ಕಿಚ್ಚನ ಸಾಧನೆಗೆ ಶುಭಾಶಯಗಳ ಸುರಿಮಳೆ

ಚಂದನವನದ ಅಭಿನಯ ಚಕ್ರವರ್ತಿ ಸಿನಿಮಾಗೆ ಬಣ್ಣ ಹಚ್ಚಿ 22ವರ್ಷಗಳು ಕಳೆದಿವೆ. ತಮ್ಮ ಸಿನಿಮಾ ಪ್ರಯಾಣವನ್ನ ನೆನಪಿಸಿಕೊಂಡು ಈ ಯಶಸ್ಸಿಗೆ ಕಾರಣವಾದ ಪ್ರತಿಯೊಬ್ಬರಿಗೂ ಪತ್ರದ ಮೂಲಕ ಕಿಚ್ಚ ಧನ್ಯವಾದ ಅರ್ಪಿಸಿದ್ದಾರೆ.

ಸುದೀಪ್ ಸಿನಿಮಾರಂಗದ ಸಾಧನೆಯನ್ನ ತಿಳಿದ ಅನೇಕರು ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ. ಚಿತ್ರರಂಗದಲ್ಲಿ ಎರಡು ದಶಕದ ಸಾಧನೆಯನ್ನ ಮೆಚ್ಚಿ ಕೊಂಡಾಡಿದ್ದಾರೆ. ನಟ ಪ್ರದೀಪ್ "ನಿಮ್ಮನ್ನ ಅಣ್ಣ ಅಂತ ಹೇಳಿಕೊಳ್ಳಲು ಖುಷಿ ಆಗುತ್ತದೆ.ಕನ್ನಡ ಹಾಗೂ ಕರ್ನಾಟಕದ ಕೀರ್ತಿಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ನಿಮಗಿದೆ. ಇದೇ ರೀತಿ ಯುವಕರಿಗೆ ಸದಾ ಉತ್ಸಾಹ ನೀಡುತ್ತಾ ಎಲ್ಲರಿಗೂ ಸ್ಫೂರ್ತಿ ಆಗಿರಿ "ಎಂದು ಟ್ವಿಟ್ ಮಾಡಿದ್ದಾರೆ.

ನಿರ್ದೇಶಕ ಹಾಗೂ ಕ್ಯಾಮೆರಾ ಮ್ಯಾನ್ ಗಜಕೇಸರಿ ಕೃಷ್ಣ ಕೂಡ ಟ್ವಿಟ್ಟರ್ ಮೂಲಕ ಸುದೀಪ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. 'ಶ್ರಮಪಟ್ಟು ಕೆಲಸ ಮಾಡುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇನ್ನೂ ಸಾಧನೆ ಮಾಡಲು ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ, ಅಭಿನಂದನೆಗಳು" ಎಂದಿದ್ದಾರೆ.

Kiccha Sudheep thanked fans through Twitter

ಬಿಗ್ ಬಾಸ್ ನ ಸ್ಪರ್ಧಿ ಆಗಿದ್ದ ನಟ ಜಗನ್ ಕೂಡ ಕಿಚ್ಚನಿಗೆ ಶುಭಾಶಯ ಹೇಳಿದ್ದಾರೆ. "22 ವರ್ಷ ಸಿನಿಮಾರಂಗದಲ್ಲಿ ಪೂರೈಸಿರುವದಕ್ಕೆ ಶುಭಾಶಯಗಳು ನನ್ನನ್ನೂ ಸೇರಿ ಸಾಕಷ್ಟು ಯವಕರಿಗೆ ನೀವು ಸ್ಫೂರ್ತಿ".

ಸಾವಿರಾರು ಅಭಿಮಾನಿಗಳು ಕಿಚ್ಚನ ಸಾಧನೆಯನ್ನ ಹೊಗಳಿ ತಮ್ಮದೇ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಸುದೀಪ್ ಕೂಡ ಪ್ರತಿಯೊಬ್ಬರಿಗೂ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Kannada actor Kiccha Sudheep's has completed 22 years in Kannada film industry. Sudeep thanked fans through Twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X