ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ, ಅಷ್ಟೇ ಮಿಸ್ಟರಿ ಎಂದ ಕಿಚ್ಚ ಸುದೀಪ್.!

By Harshitha

Recommended Video

ರವಿಚಂದ್ರನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕಿಚ್ಚ ಸುದೀಪ್ | Filmibeat Kannada

ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು 'ರಿಯಲ್ ಶೋ ಮ್ಯಾನ್' ರವಿಚಂದ್ರನ್ ಹುಟ್ಟುಹಬ್ಬ. 'ಕನಸುಗಾರ' ರವಿಚಂದ್ರನ್ ಇಂದು ತಮ್ಮ 57ನೇ ಜನ್ಮದಿನವನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.

ರವಿಮಾಮನ ಹುಟ್ಟುಹಬ್ಬ ಕಿಚ್ಚ ಸುದೀಪ್ ಕೂಡ ಶುಭಾಶಯ ಕೋರಿದ್ದಾರೆ. ನಿಮಗೆಲ್ಲ ಗೊತ್ತಿರುವ ಹಾಗೆ, 'ಮಾಣಿಕ್ಯ' ಹಾಗೂ 'ಹೆಬ್ಬುಲಿ' ಚಿತ್ರಗಳಲ್ಲಿ ಸುದೀಪ್ ಹಾಗೂ ರವಿಚಂದ್ರನ್ ಒಟ್ಟಾಗಿ ಅಭಿನಯಿಸಿದ್ದರು.

'ಮಲ್ಲ' ರವಿಚಂದ್ರನ್ ಜೊತೆಗೆ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾ, ಅವರಿಗೆ ಬರ್ತಡೇ ವಿಶಸ್ ತಿಳಿಸಿದ್ದಾರೆ 'ನಲ್ಲ' ಸುದೀಪ್.

Kiccha Sudeep wishes Crazy Star Ravichandran

''ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ. ಅಷ್ಟೇ ಮಿಸ್ಟರಿ. ನಾನು ಅವರ ಸಿನಿಮಾಗಳ ಅಭಿಮಾನಿ. ಅವರೊಂದಿಗೆ ಕೆಲಸ ಮಾಡಲು, ಅವರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ನನಗೆ ಸಿಕ್ತು. ಅವರೊಂದಿಗೆ ನಾನು ಕಳೆದಿರುವ ಕ್ಷಣಗಳು ಅಮೂಲ್ಯವಾದವು. ಹೀಗಿದ್ದರೂ, 'ರವಿಚಂದ್ರನ್ ಹೇಗೆ?' ಎಂದು ಯಾರಾದರೂ ಕೇಳಿದರೆ... ಸೂಕ್ತ ಉತ್ತರ ಕೊಡಲು ನಾನು ವಿಫಲನಾಗುವೆ''

''ಅವರನ್ನ ಅರ್ಥಮಾಡಿಕೊಳ್ಳುವುದು ಸುಲಭ ಅಲ್ಲ. ಪ್ರತಿ ನಿತ್ಯ, ಪ್ರತಿ ಕ್ಷಣ ಅವರು ನಮ್ಮನ್ನ ನಿಬ್ಬೆರಗಾಗಿಸುತ್ತಾರೆ. ಅವರ ತತ್ವ-ಸಿದ್ಧಾಂತಗಳು ಬೇರೆಯದ್ದೇ ಮಟ್ಟದಲ್ಲಿದೆ. ಹೀಗಾಗಿ, ಅವರು ಹೀಗೇ ಎಂಬ ತೀರ್ಮಾನಕ್ಕೆ ಬರುವುದು ಕಷ್ಟ''

''ಜ್ಞಾನ ಭಂಡಾರ, ಶಕ್ತಿ ಹಾಗೂ ನಂಬಿಕೆಯ ಪ್ಯಾಕೇಜ್ ಅವರು. ಕ್ರೇಜಿ ಸ್ಟಾರ್ ಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಹೀಗೇ ನಮಗೆ ಮನರಂಜನೆ ಕೊಡುತ್ತಿರಿ. ಜನ್ಮದಿನದ ಶುಭಾಶಯಗಳು ಅಣ್ಣ'' ಎಂದಿದ್ದಾರೆ ಸುದೀಪ್.

More from Filmibeat

English summary
Kannada Actor Kiccha Sudeep has taken his twitter account to wish Crazy Star Ravichandran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X