For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ಸಾಧನೆಗೆ ಶುಭಕೋರಿದ ಕಿಚ್ಚ ಸುದೀಪ್

  |

  ಕನ್ನಡ ಚಿತ್ರರಂಗದಲ್ಲಿ 45 ವರ್ಷ ಪೂರೈಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಟ್ವಿಟ್ಟರ್‌ ಮೂಲಕ ವಿಶ್ ಮಾಡಿರುವ ಕಿಚ್ಚ ''ಇದು ದೊಡ್ಡ ಸಾಧನೆ'' ಎಂದು ಶ್ಲಾಘಿಸಿದ್ದಾರೆ.

  ''ನಿಮ್ಮ 45 ವರ್ಷದ ಸಂಪೂರ್ಣ ಜೀವನಕ್ಕೆ ಶುಭಾಶಯ ಪುನೀತ್ ರಾಜ್ ಕುಮಾರ್. ಇದು ದೊಡ್ಡ ಸಾಧನೆ. ಇದು ಇನ್ನು ಹೆಚ್ಚಿನ ವರ್ಷ ಆಗಲಿ ಎಂದು ಹಾರೈಸುತ್ತೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರದ ಸುದ್ದಿ: ಏನದು?

  2002ರಲ್ಲಿ ತೆರೆಕಂಡ 'ಅಪ್ಪು' ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ನಾಯಕನಾಗಿ ಎಂಟ್ರಿಕೊಟ್ಟರು. ಅಲ್ಲಿಂದ ಸುಮಾರು 25ಕ್ಕೂ ಅಧಿಕ ಚಿತ್ರಗಳಲ್ಲಿ ಪವರ್ ಸ್ಟಾರ್ ನಾಯಕ ನಟನಾಗಿ ನಟಿಸಿದ್ದಾರೆ.

  ವಿಶೇಷ ಅಂದ್ರೆ ನಾಯಕನಟನಾಗುವುದಕ್ಕೂ ಮೊದಲೇ ಅಪ್ಪು ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1985ನೇ ವರ್ಷದಲ್ಲಿ ತೆರೆಕಂಡ 'ಬೆಟ್ಟದ ಹೂವು' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು.

  'ಚಲಿಸುವ ಮೋಡಗಳು' ಹಾಗೂ 'ಎರಡು ಕನಸು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.

  ಕಾಶ್ಮೀರದಲ್ಲಿ ಯೋಧನಾದ ಪುನೀತ್ ರಾಜ್ ಕುಮಾರ್, ಫೋಟೋ ವೈರಲ್

  ಪುನೀತ್ ರಾಜ್ ಕುಮಾರ್ ಸಿನಿಮಾ ಅವರು 1975ರಲ್ಲಿ ಹುಟ್ಟಿದರು. ಆರು ತಿಂಗಳು ಮಗುವಿರಬೇಕಾದರೇ ರಾಜ್ ಕುಮಾರ್ ಹಾಗೂ ಆರತಿ ನಟಿಸಿದ್ದ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ಪುಟ್ಟಕಂದಮ್ಮನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ 1976ರಲ್ಲಿ ಬಿಡುಗಡೆಯಾಗಿತ್ತು.

  ಹೀಗೆ, ಮೊದಲ ವರ್ಷದಲ್ಲೇ ಚಿತ್ರರಂಗ ಪ್ರವೇಶಿಸಿದ ಪುನೀತ್ ರಾಜ್ ಕುಮಾರ್ ಸಿನಿಮಾ ಜರ್ನಿಗೆ ಈಗ 45 ವರ್ಷದ ಸಂಭ್ರಮ. ಈ ಸಂಭ್ರಮವನ್ನು ಪವರ್ ಸ್ಟಾರ್ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

  ರಾಬರ್ಟ್ ನಂತರ ತೆಲುಗಿನಲ್ಲಿ ಅಬ್ಬರಿಸಲು ಮುಂದಾದ ದರ್ಶನ್ | Darshan | BVSN Prasad
  English summary
  Powerstar Puneeth Rajkumar completes 45 years in kannada film industry. so, Kicccha Sudeep wishes to Appu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X