'ಮ್ಯಾಕ್ಸ್' ಹಾಗೂ 'ಮಾರ್ಕ್' ಚಿತ್ರಗಳ ನಿರ್ದೇಶಕನಿಗೆ ಸುದೀಪ್ ಕಾರ್ ಗಿಫ್ಟ್; ಬೆಲೆ ಎಷ್ಟು?

ಕಿಚ್ಚ ಸುದೀಪ್ ಸದ್ಯ 'ಮಾರ್ಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷ ಕೊನೆಯಲ್ಲಿ ಇದೇ ಜೋಡಿ 'ಮ್ಯಾಕ್ಸ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕೊಟ್ಟಿತ್ತು. ಈ ವರ್ಷಾಂತ್ಯಕ್ಕೆ 'ಮಾರ್ಕ್' ಕಥೆ ಹೇಳೋಕೆ ಬರ್ತಿದ್ದಾರೆ.

ಮತ್ತೊಂದು ಪೊಲೀಸ್ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಈ ಬಾರಿ ವಿಜಯ್ ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ ಸಣ್ಣ ಝಲಕ್ ರಿಲೀಸ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೆಲ್ಲದರ ನಡುವೆ ನಿರ್ದೇಶಕರಿಗೆ ಸುದೀಪ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ದಸರಾ ಹಬ್ಬದ ಹೊಸ್ತಿಲಲ್ಲಿ ಕಾರ್ ಅನ್ನು ವಿಜಯ್ ಕಾರ್ತಿಕೇಯನ್‌ಗೆ ಕಿಚ್ಚ ಹಸ್ತಾಂತರಿಸಿದ್ದಾರೆ.

Kiccha Sudeep Surprises Director Vijay Karthikeyan With Skoda Kushaq Gift During Mark Shoot

'ಮ್ಯಾಕ್ಸ್' ಚಿತ್ರದ ಮೂಲಕ ವಿಜಯ್ ಸ್ವತಂತ್ರ ನಿರ್ದೇಶಕರಾಗಿದ್ದರು. ಮೊದಲ ಪ್ರಯತ್ನದಲ್ಲೇ ಕಮಾಲ್ ಮಾಡಿದ್ದರು. ಅವರ ಕೆಲಸ ನೋಡಿ ಖುಷಿಯಾಗಿದ್ದ ಕಿಚ್ಚ 'ಮಾರ್ಕ್' ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ಮೇಕಿಂಗ್ ಹಂತದಲ್ಲೇ ನಿರ್ದೇಶಕರ ಕೆಲಸ ನೋಡಿ ಕಿಚ್ಚ ದಿಲ್‌ಖುಷ್ ಆಗಿದ್ದಾರೆ. ಹಾಗಾಗಿ ಸ್ಕೋಡಾ ಕಾರ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿರ್ದೇಶಕ ವಿಜಯ್ ಕಾರ್ತಿಕೇಯನ್‌ ಅವರಿಗೆ Skoda Kylaq 2025 ಕಾರ್ ಅನ್ನು ಗಿಫ್ಟ್ ಮಾಡಿರುವಂತೆ ಕಾಣುತ್ತಿದೆ. ಅಂದಹಾಗೆ ಈ ಕಾರಿನ ಬೆಲೆ ₹9 ಲಕ್ಷದಿಂದ ಶುರುವಾಗಿ ₹15 ಲಕ್ಷದವರೆಗೆ ಇದೆ. ಚಿತ್ರದಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಸ್ಟಾರ್ ನಟರು ಉಡುಗೊರೆ ಕೊಡುವುದು ಹೊಸದೇನು ಅಲ್ಲ. ಇತ್ತೀಚೆಗೆ ಆ ರೂಢಿ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಗೆದ್ದಮೇಲೆ ಉಡುಗೊರೆ ಕೊಡುತ್ತಾರೆ. ಆದರೆ 'ಮ್ಯಾಕ್ಸ್' ಸಿನಿಮಾ ಗೆದ್ದಿದ್ದು 'ಮಾರ್ಕ್' ಸಿನಿಮಾ ಚಿತ್ರೀಕರಣದ ಹಂತದಲ್ಲೇ ವಿಜಯ್‌ ಉಡುಗೊರೆ ಪಡೆದುಕೊಂಡಿದ್ದಾರೆ.

"ಕಿಚ್ಚ ಸುದೀಪ್ ಸರ್ ಮತ್ತು ಅವರ ಕುಟುಂಬದಿಂದ ಬಂದ ಈ ಅದ್ಭುತ ಉಡುಗೊರೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಧನ್ಯವಾದಗಳು ಕಿಚ್ಚ ಸರ್" ಎಂದು 'X' ಖಾತೆಯಲ್ಲಿ ವಿಜಯ್ ಕಾರ್ತಿಕೇಯನ್ ಬರೆದುಕೊಂಡಿದ್ದಾರೆ. ಸುದೀಪ್ ಅಭಿಮಾನಿಗಳು ಕಾಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಮಾರ್ಕ್' ಸಿನಿಮಾ ನಿರ್ಮಾಣ ಆಗುತ್ತಿದೆ. ನವೀನ್ ಚಂದ್ರ, ದೀಪ್ಶಿಕಾ, ರೋಶನಿ ಪ್ರಕಾಶ್, ಮತ್ತು ಅರ್ಚನಾ ಕೊಟ್ಟಿಗೆ ಚಿತ್ರದ ತಾರಾಗಣದಲ್ಲಿದ್ದಾರೆ. 'ಮ್ಯಾಕ್ಸ್' ರೀತಿ ಇದು ಕೂಡ ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಕಿಚ್ಚನಿಗೆ ಈ ಚಿತ್ರದಲ್ಲಿ ಕೂಡ ನಾಯಕಿ ಇರಲ್ಲ. ಸೂರತ್ಕಲ್ ಪೊಲೀಸ್ ಠಾಣೆಯ ಸುತ್ತಾ ಸುತ್ತುವ ಕಥೆ ಚಿತ್ರದಲ್ಲಿದೆ.

ಚಿತ್ರದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಅಂದಹಾಗೆ ಈ ಹಿಂದೆ ಸುದೀಪ್ ಹಾಗೂ ಪ್ರಿಯಾ ದಂಪತಿ ಆಪ್ತರಿಗೆ ಬೈಕ್, ಕಾರ್ ಉಡುಗೊರೆಯಾಗಿ ನೀಡಿದ್ದರು. ಬಾಡಿಗಾರ್ಡ್ ಕಿರಣ್‌ ಹಾಗೂ ನಿರೂಪಕ ಅಕುಲ್ ಬಾಲಾಜಿಗೆ ಬೈಕ್‌ಗಳನ್ನು ಕೊಟ್ಟಿದ್ದರು. 'ವಿಕ್ರಾಂತ್ ರೋಣ' ಸಿನಿಮಾ ಸಕ್ಸಸ್ ಬಳಿಕ ಜಾನಿ ಮಾಸ್ಟರ್‌ಗೆ ಮಹೇಂದ್ರ ಥಾರ್ ಕಾರ್ ಗಿಫ್ಟ್ ಮಾಡಿದ್ದರು.

'ಮಾರ್ಕ್' ಜೊತೆ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಕೂಡ ಸುದೀಪ್ ಬಣ್ಣ ಹಚ್ಚಿದ್ದಾರೆ. ಆ ಗ್ಯಾಪ್‌ನಲ್ಲಿ 'ಮಾರ್ಕ್' ಸಿನಿಮಾ ಮುಗಿಸುವ ಪ್ರಯತ್ನ ನಡೀತಿದೆ. ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಜವಾಬ್ದಾರಿಯನ್ನು ಸುದೀಪ್ ವಹಿಸಿಕೊಂಡಿದ್ದಾರೆ. ಈ ವಾರಾಂತ್ಯದಲ್ಲೇ ಶೋ ಶುರುವಾಗಲಿದೆ.

More from Filmibeat

English summary
During ‘Mark’ Shoot, Kiccha Sudeep Surprises Vijay Karthikeyan with Skoda Kushaq
Read more about: sudeep max sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X