ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗ ಪತ್ರ ಬರೆದ ಸುದೀಪ್

By Bharath Kumar

Recommended Video

ಕಿಚ್ಚನ ಮೇಲೆ ಅಭಿಮಾನಿಗಳು ಫುಲ್ ಗರಂ | Filmibeat Kannada

ರಾಜಕೀಯ ಪಕ್ಷಗಳು ಮತ್ತು ಕೆಲವು ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ರು. ರಾಜುಗೌಡ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರ ಪರವಾಗಿ ಮತಯಾಚನೆ ಮಾಡಿದ್ರು.

ಇದು ಸಹಜವಾಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸುದೀಪ್ ಅವರನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟಪಡುತ್ತೇವೆ. ಆದ್ರೆ, ನೀವು ಅಭ್ಯರ್ಥಿಗಳ ಪರ ಪ್ರಚಾರ ಮಾಡೋಕೆ ಹೋಗಿದ್ದೀರಾ. ಇದು ತಪ್ಪು. ಹೀಗೆ ಮಾಡಬಾರದಿತ್ತು ಎಂಬ ಟೀಕೆಗಳು, ಬೇಸರದ ಮಾತುಗಳು ಅಭಿಮಾನಿ ವಲಯದಿಂದ ಕೇಳಿ ಬಂತು.

ಈ ಎಲ್ಲವನ್ನ ಗಮನಿಸಿ ಕಿಚ್ಚ ಸುದೀಪ್ ಕಠಿಣ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ. ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಇನ್ಮುಂದೆ ಪ್ರಚಾರ ಮಾಡುವುದಿಲ್ಲ ಎಂದು ಬಹಿರಂಗ ಪತ್ರ ಬರೆದಿದ್ದಾರೆ. ಹಾಗಿದ್ರೆ, ಸುದೀಪ್ ಬರೆದಿರುವ ಪತ್ರದಲ್ಲಿ ಏನಿದೆ.? ಮುಂದೆ ಓದಿ...

ನಾನು ಪ್ರಚಾರಕ್ಕೆ ಹೋಗಲು ಕಾರಣವಿದೆ

ನಾನು ಪ್ರಚಾರಕ್ಕೆ ಹೋಗಲು ಕಾರಣವಿದೆ

''ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ, ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು,, ಸಣ್ಣದು ಅಥವಾ ದೊಡ್ಡದು ಎಂಬುದು ವಿಷಯವಲ್ಲ,, ಅವರು ಅಂದು ನಿಂತದ್ದು ವಿಷಯ.. ಈಗ ಅವರಿಗಾಗಿ ನಾನು ಅಲ್ಲಿರುವುದು''.

ಪ್ರಚಾರಕ್ಕೆ ಹೋಗುವುದಿಲ್ಲ

ಪ್ರಚಾರಕ್ಕೆ ಹೋಗುವುದಿಲ್ಲ

''ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ,,ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು...ಅದರಲ್ಲಿ ಯಾವುದೇ ವಿಷಾದವಿಲ್ಲ ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ,,ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ''

ಗೆಳೆಯರು ಹಾಗೂ ಅಭಿಮಾನಿಗಳು ಮುಖ್ಯ

ಗೆಳೆಯರು ಹಾಗೂ ಅಭಿಮಾನಿಗಳು ಮುಖ್ಯ

''ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ..ನಾನು ಒಬ್ಬ ಕಲಾವಿದ ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗೂ ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ.. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,''

ಈ ನಿರ್ಧಾರ ನನ್ನವರಿಗಾಗಿ...

ಈ ನಿರ್ಧಾರ ನನ್ನವರಿಗಾಗಿ...

''ಆದರೂ, ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗೂ ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ...ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ...ತುಂಬು ಪ್ರೀತಿಯಿಂದ. ಕಿಚ್ಚ''

More from Filmibeat

English summary
Kannada actor kiccha Sudeep write a letter that he will not go to the any campaign in coming days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X