ಅಂಬರೀಶ್ ಬಗ್ಗೆ ಕಿಚ್ಚ ಸುದೀಪ್ ಬರೆದ ಭಾವಪೂರ್ಣ ಪತ್ರ ಇಲ್ಲಿದೆ
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಇಂದು ನಮ್ಮೊಂದಿಗಿಲ್ಲ ಎಂಬ ಕಹಿ ಸತ್ಯವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಅಜಾತಶತ್ರುವಾಗಿ ಬಾಳಿ ಬದುಕಿದ್ದ ಅಂಬರೀಶ್ ಇಂದು ಎಲ್ಲರನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇಡೀ ಕರುನಾಡಿನಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ನೋವಿನಿಂದಲೇ ಎಲ್ಲರೂ ಅಂಬಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಕಿಚ್ಚ ಸುದೀಪ್ ಕೂಡ ಅಷ್ಟೇ.. ನಿನ್ನೆ ಅಂಬರೀಶ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವ ವೇಳೆ ಸುದೀಪ್ ಕಣ್ಣೀರು ಹಾಕಿದ್ದರು. ಸುದೀಪ್ ಗೆ ಅಂಬರೀಶ್ ತಂದೆಯ ಸಮಾನ. ಹೀಗಾಗಿ, ತಂದೆಯನ್ನೇ ಕಳೆದುಕೊಂಡ ನೋವು ಸುದೀಪ್ ಗೆ ಕಾಡುತ್ತಿತ್ತು.
ಪ್ರೀತಿಯ ಅಂಬರೀಶ್ ರನ್ನು ಕಳೆದುಕೊಂಡ ನೋವಿನಲ್ಲಿ ಕಿಚ್ಚ ಸುದೀಪ್ ಭಾವಪೂರ್ಣ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಏನಿದೆ ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಓರ್ವ ನಾಯಕನನ್ನು ಕಳೆದುಕೊಂಡಿದ್ದೇವೆ
ಕೆಲವೊಮ್ಮೆ ದುಃಸ್ವಪ್ನ ಬಿದ್ದಾಗ, ''ಎದ್ದೇಳೋಣ.. ಎದ್ದರೆ ಕೆಟ್ಟ ಕನಸು ಕೊನೆಗೊಳ್ಳುತ್ತದೆ'' ಅಂತ ಭಾವಿಸುತ್ತೀವಲ್ಲಾ.. ಈ ದಿನವೂ ಹಾಗೆಯೇ.. ಚಿತ್ರಜಗತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ. ದೊಡ್ಡ ಲೆಜೆಂಡ್ ನ ನಾವು ಕಳೆದುಕೊಂಡಿದ್ದೇವೆ. ಇದರಿಂದ ಓರ್ವ ನಾಯಕ, ಪೋಷಕ, ಮಾರ್ಗದರ್ಶಕ, ಒಂದು ಧ್ವನಿ, ಶಕ್ತಿ, ಒಬ್ಬ ಒಳ್ಳೆಯ ಗೆಳೆಯ, ಸಹೃದಯಿಯನ್ನು ನಾವು ಕಳೆದುಕೊಂಡಂತಾಗಿದೆ.

ಹೃದಯ ಕರಗಿದೆ
ಈ ಕಹಿ ಸುದ್ದಿ ಹೃದಯವನ್ನೇ ಛಿದ್ರಗೊಳಿಸಿದೆ. ಲೆಜೆಂಡ್ ಈ ರೀತಿ ಮಲಗಿರುವುದನ್ನು ನೋಡಿ ನನ್ನ ಹೃದಯ ಕರಗಿತು. ನಮ್ಮೆಲ್ಲರಿಗೂ ಅವರ ವ್ಯಕ್ತಿತ್ವ ಗೊತ್ತು. ಎಲ್ಲೇ ಹೋದರೂ ಅವರಿಗೆ ಸಿಗುತ್ತಿದ್ದ ಗೌರವವನ್ನು ನಾವು ನೋಡಿದ್ದೇವೆ.

ರಾಜನ ಹಾಗೆ ಬದುಕಿದ ವ್ಯಕ್ತಿ
ಯಾವುದೇ ಗಡಿ ಇಲ್ಲದೆ, ರಾಜನ ಹಾಗೆ ಬದುಕಿದ ವ್ಯಕ್ತಿ ಅಂಬರೀಶ್. ಅವರು ಅದೃಷ್ಟವಂತರು ಅಂತ ನನಗೆ ಯಾವಾಗಲೂ ಅನಿಸುತ್ತಿತ್ತು. ಯಾಕಂದ್ರೆ, ಅವರನ್ನ ಇಷ್ಟ ಪಡದವರು ಯಾರೂ ಇಲ್ಲ. ದ್ವೇಷಿಸುವವರೂ ಇರಲಿಲ್ಲ. ಪ್ರತಿ ಜಾಗದಲ್ಲೂ ಅವರು ಸ್ನೇಹಿತರನ್ನು ಸಂಪಾದಿಸಿದ್ದರು. ವೈರಿಗಳು ಇಲ್ಲದೆ ಬರೀ ಸ್ನೇಹಿತರನ್ನು ಹೊಂದಿರುವುದು ಹೇಗೆ ಅನ್ನೋದೇ ನಿಗೂಢ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಅವರು ಅಪರೂಪದ ಮನುಷ್ಯ.

ಅಮೂಲ್ಯ ಕ್ಷಣಗಳನ್ನು ರಿವೈಂಡ್ ಮಾಡಿಕೊಳ್ಳಲು ಇಷ್ಟ
ಕೆಲವು ಅಮೂಲ್ಯ ಕ್ಷಣಗಳನ್ನು ರಿವೈಂಡ್ ಮಾಡಿಕೊಳ್ಳಲು ನಾನು ಇಷ್ಟ ಪಡುತ್ತೇನೆ. ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ.. ಅಂಬರೀಶ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಚಿತ್ರರಂಗದಲ್ಲಿ ಮೊದಲ ಶಾಟ್ ಎದುರಿಸಿದ ಕ್ಷಣಕ್ಕೆ ಹೋಗಬೇಕೆಂದು ಅನಿಸುತ್ತಿದೆ.

ಮೊಟ್ಟ ಮೊದಲ ಭೇಟಿ
ಶಿವಮೊಗ್ಗದಲ್ಲಿ ಅವರನ್ನು ಮೊಟ್ಟ ಮೊದಲ ಬಾರಿಗೆ ನೋಡಿದ ಕ್ಷಣಕ್ಕೆ ವಾಪಸ್ ಹೋಗಬೇಕೆಂಬ ಆಶಯವಿದೆ. ಅಂದು ಅವರು ಬಿಳಿ ಬಣ್ಣದ ಕುರ್ತಾ ಧರಿಸಿ ನಮ್ಮನೆಯ ಬೆಲ್ ಒತ್ತಿದಾಗ, ನಾನು ಓಡಿ ಹೋಗಿ ಬಾಗಿಲು ತೆಗೆದಿದ್ದೆ. ನನ್ನ ತಂದೆ 'ಒಳಗೆ ಬಾರಯ್ಯ ಅಂಬಿ' ಎಂದಿದ್ದರು. ನಿಮ್ಮನ್ನ ಮಿಸ್ ಮಾಡಿಕೊಳ್ಳುವೆ ಮಾಮ...
ದೀಪು


Click it and Unblock the Notifications











