»   » ಮಡದಿ ಪ್ರಿಯಾ ಹುಟ್ಟುಹಬ್ಬಕ್ಕೆ ಸುದೀಪ್ ಸ್ಪೆಷಲ್ ಶುಭಾಶಯ

ಮಡದಿ ಪ್ರಿಯಾ ಹುಟ್ಟುಹಬ್ಬಕ್ಕೆ ಸುದೀಪ್ ಸ್ಪೆಷಲ್ ಶುಭಾಶಯ

Posted By:
Subscribe to Filmibeat Kannada
ಸುದೀಪ್ ತನ್ನ ಮುದ್ದಿನ ಮಡದಿಯ ಹುಟ್ಟುಹಬ್ಬಕ್ಕೆ ಪ್ರೀತಿಯ ಸಂದೇಶ | Filmibeat Kannada

ನಟ ಸುದೀಪ್ ಇತ್ತೀಚಿಗಷ್ಟೆ ತಮ್ಮ ಪತ್ನಿ ಪ್ರಿಯಾ ಮತ್ತು ಮಗಳ ಸಾನ್ವಿ ಜೊತೆ ಹೊಸ ವರ್ಷದ ಆಚರಣೆ ಮಾಡಿದ್ದರು. ಅದೇ ರೀತಿ ಇದೀಗ ಮತ್ತೆ ಕಿಚ್ಚನ ಕುಟುಂಬದಲ್ಲಿ ಸಂತಸ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಮಡದಿ ಪ್ರಿಯಾ ಹುಟ್ಟುಹಬ್ಬ.

ಸುದೀಪ್ ಪತ್ನಿ ಪ್ರಿಯಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇಬ್ಬರು ಜೊತೆಗೆ ಇರುವ ಫೋಟೋ ಹಾಕಿ ''ಹುಟ್ಟುಹಬ್ಬದ ಶುಭಾಶಯಗಳು... ನೀನು ನನ್ನ ಶಕ್ತಿ, ಶಾಂತಿ ಮತ್ತು ಗೌರವ'' ಎಂದು ಮೂರು ಪದದಲ್ಲಿ ಪ್ರೀತಿಯ ಪತ್ನಿಯನ್ನು ವರ್ಣಿಸಿದ್ದಾರೆ. ಸುದೀಪ್ ಟ್ವೀಟ್ ಅನ್ನು ಪ್ರಿಯಾ ರೀಟ್ವೀಟ್ ಮಾಡಿ ಧನ್ಯವಾದ ಎಂದು ಹೇಳಿದ್ದಾರೆ.

ಪ್ರೀತಿಯ ಪತ್ನಿ ಮತ್ತು ಮಗಳ ಜೊತೆ ಕಿಚ್ಚನ ಹೊಸ ವರ್ಷಾಚರಣೆ

ಅಂದಹಾಗೆ, ಸುದೀಪ್ ಮತ್ತು ಪತ್ನಿ ಪ್ರಿಯಾ ನಡುವೆ ಇದ್ದ ಮುನಿಸು ವಿಚ್ಚೇದನದ ವರೆಗೆ ಹೋಗಿತ್ತು. ಆದರೆ ಕೋರ್ಟ್ ನಲ್ಲಿ ಇನ್ನು ವಿಚ್ಚೇದನದ ಕೇಸ್ ಇರುವಾಗಲೇ ಈ ಜೋಡಿ ಮತ್ತೆ ಒಂದಾಗಿ ಹೊಸ ಜೀವನ ಶುರು ಮಾಡಿದರು. ಮತ್ತೆ ಸುದೀಪ್ ಅವರ ಶಾಂತಿ ನಿವಾಸದಲ್ಲಿ ಶಾಂತಿ ನೆಲೆಸಿತು. ಇತ್ತೀಚಿಗಷ್ಟೆ ಒಟ್ಟಿಗೆ ಹೊಸ ವರ್ಷ ಆಚರಣೆಯನ್ನು ಸುದೀಪ್ ಮತ್ತು ಪ್ರಿಯಾ ಮಾಡಿದ್ದರು.

English summary
Kannada actor Sudeep has taken his twitter account to wish for his wife Priya Sudeep birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X