ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!
'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಬರೀ ಕರ್ನಾಟಕ ಹಾಗೂ ಕನ್ನಡ ಚಿತ್ರರಂಗದಲ್ಲಿ ಮಾತ್ರ ಜನಪ್ರಿಯತೆ ಗಳಿಸಿದವರಲ್ಲ. ಸುದೀಪ್ ಪಾಪ್ಯುಲಾರಿಟಿ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ವರೆಗೂ ಹಬ್ಬಿದೆ.
ಕೆಚ್ಚೆದೆಯ ಕಿಚ್ಚನ ಬಗ್ಗೆ ಕೇಳಿ ಎಡ್ಡಿ ಆರ್ಯ ಎಂಬುವರು ಸುದೀಪ್ ಗಾಗಿ ಹಾಲಿವುಡ್ ನಲ್ಲಿ ರೆಡ್ ಕಾರ್ಪೆಟ್ ಹಾಸಿರುವುದು ನಿಮಗೆ ನೆನಪಿದೆ ತಾನೇ.? ಎಲ್ಲರಿಗೂ 'ಡಾರ್ಲಿಂಗ್' ಆಗಿರುವ 'ನಲ್ಲ' ಸುದೀಪ್ ರವರನ್ನ ಈಗ ಮತ್ತೊಂದು 'ಮೆಗಾ' ಆಫರ್ ಹುಡುಕಿಕೊಂಡು ಬಂದಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿರಿ...

ಟಾಲಿವುಡ್ ನಿಂದ ಸುದೀಪ್ ಗೆ 'ಮೆಗಾ' ಆಫರ್
ಈಗಾಗಲೇ 'ಈಗ', 'ಬಾಹುಬಲಿ' ಚಿತ್ರಗಳ ಮೂಲಕ ತೆಲುಗು ಸಿನಿ ಅಂಗಳದಲ್ಲಿ ಗುರುತಿಸಿಕೊಂಡಿರುವ ಸುದೀಪ್ ರವರಿಗೆ ಟಾಲಿವುಡ್ ನಿಂದ 'ಮೆಗಾ' ಅವಕಾಶ ಲಭಿಸಿದೆ.

'ಮೆಗಾ ಸ್ಟಾರ್' ಚಿರಂಜೀವಿ ಚಿತ್ರದಲ್ಲಿ ಸುದೀಪ್.!
'ಮೆಗಾ ಸ್ಟಾರ್' ಚಿರಂಜೀವಿ ಅವರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸುದೀಪ್ ರವರ ಜೊತೆ ಮಾತುಕತೆ ನಡೆಸಲಾಗಿದೆ.

ಚಿರಂಜೀವಿ 151ನೇ ಸಿನಿಮಾದಲ್ಲಿ ಸುದೀಪ್.!
ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ನಿರ್ದೇಶಕ ಸುರೇಂದರ್ ರೆಡ್ಡಿ ಹೊರಟಿದ್ದಾರೆ. 'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ನಟಿಸಲು ಚಿರಂಜೀವಿ ತಯಾರಿ ನಡೆಸಿದ್ದಾರೆ. ಈಗ ಇದೇ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಸುದೀಪ್ ರವರಿಗೆ ಬುಲಾವ್ ಬಂದಿದೆ.

ಸುದೀಪ್ ಗೆ ಪವರ್ ಫುಲ್ ರೋಲ್
ಸಿನಿಮಾದಲ್ಲಿ ಸುದೀಪ್ ಗೆ ಆಫರ್ ಮಾಡಿರುವ ರೋಲ್ ತುಂಬಾ ಪವರ್ ಫುಲ್ ಅಗಿದ್ಯಂತೆ. ಕನ್ನಡ ಹಾಗೂ ತೆಲುಗಿನಲ್ಲಿ ಮಾತನಾಡುವ ವ್ಯಕ್ತಿಯ ಪಾತ್ರ ಇದಾಗಿದ್ರಿಂದ, ಪಾತ್ರಕ್ಕೆ ಸುದೀಪ್ ಅವರೇ ಸೂಕ್ತ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ.

ಸಿನಿಮಾದಲ್ಲಿ ಇರಲಿದ್ದಾರೆ ಅಮಿತಾಬ್ ಬಚ್ಚನ್.!
ಚಿರಂಜೀವಿ ಅವರ 151ನೇ ಸಿನಿಮಾದಲ್ಲಿ ಬಾಲಿವುಡ್ ನ 'ಮೆಗಾ ಸ್ಟಾರ್' ಅಮಿತಾಬ್ ಬಚ್ಚನ್ ಕೂಡ ಇರಲಿದ್ದಾರಂತೆ.

ಯಾರಿಗುಂಟು ಯಾರಿಗಿಲ್ಲ.!
ಒಂದ್ಕಡೆ ಚಿರಂಜೀವಿ, ಇನ್ನೊಂದ್ಕಡೆ ಅಮಿತಾಬ್ ಬಚ್ಚನ್... ಒಂದೇ ಸಿನಿಮಾದಲ್ಲಿ ಇಬ್ಬರ ಜೊತೆ ಸ್ಕ್ರೀನ್ ಶೇರ್ ಮಾಡಲು ಅವಕಾಶ ಯಾರಿಗುಂಟು ಯಾರಿಗಿಲ್ಲ.? ಈ ವಿಷಯದಲ್ಲಿ ಸುದೀಪ್ ಸಿಕ್ಕಾಪಟ್ಟೆ ಲಕ್ಕಿ. ಮೂರ್ಮೂರು ಸೂಪರ್ ಸ್ಟಾರ್ ಗಳನ್ನ ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೂ ಇದು ಖುಷಿಯ ವಿಚಾರ.

'ದಿ ವಿಲನ್' ಶೂಟಿಂಗ್ ನಲ್ಲಿ ಸುದೀಪ್
ಸದ್ಯ 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಅದು ಮುಗಿದ ಮೇಲೆ ಬಾಕಿ ಚಿತ್ರಗಳ ಮಾತು.

ತೆಲುಗಿನ ಸಿನಿಮಾ ಸೆಟ್ಟೇರುವುದು ಯಾವಾಗ.?
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಿರಂಜೀವಿ ರವರ 151ನೇ ಸಿನಿಮಾ ಸೆಟ್ಟೇರಲಿದೆ ಅಂತ ಈ ಹಿಂದೆ ವರದಿ ಆಗಿತ್ತು. ಆದರೆ ಖಚಿತ ಮಾಹಿತಿ ಲಭ್ಯವಿಲ್ಲ.


Click it and Unblock the Notifications











