For Quick Alerts
  ALLOW NOTIFICATIONS  
  For Daily Alerts

  'ಅಂಜನಿಪುತ್ರ'ನ ಜೊತೆ 'ಕಿಚ್ಚು' ಹಚ್ಚಲಿರುವ ಅಭಿನಯ ಚಕ್ರವರ್ತಿ ಸುದೀಪ್

  By Pavithra
  |

  ನಿನ್ನೆಯಷ್ಟೇ ತೆರೆಕಂಡಿರುವ 'ಅಂಜನಿಪುತ್ರ' ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದಿನಿಂದ 'ಅಂಜನಿಪುತ್ರ' ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಕಿಚ್ಚ ಸುದೀಪ್ ಕೂಡ ಥಿಯೇಟರ್ ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

  ಅರೆ...ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಸುದೀಪ್ ಬರುವುದಕ್ಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡಿರುತ್ತದೆ. ಅದಕ್ಕೆ ಉತ್ತರ ನಾವು ಹೇಳುತ್ತೇವೆ. 'ಅಂಜನಿಪುತ್ರ' ಸಿನಿಮಾ ಜೊತೆಯಲ್ಲಿ ಇಂದಿನಿಂದ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ 'ಕಿಚ್ಚು' ಚಿತ್ರದ ಟ್ರೇಲರ್ ಪ್ರದರ್ಶನವಾಗುತ್ತಿದೆ.

  ರಾಗಿಣಿ ದ್ವಿವೇದಿ ಹಾಗೂ ಧ್ರುವ ಶರ್ಮಾ ಅಭಿನಯದ 'ಕಿಚ್ಚು' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಪ್ರದೀಪ್ ಕುಮಾರ್ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಿಟ್ ಜೋಡಿ ಎನ್ನಿಸಿಕೊಂಡಿರುವ ರಾಗಿಣಿ ಮತ್ತು ಸುದೀಪ್ 'ಕಿಚ್ಚು' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ "ಅಂಜನಿಪುತ್ರ"

  'Kicchu' movie trailer will be showcased with 'Anjani Puthra' movie

  'ಕಿಚ್ಚು' ಚಿತ್ರವನ್ನ ಧ್ರುವ ಶರ್ಮಾ ಅವರೇ ನಿರ್ಮಾಣ ಮಾಡಿದ್ದು, ಸದ್ಯ ಅವರ ಪತ್ನಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಾಯಿಕುಮಾರ್ ಮತ್ತು ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.

  English summary
  Kannada movie Kicchu trailer will be showcased with Anjani Puthra movie, Actress Ragini dwivedi and Dhruv sharma have acted in Kicchu movie, Kiccha Sudeep plays a special character in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X