ಕಡೆಗೂ ಭರ್ಜರಿ ಸುದ್ದಿ ಕೊಟ್ಟೇಬಿಟ್ರು 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್.!

By Harshitha

Recommended Video

ಸುದೀಪ್ ಬಗ್ಗೆ ಹರಿದಾಡ್ತಿದ ಸುದ್ದಿ ನಿಜ ಆಗೋಯ್ತು..!! | Filmibeat Kannada

ಸ್ಯಾಂಡಲ್ ವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಕಿಚ್ಚ ಸುದೀಪ್ ಗೆ ಡಿಮ್ಯಾಂಡ್ ಇದೆ. ಕನ್ನಡ ಚಿತ್ರರಂಗ ಮಾತ್ರ ಅಲ್ಲ... ಕಾಲಿವುಡ್, ಟಾಲಿವುಡ್, ಬಾಲಿವುಡ್ ನಲ್ಲಿಯೂ ಸುದೀಪ್ ಗೆ ಪಾಪ್ಯುಲಾರಿಟಿ ಇದೆ. ಹಾಲಿವುಡ್ ನಿಂದಲೂ ಸುದೀಪ್ ಗೆ ಬುಲಾವ್ ಬಂದಿರುವ ಬಗ್ಗೆ ನಿಮಗೆ ನೆನಪಿದೆ ತಾನೇ.?

ಹಾಗ್ನೋಡಿದ್ರೆ, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿಯೇ ಸುದೀಪ್ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. 'ಪೈಲ್ವಾನ್' ಹಾಗೂ 'ಕೋಟಿಗೊಬ್ಬ-3' ಚಿತ್ರಗಳ ಶೂಟಿಂಗ್ ನಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ.

ಈ ಗ್ಯಾಪ್ ನಲ್ಲಿಯೇ ತಮ್ಮ ಅಭಿಮಾನಿಗಳಿಗೆ ಸುದೀಪ್ ಒಂದು ಸಂತಸದ ಸುದ್ದಿ ನೀಡಿದ್ದಾರೆ. ಇಲ್ಲಿಯವರೆಗೂ 'ಇದು ಈಡೇರುತ್ತೋ ಇಲ್ವೋ' ಅಂತ ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದರು. ಆದ್ರೆ, ಕಡೆಗೂ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಅರೇ ಏನದು ಸಂತಸದ ಸುದ್ದಿ ಅಂತೀರಾ.? ಪೂರಾ ಮ್ಯಾಟರ್ ಇಲ್ಲಿದೆ ಓದಿರಿ...

ಚಿರಂಜೀವಿ ಜೊತೆಗೆ ಸುದೀಪ್ ನಟಿಸುವುದು ಪಕ್ಕಾ.!

ಚಿರಂಜೀವಿ ಜೊತೆಗೆ ಸುದೀಪ್ ನಟಿಸುವುದು ಪಕ್ಕಾ.!

'ಈಗ', 'ಬಾಹುಬಲಿ' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿ ಟಾಲಿವುಡ್ ನಲ್ಲಿಯೂ ಸುದೀಪ್ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಜೊತೆ ತೆರೆಹಂಚಿಕೊಳ್ಳುವ ಸುವರ್ಣಾವಕಾಶ ಸುದೀಪ್ ಪಾಲಾಗಿದೆ. ಚಿರಂಜೀವಿ ಜೊತೆಗೆ ಸುದೀಪ್ ನಟಿಸುವುದು ಪಕ್ಕಾ ಆಗಿದೆ.

ಯಾವ ಸಿನಿಮಾ.?

ಯಾವ ಸಿನಿಮಾ.?

ಚಿರಂಜೀವಿ ಅಭಿನಯಿಸುತ್ತಿರುವ 151ನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ'ಯಲ್ಲಿ ಸುದೀಪ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

ಅಂದು ಆಗಲ್ಲ ಎಂದಿದ್ರಾ ಸುದೀಪ್.?

ಅಂದು ಆಗಲ್ಲ ಎಂದಿದ್ರಾ ಸುದೀಪ್.?

ಅಷ್ಟಕ್ಕೂ, ಚಿರಂಜೀವಿ ಹಾಗೂ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನುವ ಗುಸುಗುಸು ಕಳೆದ ವರ್ಷವೇ ಕೇಳಿ ಬಂದಿತ್ತು. ಹೇಳಿ ಕೇಳಿ 'ಸೈರಾ ನರಸಿಂಹ ರೆಡ್ಡಿ' ಐತಿಹಾಸಿಕ ಸಿನಿಮಾ. ಹೀಗಾಗಿ, ಈ ಚಿತ್ರಕ್ಕೆ ಹೆಚ್ಚು ದಿನ ಕಾಲ್ ಶೀಟ್ ಕೊಡಬೇಕಾಗಬಹುದು ಎಂಬ ಕಾರಣಕ್ಕೆ ಈ ಪ್ರಾಜೆಕ್ಟ್ ನ ಸುದೀಪ್ ಕೈಬಿಟ್ಟಿದ್ದಾರೆ ಎಂದು ವರದಿ ಆಗಿತ್ತು.

ಅಂದು ಅಭಿಮಾನಿಗಳಿಗೆ ನಿರಾಸೆ ಆಗಿತ್ತು

ಅಂದು ಅಭಿಮಾನಿಗಳಿಗೆ ನಿರಾಸೆ ಆಗಿತ್ತು

ಚಿರಂಜೀವಿ ಹಾಗೂ ಸುದೀಪ್ ರನ್ನ ಒಟ್ಟಿಗೆ ಸ್ಕ್ರೀನ್ ಮೇಲೆ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಅಂದು ನಿರಾಸೆ ಆಗಿತ್ತು. ಆದ್ರೀಗ, ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸುದ್ದಿಯನ್ನ ಸುದೀಪ್ ನೀಡಿದ್ದಾರೆ.

ನಿರ್ದೇಶಕರು ಪಟ್ಟು ಹಿಡಿದಿದ್ದರಂತೆ.!

ನಿರ್ದೇಶಕರು ಪಟ್ಟು ಹಿಡಿದಿದ್ದರಂತೆ.!

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಇರುವ ಪಾತ್ರವೊಂದಕ್ಕೆ ಸುದೀಪ್ ಅವರೇ ಪರ್ಫೆಕ್ಟ್ ಚಾಯ್ಸ್ ಅಂತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ಧರಿಸಿದ್ದರು. ಹೀಗಾಗಿ, ಆ ಪಾತ್ರಕ್ಕೆ ಸುದೀಪ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದರಂತೆ. ಕೊನೆಗೆ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸಲು ಸುದೀಪ್ ಹಸಿರು ನಿಶಾನೆ ತೋರಿಸಿದ್ದಾರೆ.

ಟ್ವೀಟ್ ಮಾಡಿದ ಸುದೀಪ್

''ಸೈರಾ' ಸಿನಿಮಾದಲ್ಲಿ ನಾನು ಲೆಜೆಂಡ್ ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಚೊಚ್ಚಲ ಐತಿಹಾಸಿಕ ಸಿನಿಮಾ'' ಎಂದು ಸುದೀಪ್ ಇಂದು ಟ್ವೀಟ್ ಮಾಡಿದ್ದಾರೆ.

ಐತಿಹಾಸಿಕ ಸಿನಿಮಾ

ಐತಿಹಾಸಿಕ ಸಿನಿಮಾ

ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ನಿರ್ದೇಶಕ ಸುರೇಂದರ್ ರೆಡ್ಡಿ ಹೊರಟಿದ್ದಾರೆ. 'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ನಟಿಸಲು ಚಿರಂಜೀವಿ ತಯಾರಿ ನಡೆಸಿದ್ದಾರೆ.

ಗಟ್ಟಿ ಗುಂಡಿಗೆ ಇರುವ ಪಾತ್ರ

ಗಟ್ಟಿ ಗುಂಡಿಗೆ ಇರುವ ಪಾತ್ರ

ಸಿನಿಮಾದಲ್ಲಿ ಸುದೀಪ್ ಗೆ ಆಫರ್ ಮಾಡಿರುವ ರೋಲ್ ತುಂಬಾ ಪವರ್ ಫುಲ್ ಅಗಿದ್ಯಂತೆ. ಕನ್ನಡ ಹಾಗೂ ತೆಲುಗಿನಲ್ಲಿ ಮಾತನಾಡುವ ವ್ಯಕ್ತಿಯ ಪಾತ್ರ ಇದಾಗಿದ್ರಿಂದ, ಪಾತ್ರಕ್ಕೆ ಸುದೀಪ್ ಅವರೇ ಸೂಕ್ತ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ.

ಮೆಗಾ ಬಜೆಟ್ ಸಿನಿಮಾ

ಮೆಗಾ ಬಜೆಟ್ ಸಿನಿಮಾ

'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ರಾಮ್ ಚರಣ್ ಬಂಡವಾಳ ಹೂಡಲಿದ್ದು, ಬರೋಬ್ಬರಿ 150 ಕೋಟಿ ಬಜೆಟ್ ನಲ್ಲಿ ಚಿತ್ರ ತಯಾರಾಗಲಿದೆ.

More from Filmibeat

English summary
Kiccha Sudeep has confirmed that he will share screen space with Chiranjeevi in 'Sye Raa Narasimha Reddy' film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X