'ದಿ ವಿಲನ್' ಬಿಡುಗಡೆಗಾಗಿ ಕಿಚ್ಚ ಸುದೀಪ್ ಕಾಯ್ತಿದ್ದಾರೆ.!
Recommended Video

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾದ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಗಣೇಶ ಹಬ್ಬದ ಶುಭ ಸಂದರ್ಭದಂದು 'ದಿ ವಿಲನ್' ಬಿಡುಗಡೆ ದಿನಾಂಕವನ್ನ ಪ್ರೇಮ್ ಘೋಷಿಸಿದ್ದಾರೆ.
ಅಕ್ಟೋಬರ್ 18 ರಂದು 'ದಿ ವಿಲನ್' ನಿಮ್ಮೆಲ್ಲರ ಮುಂದೆ ಬರಲಿದೆ. ದೇಶದಾದ್ಯಂತ ಸಾವಿರ ಚಿತ್ರಮಂದಿರಗಳಲ್ಲಿ 'ದಿ ವಿಲನ್' ತೆರೆಕಾಣಲಿದೆ. ಗಾಂಧಿನಗರ ಮೂರು ಪ್ರಮುಖ ಥಿಯೇಟರ್ ಗಳಲ್ಲಿ 'ದಿ ವಿಲನ್' ತೆರೆಗೆ ಬರಲಿದೆ ಎನ್ನಲಾಗಿದೆ.

'ದಿ ವಿಲನ್' ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ. ಹಾಗೇ, ಕಿಚ್ಚ ಸುದೀಪ್ ಕೂಡ 'ದಿ ವಿಲನ್' ಬರುವಿಕೆಗಾಗಿ ಕಾಯುತ್ತಿದ್ದಾರೆ.
''ಪ್ರೇಮ್ ಚಿತ್ರ ಬಿಡುಗಡೆಗೆ ಶುಭವಾಗಲಿ. ನಿರ್ದೇಶಕ ಪ್ರೇಮ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದಾರೆ. ಅದ್ಭುತ ತಂತ್ರಜ್ಞರು ಹಾಗೂ ಕಲಾವಿದರ ಜೊತೆಗೆ ಕೆಲಸ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಈ ಚಿತ್ರಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ 'ದಿ ವಿಲನ್' ಬಿಡುಗಡೆ ಆಗಲಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ 'ದಿ ವಿಲನ್' ಸಿನಿಮಾ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಈ ಬಾರಿಯ ಆಯುಧ ಪೂಜೆ ಮತ್ತಷ್ಟು ಅದ್ಧೂರಿಯಾಗಲಿದೆ.


Click it and Unblock the Notifications











