba 3 to take off by first half of 2018

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X