ಲಹರಿ ಮ್ಯೂಸಿಕ್ ಪಾಲಾದ 'ಪೈಲ್ವಾನ್' ಆಡಿಯೋ ಹಕ್ಕು

Recommended Video

Pailvan Movie: ಲಹರಿ ಮ್ಯೂಸಿಕ್ ಪಾಲಾದ 'ಪೈಲ್ವಾನ್' ಆಡಿಯೋ ಹಕ್ಕು

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ಯಾವಗ ತೆರೆಗೆ ಬರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ವರಮಹಾಲಕ್ಷ್ಮಿಗೆ ಚಿತ್ರ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಆಗಸ್ಟ್ 29ಕ್ಕೆ ಚಿತ್ರ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿದೆ.

ಹುಟ್ಟುಹಬ್ಬದ ಸಮಯದಲ್ಲಿ 'ಪೈಲ್ವಾನ್' ತೆರೆಗೆ ಬಂದರೆ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ. ಇದರ ಜೊತೆಗೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿದೆ. ಖ್ಯಾತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್ ಪೈಲ್ವಾನ್ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

ಈ ಬಗ್ಗೆ ಲಹರಿ ಆಡಿಯೋ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಜೊತೆಗೆ ಅಭಿನಯ ಚಕ್ರವರ್ತಿ ಕೂಡ ಚಿತ್ರದ ಆಡಿಯೋ ಹಕ್ಕು ಉತ್ತಮ ಮೊತ್ತಕ್ಕೆ ಮಾರಾಟವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಾಖಲೆ ಮೊತ್ತಕ್ಕೆ ಚಿತ್ರದ ಆಡಿಯೋ ಮಾರಾಟವಾಗಿದೆ. ಆದ್ರೆ ಎಷ್ಟು ಮೊತ್ತಕ್ಕೆ ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪೈಲ್ವಾನ್ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

Kiccha Sudeep starrer Pailwan film audio riths sold for record sum

ವಿಶ್ವದಾದ್ಯಂತ ಪೈಲ್ವಾನ್ 2,500 ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೆ ತೆಲುಗು ವಿತರಣೆ ಹಕ್ಕು ಮಾರಾಟವಾಗಿದೆ. ಸದ್ಯ ಆಡಿಯೋ ರಿಲೀಸ್ ಗೆ ಪ್ಲಾನ್ ಮಾಡಿಕೊಳ್ಳುತ್ತಿರುವ ಪೈಲ್ವಾನ್ ಸದ್ಯದಲ್ಲೆ ಹಾಡುಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಪೈಲ್ವಾನ್ ಹಾಡುಗಳ ಮೇಲೆ ಗಾನಪ್ರಿಯರ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kiccha Sudeep starrer Pailwan film audio riths sold for record sum. Lahari Audio acquiring audio rights of the Pailwan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X