»   » ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸುವ ಸಿನಿಮಾ ಯಾವುದು.?

ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸುವ ಸಿನಿಮಾ ಯಾವುದು.?

Posted By:
Subscribe to Filmibeat Kannada

ಕನ್ನಡದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಹಾಲಿವುಡ್ ಗೆ ಹಾರಲಿರುವ ಬಗ್ಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಪುಟದಲ್ಲಿ ನೀವು ಓದಿದ್ರಿ. ಈಗ ಅದೇ ಹಾಲಿವುಡ್ ಚಿತ್ರದ ಬಗ್ಗೆ ನಿಮಗಾಗಿ ಹೆಚ್ಚಿನ ಮಾಹಿತಿಯನ್ನ ನಾವು ಹೊತ್ತು ತಂದಿದ್ದೇವೆ.

'ಟೀಮ್ ಕಿಚ್ಚ ಸುದೀಪ್' ಟ್ವೀಟ್ ಮಾಡಿದಂತೆ ಹಾಲಿವುಡ್ ಚಿತ್ರವೊಂದರಲ್ಲಿ ಸುದೀಪ್ ಅಭಿನಯಿಸುವುದು ಪಕ್ಕಾ ಆಗಿದೆ. ಹಾಗಾದ್ರೆ, ಯಾವ ಹಾಲಿವುಡ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲು ಹಸಿರು ನಿಶಾನೆ ತೋರಿಸಿದ್ದಾರೆ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಓದಿರಿ...

ಸುದೀಪ್ ಅಭಿನಯಿಸಲು ಒಪ್ಪಿಕೊಂಡಿರುವ ಹಾಲಿವುಡ್ ಸಿನಿಮಾ ಇದೇ.!

ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ಎಂಬ ನಿರ್ದೇಶಕರ 'ರೈಸನ್' ಸಿನಿಮಾದಲ್ಲಿ ಸುದೀಪ್ ನಟಿಸುವುದು ಪಕ್ಕಾ ಆಗಿದೆ.

ಸುದೀಪ್ ಪಾತ್ರವೇನು.?

'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ವೀರ ಯೋಧನ ಪಾತ್ರದಲ್ಲಿ ಮಿಂಚಿದ್ದರು. ಸೇಮ್ ಟು ಸೇಮ್ ಅದೇ ರೀತಿಯಲ್ಲಿ 'ರೈಸನ್' ಚಿತ್ರದಲ್ಲೂ ಯೋಧನ ಪಾತ್ರದಲ್ಲಿ ಸುದೀಪ್ ಮಿಂಚಲಿದ್ದಾರೆ.

ಮಂಡ್ಯ ರಮೇಶ್ ಕಾರಣ

ನಟ ಮಂಡ್ಯ ರಮೇಶ್ ಆಸ್ಟ್ರೇಲಿಯಾಕ್ಕೆ ಹೋಗಿದ್ದಾಗ, ಅಲ್ಲಿ ಅವರಿಗೆ ಎಡ್ಡಿ ಪರಿಚಯವಾಗಿದೆ. 'ರೈಸನ್' ಸಿನಿಮಾದ ಯೋಧನ ಪಾತ್ರಕ್ಕಾಗಿ ಎಡ್ಡಿ ಹುಡುಕಾಟ ನಡೆಸುತ್ತಿದ್ದರಂತೆ. ಆಗ ಎಡ್ಡಿ ರವರಿಗೆ ಮಂಡ್ಯ ರಮೇಶ್ ಸುದೀಪ್ ಹೆಸರನ್ನ ಸೂಚಿಸಿದ್ದಾರೆ.

ಸುದೀಪ್ ಸಿನಿಮಾ ದರ್ಶನ

ಸುದೀಪ್ ಹೆಸರನ್ನ ಕೇಳಿದ ಕೂಡಲೆ, ಸುದೀಪ್ ರವರ ಸಿನಿಮಾಗಳನ್ನ ಎಡ್ಡಿ ವೀಕ್ಷಿಸಿದ್ದಾರೆ. ತಮ್ಮ 'ರೈಸನ್' ಚಿತ್ರದ ಪಾತ್ರಕ್ಕೆ ಸುದೀಪ್ ಪರ್ಫೆಕ್ಟ್ ಅಂತ ಎಡ್ಡಿ ಡಿಸೈಡ್ ಮಾಡಿದ ಮೇಲೆ ಮಂಡ್ಯ ರಮೇಶ್ ಮೂಲಕ ಸುದೀಪ್ ಸಂಪರ್ಕ ಮಾಡಿ 'ರೈಸನ್' ಕಥೆ ಹೇಳಿದ್ದಾರೆ.

ಸುದೀಪ್ ಗೆ ಕಥೆ ಇಷ್ಟವಾಗಿದೆ

ಸುದೀಪ್ ಗೆ ಕಥೆ ಇಷ್ಟವಾಗಿದೆ. ಹೀಗಾಗಿ, ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ದಿ ವಿಲನ್' ಶೂಟಿಂಗ್ ಮುಗಿಯಬೇಕು

ಸದ್ಯಕ್ಕೆ 'ದಿ ವಿಲನ್' ಶೂಟಿಂಗ್ ನಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ 'ರೈಸನ್' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ.

English summary
Kiccha Sudeep to star in Hollywood film 'Risen'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada