»   » 'ಹೆಬ್ಬುಲಿ' ಸುದೀಪ್ ಗೆ ಅನಾರೋಗ್ಯ: ಅಪೋಲೋ ಆಸ್ಪತ್ರೆಗೆ ದಾಖಲು

'ಹೆಬ್ಬುಲಿ' ಸುದೀಪ್ ಗೆ ಅನಾರೋಗ್ಯ: ಅಪೋಲೋ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಸಿಡಿಟಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲ ದಿನಗಳಿಂದ 'ಹೆಬ್ಬುಲಿ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದರು. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹೀಗಿರುವಾಗಲೇ, ಶನಿವಾರ (ಜುಲೈ 2) ರಾತ್ರಿ ಸುದೀಪ್ ರವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸುದೀಪ್ ರವರಿಗೆ ಪರಿಚಯ ಇರುವ ವೈದ್ಯರೇ ಸದ್ಯ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ. [ಕಿಚ್ಚನ 'ಹೆಬ್ಬುಲಿ' ಶೂಟಿಂಗ್ ಗೆ ಮೈಸೂರಿನಲ್ಲಿ ತಡೆ]


kiccha-sudeep-unwell-admitted-apollo-hospital-bengaluru

''ಗಾಬರಿ ಪಡುವಂಥದ್ದು ಏನೂ ಇಲ್ಲ'' ಅಂತ ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟ ಪಡಿಸಿರುವ ಬಗ್ಗೆ 'ಹೆಬ್ಬುಲಿ' ಚಿತ್ರದ ನಿರ್ದೇಶಕ ಕೃಷ್ಣ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ. [ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ']


ಸುದೀಪ್ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಸದ್ಯಕ್ಕೆ ಕ್ಯಾನ್ಸಲ್ ಆಗಿದೆ. ಸುದೀಪ್ ಬೇಗ ಗುಣಮುಖರಾಗಲಿ ಅಂತ ನೀವೂ ಹಾರೈಸಿ.

English summary
Kannada Actor Kiccha Sudeep is unwell due to Acidity Problem. At present Sudeep is admitted to Apollo Hospital, Bengaluru for treatment. Hence, 'Hebbuli' shooting is cancelled as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada