For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ತಿಮ್ಮಪ್ಪನ ದರ್ಶನ ಮಾಡಿದ ಸುದೀಪ್

  |
  ಹೊಸ ವರ್ಷಾಚರಣೆಯನ್ನ ಈ ರೀತಿ ಆಚರಿಸಿದ ಸುದೀಪ್ | FILMIBEAT KANNADA

  2019 ಮೊದಲ ಹೆಜ್ಜೆ ಇಟ್ಟಿದೆ. ಈ ವರ್ಷ 'ಫಿಲ್ಮಿಬೀಟ್ ಕನ್ನಡ'ದ ಮೊದಲ ಲೇಖನ ಇದಾಗಿದೆ. ಸೋ, ಈ ಲೇಖನದ ಶುರುವಿನಲ್ಲೇ ನಿಮಗೆ ಶುಭಾಶಯ ತಿಳಿಸಿ ನಂತರ ನಮ್ಮ ಕೆಲಸ ನಾವು ಶುರು ಮಾಡುತ್ತಿದ್ದೇವೆ. ಎಲ್ಲ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.

  ಎಲ್ಲರ ಮನೆ ಕ್ಯಾಲೆಂಡರ್ ಬದಲಾಗಿದೆ. ಹೊಸ ಆಲೋಚನೆ, ಹೊಸ ಜೋಶ್ ನೊಂದಿಗೆ ಎಲ್ಲರೂ ಈ ದಿನವನ್ನು ಶುರು ಮಾಡಿದ್ದಾರೆ. ನಟ ಸುದೀಪ್ ಕೂಡ ದೇವಸ್ಥಾನಕ್ಕೆ ಹೋಗುವ ಮೂಲಕ ಹೊಸ ವರ್ಷವನ್ನು ಸ್ವಾಗತ ಮಾಡಿದ್ದಾರೆ. ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಸುದೀಪ್ ಪಡೆದಿದ್ದಾರೆ. ಈ ವರ್ಷ ಕೂಡ ಚೆನ್ನಾಗಿ ಇರಲಿ ಎಂದು ದೇವರ ಬಳಿ ಅವರು ಪ್ರಾರ್ಥನೆ ಮಾಡಿದ್ದಾರೆ.

  ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ವರ್ಷದ ಶುಭಾಶಯವನ್ನು ತಿಳಿಸಿರುವ ಅವರು ತಮ್ಮ ಪಯಣದಲ್ಲಿ ಸಾಥ್ ನೀಡಿದ ಸ್ನೇಹಿತರಿಗೆ, ಕುಟುಂಬದವರಿಗೆ ಅಭಿಮಾನಿಗಳಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ.

  ಆಚರಣೆಗೆ ಮೊದಲು ಪ್ರಕೃತಿ ಸುರಕ್ಷಿತವಾಗಿ ಇದೆಯೇ ಎಂದು ಒಮ್ಮೆ ಯೋಚನೆ ಮಾಡಿ ಎಂದು ಹೇಳುತ್ತಲೇ, ಇಡೀ ಕನ್ನಡ ಚಿತ್ರರಂಗದವರಿಗೆ ಶುಭಾಶಯಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಸದ್ಯ, ಸುದೀಪ್ ಅವರ 'ಪೈಲ್ವಾನ್' ಸಿನಿಮಾದ ಶೂಟಿಂಗ್ ಶಡ್ಯೂಲ್ ಶುರು ಆಗಲಿದೆ. 25 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣದಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ.

  English summary
  Kannada actor Kiccha Sudeep Visits Tirumala Temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X