2,500ಕ್ಕು ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ 'ಪೈಲ್ವಾನ್'?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಸಿನಿಮಾ ಸದ್ಯ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿ ಇರುವ 'ಪೈಲ್ವಾನ್' ಕಡೆಯಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಅಂದ್ಹಾಗೆ 'ಪೈಲ್ವಾನ್' ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ ಎನ್ನುವ ವಿಚಾರ ಈಗಾಗಲೆ ಎಲ್ಲರಿಗೂ ಗೊತ್ತಿದೆ. ಸುಮಾರು ಎಂಟು ಭಾಷೆಯಲ್ಲಿ ತೆರೆಗೆ ಬರುತ್ತಿರುವ 'ಪೈಲ್ವಾನ್' ಚಿತ್ರದ ವಿತರಣೆಯ ಹಕ್ಕಿನ ಮಾರಾಟದ ಬಗ್ಗೆ ಮಾತುಕತೆ ನಡೆಯುತ್ತಿದೆ.
ಆಗಸ್ಟ್ ನಲ್ಲಿ ತೆರೆಗೆ ಬರುತ್ತಿರುವ 'ಪೈಲ್ವಾನ್' ಚಿತ್ರದ ತೆಲುಗು ವಿತರಣೆ ಹಕ್ಕು ಈಗಾಗಲೆ ಮಾರಾಟವಾಗಿದೆಯಂತೆ. ಇನ್ನು ಉಳಿದ ಭಾಷೆಯ ವಿತರಣೆ ಹಕ್ಕಿನ ಮಾರಾಟದ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದಯಂತೆ. ಇನ್ನು ವಿಶ್ವದಾದ್ಯಂತ 'ಪೈಲ್ವಾನ್' ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ.

2,500 ಚಿತ್ರಮಂದಿರಗಳಲ್ಲಿ 'ಪೈಲ್ವಾನ್'?
ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ದೇಶದಾದ್ಯತ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅವರ 'ಪೈಲ್ವಾನ್' ಸಿನಿಮಾ ಬರೋಬ್ಬರಿ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಅಂದ್ಮೇಲೆ ದೇಶ-ವಿದೇಶದಲ್ಲಿ 'ಪೈಲ್ವಾನ್' ಅಬ್ಬರ ಹೆಚ್ಚಾಗಲಿದೆ. 'ಕೆಜಿಎಫ್' ಚಿತ್ರದ ಮಾದರಿಯಲ್ಲೆ ದೊಡ್ಡ ಮಟ್ಟಕ್ಕೆ ಚಿತ್ರವನ್ನು ತೆರೆಗೆ ತರಲು ತಯಾರಿ ಮಾಡುತ್ತಿದೆ ಚಿತ್ರತಂಡ.

'ಕೆಜಿಎಫ್' ವಿತರಕರಿಂದ 'ಪೈಲ್ವಾನ್' ವಿತರಣೆ
'ಪೈಲ್ವಾನ್' ಚಿತ್ರದ ತೆಲುಗು ವಿತರಣೆ ಹಕ್ಕು ಈಗಾಗಲೆ ಮಾರಾಟ ವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ 'ಪೈಲ್ವಾನ್' ಚಿತ್ರದ ವಿತರಣೆ ಹಕ್ಕನ್ನು ಕೊಂಡುಕೊಂಡಿದ್ದಾರಂತೆ. 'ವಾರಾಹಿ ಚಲನ ಚಿತ್ರಂ' ಸಂಸ್ಥೆ 'ಪೈಲ್ವಾನ್' ಚಿತ್ರದ ತೆಲುಗು ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವಿಶೇಷ ಅಂದ್ರೆ ಈ ಹಿಂದೆ 'ಕೆಜಿಎಫ್' ಚಿತ್ರದ ವಿತರಣೆ ಹಕ್ಕನ್ನು ಇದೆ ಸಂಸ್ಥೆ ಕೊಂಡುಕೊಂಡಿತ್ತು.

ಕನ್ನಡ ಮತ್ತು ಉಳಿದ ಭಾಷೆಯ ವಿತರಣೆ
ಪೈಲ್ವಾನ್ ಸುಮಾರು 8 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಈಗಾಗಲೆ ತೆಲುಗು ವಿತರಣೆ ಹಕ್ಕು ಮಾರಾಟವಾಗಿದೆ. ಇನ್ನು ಉಳಿದಂತೆ ಕನ್ನಡ ಮತ್ತು ಭೇರೆ ಭಾಷೆಯ ವಿತರಣೆಯ ಹಕ್ಕಿನ ಮಾರಾಟದ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ. ದೊಡ್ಡ ಸಂಸ್ಥೆಯೊಂದು ವಿತರಣೆಯ ಹಕ್ಕು ಪಡೆದುಕೊಳ್ಳುವ ಸಾಧ್ಯತೆ ಇದೆಯಂತೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದೆ ಭಾಷೆಯ ವಿತರಣೆಯ ಹಕ್ಕು ಈ ವಾರ ಬಿಕರಿಯಾಗುವ ಸಾಧ್ಯತೆ ಇದೆಯಂತೆ.

ಸಧ್ಯದಲ್ಲೇ ಆಡಿಯೋ ತೆರೆಗೆ
ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ ಪೈಲ್ವಾನ್ ಚಿತ್ರದ ಆಡಿಯೋ ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂಲಗ ಪ್ರಕಾರ ಚಿತ್ರದ ಆಡಿಯೋ ಮುಂದಿನ ವಾರ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೆ ದೊಡ್ಡ ಆಡಿಯೋ ಕಂಪನಿ ಜೊತೆ ಮಾತುಕತೆ ಕೂಡ ಆಗಿದೆಯಂತೆ.

ಶಾರುಖ್ ಖಾನ್ ಅಡ್ಡದಲ್ಲಿ 'ಪೈಲ್ವಾನ್'
'ಪೈಲ್ವಾನ್' ಸಿನಿಮಾಗೆ ರಾಯಲ್ ಟಚ್ ಕೊಡಲು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟಟೈನ್ ಮೆಂಟ್ ಸಂಸ್ಥೆಗೆ ಹೋಗಿದೆಯಂತೆ. ಚಿತ್ರದ ಪ್ರಮುಖ ದೃಶ್ಯಗಳಿಗೆ ವಿ ಎಫ್ ಎಕ್ಸ್ ಕೆಲಸಗಳು ಮಾಡಿಸಬೇಕಂತೆ. ಹಾಗಾಗಿ ರೆಡ್ ಚಿಲ್ಲೀಸ್ ಮೊರೆ ಹೋಗಿದ್ದಾರೆ ನಿರ್ಮಾಪಕ ಮತ್ತು ನಿರ್ದೇಶಕ ಕೃಷ್ಣ. ಕುಸ್ತಿಯ ಸನ್ನಿವೇಶದ ಸಮಯದ ಒಂದಿಷ್ಟು ದೃಶ್ಯಗಳನ್ನು ಅಂದ್ರೆ ಸ್ಟೇಡಿಯಂ ಮತ್ತು ಹೆಚ್ಚು ಜನರಿರುವಂತೆ ವಿಶ್ಯುವಲ್ ಎಫೆಕ್ಟ್ ಗಾಗಿ ರೆಡ್ ಚಿಲ್ಲೀಸ್ ನಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ.


Click it and Unblock the Notifications











