»   » ಸುದೀಪ್ ಹೊಸ ಸಿನಿಮಾ ಬಗ್ಗೆ ಗಾಂಧಿನಗರದಿಂದ ಬಂದ ಬ್ರೇಕಿಂಗ್ ನ್ಯೂಸ್

ಸುದೀಪ್ ಹೊಸ ಸಿನಿಮಾ ಬಗ್ಗೆ ಗಾಂಧಿನಗರದಿಂದ ಬಂದ ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ರವರ ಹೊಸ ಸಿನಿಮಾದ ಬಗ್ಗೆ ಗಾಂಧಿನಗರದಿಂದ ಒಂದು ಬ್ರೇಕಿಂಗ್ ನ್ಯೂಸ್ ಬಂದಿದೆ.

ಸ್ಯಾಂಡಲ್ ವುಡ್ ನಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಪ್ರತಿಷ್ಟಿತ 'ಹೊಂಬಾಳೆ ಫಿಲ್ಮ್ಸ್' ಬ್ಯಾನರ್ ನಲ್ಲಿ ತಯಾರಾಗುವ ಹೊಸ ಚಿತ್ರದಲ್ಲಿ ನಟಿಸಲು 'ಅಭಿನಯ ಚಕ್ರವರ್ತಿ' ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

Kiccha Sudeep to associate with Hombale Films for a Film

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಹಾಗೂ 'ರಾಜಕುಮಾರ' ಮತ್ತು ರಾಕಿಂಗ್ ಸ್ಟಾರ್ ಯಶ್ ರವರ 'ಮಾಸ್ಟರ್ ಪೀಸ್' ಹಾಗೂ 'ಕೆ.ಜಿ.ಎಫ್' ಚಿತ್ರಗಳನ್ನು 'ಹೊಂಬಾಳೆ ಫಿಲ್ಮ್ಸ್' ಬ್ಯಾನರ್ ಅಡಿ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರು ಬಂಡವಾಳ ಹಾಕುವ ನೂತನ ಚಿತ್ರದಲ್ಲಿ ಸುದೀಪ್ ನಟಿಸಲು ಒಪ್ಪಿಕೊಂಡಿದ್ದಾರೆ.

ಸದ್ಯ 'ದಿ ವಿಲನ್' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಬಿಜಿಯಾಗಿದ್ದಾರೆ. 'ದಿ ವಿಲನ್' ಶೂಟಿಂಗ್ ಮುಗಿದ ಬಳಿಕ ಕೃಷ್ಣ ಆಕ್ಷನ್ ಕಟ್ ಹೇಳುವ ಚಿತ್ರಕ್ಕೆ ಸುದೀಪ್ ಚಾಲನೆ ನೀಡಿದ್ದಾರೆ. ಅದು ಮುಗಿದ ನಂತರ ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಸೆಟ್ಟೇರಲಿದೆ.

Kiccha Sudeep to associate with Hombale Films for a Film

ಅಂದ್ಹಾಗೆ, ವಿಜಯ್ ಕಿರಗಂದೂರು ಹಾಗೂ ಸುದೀಪ್ ಕಾಂಬಿನೇಷನ್ ನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಪ್ರತಿಭಾವಂತ ನಿರ್ದೇಶಕ ಯಾರು ಅನ್ನೋದು ಇನ್ನೂ ಗುಟ್ಟಾಗಿ ಉಳಿದಿದೆ.

English summary
Kiccha Sudeep to associate with Producer Vijay Kiragandur of Hombale Films for a new project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada