»   » ಧನುಷ್ ಚಿತ್ರದಲ್ಲಿ ಅಭಿನಯಿಸಲು ಕಿಚ್ಚನಿಗೆ ಆಹ್ವಾನ

ಧನುಷ್ ಚಿತ್ರದಲ್ಲಿ ಅಭಿನಯಿಸಲು ಕಿಚ್ಚನಿಗೆ ಆಹ್ವಾನ

Posted By:
Subscribe to Filmibeat Kannada
ಕಿಚ್ಚನನ್ನು ತಮ್ಮ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ ಧನುಷ್ | Filmibeat Kannada

ಕಿಚ್ಚ ಸುದೀಪ್ ಅಕ್ಕ-ಪಕ್ಕದ ಚಿತ್ರರಂಗದಲ್ಲಿಯೂ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದ ನಟ, ನಿರ್ದೇಶಕ. ಸದ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸುದೀಪ್, ಇದೇ ವರ್ಷ ಹಾಲಿವುಡ್ ನಲ್ಲಿಯೂ ಮಿಂಚಲಿದ್ದಾರೆ. ಅದರ ಜೊತೆಯಲ್ಲಿ ಟಾಲಿವುಡ್ ನಿರ್ದೇಶಕರು ಸುದೀಪ್ ಗಾಗಿ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಕೋರಿದ್ದಾರೆ.

ದಿ ವಿಲನ್ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟಿರುವ ಕಿಚ್ಚ ಈ ತಿಂಗಳಿನಿಂದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇದಾದ ನಂತರ ಹಾಲಿವುಡ್ ಹಾಗೂ ಸೂರಪ್ಪ ಬಾಬು ನಿರ್ಮಾಣದ' ಕೋಟಿಗೊಬ್ಬ3' ಚಿತ್ರೀಕರಣ ಶುರುವಾಗಲಿದೆ. ಇಷ್ಟೆಲ್ಲಾ ಬ್ಯುಸಿ ಆಗಿರುವ ಸುದೀಪ್ ಅವರಿಗೆ ಕಾಲಿವುಡ್ ಚಿತ್ರರಂಗದಿಂದ ಆಹ್ವಾನ ಬಂದಿದೆ.

ಕಿಚ್ಚ ಸುದೀಪ್ ಈಗ ಕಟ್ಟು ಮಸ್ತಾದ ಪೈಲ್ವಾನ್

ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಚಿತ್ರದಲ್ಲಿ ಭಾಗಿ ಆಗುವಂತೆ ಕಿಚ್ಚನಿಗೆ ಆಹ್ವಾನ ನೀಡಲಾಗಿದ್ಯಂತೆ. ಸದ್ಯ ವರ್ಷ ಪೂರ್ತಿ ಬ್ಯುಸಿ ಆಗಿರುವ ಅಭಿನಯ ಚಕ್ರವರ್ತಿ ಕಾಲಿವುಡ್ ನಿಂದ ಬಂದಿರುವ ಆಹ್ವಾನಕ್ಕೆ ಏನೆಂದು ಉತ್ತರಿಸಿದ್ದಾರೆ? ಸುದೀಪ್-ಧನುಷ್ ಭೇಟಿ ಆಗಿದ್ದು ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಿಚ್ಚನಿಗೆ ಭಾರಿ ಡಿಮ್ಯಾಂಡ್

ಕಿಚ್ಚ ಸುದೀಪ್ ಸದ್ಯ ಕನ್ನಡದ ಭಾರಿ ಬೇಡಿಕೆಯ ನಟ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಹಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿಯೋ ಕಿಚ್ಚನ ಅಭಿನಯಕ್ಕೆ ಡಿಮ್ಯಾಂಡ್ ಕ್ರಿಯೆಟ್ ಆಗಿದೆ.

ಧನುಷ್ ನಿರ್ದೇಶನದ ಚಿತ್ರದಲ್ಲಿ ಕಿಚ್ಚ

ರಜನಿಕಾಂತ್ ಅಳಿಯ ಧನುಷ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಇನ್ನು ಹೆಸರಿಡದ ಚಿತ್ರದಲ್ಲಿ ಅಭಿನಯಿಸಲು ಕಿಚ್ಚನಿಗೆ ಆಹ್ವಾನ ಬಂದಿದೆಯಂತೆ. ಈಗಾಗಲೇ ಧನುಷ್ ಸುದೀಪ್ ಅವರನ್ನು ಭೇಟಿ ಮಾಡಿ ಕಥೆಯನ್ನ ಹೇಳಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

ಕಥೆಯನ್ನ ಮೆಚ್ಚಿಕೊಂಡಿರುವ ಸುದೀಪ್

ಧನುಷ್ ಅವರ ಸಿನಿಮಾ ಕಥೆಯನ್ನ ಕೇಳಿರುವ ಕಿಚ್ಚ ಸುದೀಪ್ ಕಥೆಯನ್ನನ ಮೆಚ್ಚಿಕೊಂಡಿರುವುದರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ವರ್ಷ ಪೂರ್ತಿ ಬ್ಯುಸಿ ಆದ ನಟ

ಕಿಚ್ಚ ಸುದೀಪ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ದಿ ವಿಲನ್, ಕೋಟಿಗೊಬ್ಬ3, ಹಾಲಿವುಡ್ ನ ರೈಸನ್, ಅಂಬಿ ನಿಂಗ್ ವಯಸ್ಸಾಯ್ತೋ, ಸೇರಿದಂತೆ ಚಿರಂಜೀವಿ ಜೊತೆಯಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ ಹಾಗೂ ಧನುಷ್ ಅವರ ನಿರ್ದೇಶನದ ಹೊಸ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರಂತೆ.

English summary
Kannada actor Kichcha will play the lead role of Dhanush's new film. Kichcha Sudeep will be cast in The villain, Kotigobba 3, Raisen, and Ambi Ning vaisaytho movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada