ಶೀಘ್ರದಲ್ಲೇ ಬಿಗ್‌ಬಾಸ್ ಕನ್ನಡ ಮಿನಿ ಸೀಸನ್- 2 ನಿಜಾನಾ? ಹಾಗಾದ್ರೆ 'ಕಿಚ್ಚ46'ಕಥೆಯೇನು?
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಈಗಾಗಲೇ 9 ಸೀಸನ್ ಕಂಪ್ಲೀಟ್ ಆಗಿದೆ. ಇದರ ನಡುವೆ ಒಂದು ಮಿನಿ ಸೀಸನ್ ಕೂಡ ಬಂದು ವೀಕ್ಷಕರನ್ನು ರಂಜಸಿದೆ. ಇದೀಗ ಬಿಗ್‌ಬಾಸ್ ಹೊಸ ಶೋ ಬಗ್ಗೆ ಚರ್ಚೆ ಶುರುವಾಗಿದೆ. ಸುದೀಪ್ ಸದ್ಯ 'ಕಿಚ್ಚ46' ಸಿನಿಮಾ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
'ವಿಕ್ರಾಂತ್ ರೋಣ' ನಂತರ ಕಿಚ್ಚ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆ ಸಿನಿಂಆ ರಿಲೀಸ್ ಆಗಿ ವರ್ಷವಾಗುತ್ತಾ ಬಂದರೂ ಹೊಸ ಸಿನಿಮಾ ಆರಂಭವಾಗದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಸುದೀಪ್ ಬಹಳ ದೊಡ್ಡ ಗ್ಯಾಪ್ ತಗೊಂಡಿದ್ದಾರೆ. ಆದರೆ 3 ಸಿನಿಮಾ ಕಥೆಗಳನ್ನು ಫೈನಲ್ ಮಾಡಿದ್ದು ಅದರಲ್ಲಿ ಒಂದು ಸಿನಿಮಾ ಘೋಷಣೆ ಆಗಿದೆ. 'ಕಿಚ್ಚ46' ಚಿತ್ರವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣ ಮಾಡಲಿದ್ದಾರೆ. ಕಾಲಿವುಡ್ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಇನ್ನುಳಿದ ಮಾಹಿತಿ ಇನ್ನು ಸಿಕ್ಕಿಲ್ಲ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡಿ ಸಿನಿಮಾ ಆರಂಭಿಸುವ ಸುಳಿವು ಸಿಗುತ್ತಿದೆ.

ಕಳೆದ ವರ್ಷ ಬಿಗ್‌ಬಾಸ್ ಸೀಸನ್ 9ಕ್ಕೂ ಮುನ್ನ ಮಿನಿ ಸೀಸನ್ ಬಂದಿತ್ತು. ಈ ಓಟಿಟಿ ಸೀಸನ್ ವೂಟ್‌ನಲ್ಲಿ ಪ್ರಸಾರವಾಗಿತ್ತು. ಇದೀಗ ಮಿನಿ ಸೀಸನ್- 2 ಆರಂಭವಾಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಸುದೀಪ್ ಮುಂದಿನ ಸಿನಿಮಾ ಶುರುವಾಗುವ ಮುನ್ನ ಮತ್ತೆ ಬಿಗ್‌ಬಾಸ್ ವೇದಿಕೆ ಏರುತ್ತಾರಾ? ಎನ್ನುವ ಅನುಮಾನ ಮೂಡಿದೆ. ಇದನ್ನು ಕೇಳಿ ಅಭಿಮಾನಿಗಳಿಗೂ ಕೊಂಚ ಬೇಸರವಾಗಿದೆ.
ಬಿಗ್‌ಬಾಸ್ ಮಿನಿ ಸೀಸನ್- 2 ಯಾವಾಗ?
ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಮಿನಿ ಸೀಸನ್- 2 ಶೀಘ್ರದಲ್ಲೇ ಶುರುವಾಗುತ್ತದೆ. ಈಗಾಗಲೇ ಅದರ ಸಿದ್ಧತೆ ನಡೀತಿದೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ. ಆದರೆ ಈವರೆಗೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಮಿನಿ ಸೀಸನ್ ಬಂದರೂ ಈ ಬಾರಿ ಸುದೀಪ್ ನಿರೂಪಣೆ ಮಾಡುವ ಬಗ್ಗೆ ಅನುಮಾನ ಇದೆ. ಸದ್ಯಕ್ಕಂತು ಕಿಚ್ಚನ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆದಂತೆ ಕಾಣುತ್ತಿಲ್ಲ. ಆದರೆ ಹಿಂದಿ ಬಿಗ್‌ಬಾಸ್ ಮಿನಿ ಸೀಸನ್ ಶೀಘ್ರದಲ್ಲೇ ಆರಂಭವಾಗುತ್ತಿದೆ.
ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಸೀಸನ್ 10
ಮಿನಿ ಸೀಸನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಪ್ರತಿ ವರ್ಷದಂತೆ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಕನ್ನಡ ಬಿಗ್‌ಬಾಸ್ ಶೋ ನಡೆಯಲಿದೆ. ಈ ಬಾರಿ 10 ಸೀಸನ್‌ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬಂದು ಸಕ್ಸಸ್ ಕಂಡ ಶೋನ 10 ವರ್ಷಗಳ ಹಿಂದೆ ಕನ್ನಡದಲ್ಲಿ ಆರಂಭಿಸಲಾಗಿತ್ತು. ಹಿಂದಿ ಬಿಟ್ಟರೆ ಕನ್ನಡದಲ್ಲೇ ಈ ಶೋ ಹೆಚ್ಚು ಜನಪ್ರಿಯವಾಗಿದೆ. ಸುದೀಪ್ ನಿರೂಪಣೆಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದಕ್ಕಾಗಿ ಕಿಚ್ಚ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಶೀಘ್ರದಲ್ಲೇ 'ಕಿಚ್ಚ46' ಟೀಸರ್
ಸುದೀಪ್ ನಟನೆಯ 46ನೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಟೀಸರ್ ಶೂಟಿಂಗ್ ಕೂಡ ಮುಗಿದಿದೆ. ಅದರ ಸಣ್ಣ ಝಲಕ್ ಜೊತೆಗೆ ಚಿತ್ರವನ್ನು ಸುದೀಪ್ ಘೋಷಿಸಿದ್ದಾರೆ. ಆದರೆ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ. ಜೂನ್ ಮೊದಲ ವಾರದಲ್ಲೇ ಟೀಸರ್ ಬರುವ ನಿರೀಕ್ಷೆ ಇತ್ತು. ಆದರೆ ರಿಲೀಸ್ ಆಗಲಿಲ್ಲ. ಇನ್ನು ಬಹುತೇಕ ಕಾಲಿವುಡ್‌ನಲ್ಲೇ ಈ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. ಅಲ್ಲಿನ ತಂತ್ರಜ್ಞರೇ ಹೆಚ್ಚು ಕೆಲಸ ಮಾಡಲಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ದೊಡ್ಡ ದೊಡ್ಡ ಚಿತ್ರಗಳಲ್ಲಿ ಕಿಚ್ಚ
'ಕಿಚ್ಚ46' ಮಾತ್ರವಲ್ಲ ಇನ್ನು 2 ಸಿನಿಮಾಗಳಿಗೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಯಾವ ಸಿನಿಮಾ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ನಂದ ಕಿಶೋರ್ ಹಾಗೂ ಅನೂಪ್ ಭಂಡಾರಿ ಕಿಚ್ಚನಿಗಾಗಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆಗೂ ಸುದೀಪ್ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್‌ನ ಲಾಂಚ್ ಮಾಡುತ್ತಿದ್ದಾರೆ. 'ಜಿಮ್ಮಿ' ಟೈಟಲ್‌ನಲ್ಲಿ ಈ ಸಿನಿಮಾ ಬರ್ತಿದ್ದು ಕೆ. ಪಿ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಜೊತೆ ಸೇರಿ ಬಂಡವಾಳ ಹೂಡುತ್ತಿದ್ದಾರೆ.


Click it and Unblock the Notifications











