ಟ್ವಿಟರ್ ಕ್ರೇಜ್ ಲೆಕ್ಕಾಚಾರ; ದರ್ಶನ್ 'ಕಾಟೇರ' ಮೀರಿಸಿದ 'ಕಿಚ್ಚ 46'!

ಚಂದನವನದಲ್ಲಿ ಸದ್ಯ ಸ್ಟಾರ್ ನಟರ ಮುಂದಿನ ಚಿತ್ರಗಳ ಬಗೆಗಿನ ಚರ್ಚೆ ಸಿಕ್ಕಾಪಟ್ಟೆ ಜೋರಾಗಿದೆ. ಒಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿಯ ಸಾಧಾರಣ ಫಲಿತಾಂಶದ ಬಳಿಕ ತರುಣ್ ಸುಧೀರ್ ಜತೆ ಕೈ ಜೋಡಿಸಿದ್ದು ಕಾಟೇರ ಚಿತ್ರದಲ್ಲಿ ಬ್ಯುಸಿ ಇದ್ದರೆ, ಶಿವ ರಾಜ್‌ಕುಮಾರ್ ನಟನೆಯ ಘೋಸ್ಟ್ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಅತ್ತ ಮತ್ತಿಬ್ಬರು ಸ್ಟಾರ್ ನಟರಾದ ಯಶ್ ಹಾಗೂ ಕಿಚ್ಚ ಸುದೀಪ್ ಮುಂದಿನ ಚಿತ್ರಗಳ ಬಗ್ಗೆಯೂ ಚರ್ಚೆ ಜೋರಾಗಿದೆ. ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಹಾಗೂ ಯಶ್ ಕೆಜಿಎಫ್ ಚಾಪ್ಟರ್ 2 ಬಳಿಕ ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಅವರವರ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಮೂಡಿದೆ.

Kichcha 46 announcement poster beats D 56 announcement poster likes on twitter

ಯಶ್ ತಮ್ಮ ಮುಂದಿನ ಚಿತ್ರವನ್ನು ಯಾವ ನಿರ್ದೇಶಕ ಹಾಗೂ ಪ್ರೊಡಕ್ಷನ್ ಹೌಸ್ ಜತೆ ಮಾಡಲಿದ್ದಾರೆ ಎಂಬುದನ್ನು ಇನ್ನೂ ಸಹ ಘೋಷಿಸದೇ ಇದ್ದು, ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದು ಮೊನ್ನೆಯಷ್ಟೇ ತಿಳಿದುಬಂದಿದೆ.

ಸುದೀಪ್ ನಟಿಸಲಿರುವ 46ನೇ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಯಾರು ಎಂಬ ಮಾಹಿತಿ ಮಾತ್ರ ಸದ್ಯ ಹೊರಬಿದ್ದಿದ್ದು, ಇನ್ನೂ ಹೆಚ್ಚಿನ ಮಾಹಿತಿ ಜುಲೈ 2ರಂದು ಹೊರಬೀಳಲಿರುವ ಚಿತ್ರದ ಗ್ಲಿಂಪ್ಸ್ ವಿಡಿಯೊ ಮೂಲಕ ತಿಳಿದು ಬರಲಿದೆ.

ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ಮಾಪಕ ಕಲೈಪ್ಪುಲಿ ಎಸ್ ಧನು ಎಂಬುವವರು ವಿ ಕ್ರಿಯೇಷನ್ಸ್ ಎಂಬ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಲಿದ್ದು, ವಿಜಯ್ ಕಾರ್ತಿಕೇಯ ಎಂಬ ನೂತನ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಮೊನ್ನೆ ( ಜೂನ್ 27 ) ರಂದು ಸಂಜೆ 6.30ಕ್ಕೆ ಈ ಕಿಚ್ಚ 46 ಚಿತ್ರದ ಅಪ್‌ಡೇಟ್ ಅನ್ನು ಹಂಚಿಕೊಂಡ ಕಿಚ್ಚ ಸುದೀಪ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಚಿತ್ರದ ಗ್ಲಿಂಪ್ಸ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಘೋಷಣೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟರ್‌ಗೆ ಇಂದು ( ಜೂನ್ 29 ) 11,900 ಲೈಕ್ಸ್‌ಗಳು ಸಂಪೂರ್ಣವಾಗಿದೆ.

ಈ ಮೂಲಕ ಈ ಘೋಷಣೆಯ ಟ್ವೀಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರದ ಟೈಟಲ್ ಅನಾವರಣದ ದಿನಾಂಕದ ಘೋಷಣೆಯ ಟ್ವೀಟ್‌ಗೆ ಬಂದಿದ್ದ ಲೈಕ್ಸ್ ಅನ್ನು ಹಿಂದಿಕ್ಕಿದೆ. ಹೌದು, ಫೆಬ್ರವರಿ 10ರಂದು ನಿರ್ದೇಶಕ ತರುಣ್ ಸುಧೀರ್ ಅವರು D56 ಚಿತ್ರದ ಟೈಟಲ್ ಅನಾವರಣದ ದಿನಾಂಕವನ್ನು ಘೋಷಿಸಿದ್ದರು. ಈ ಟ್ವೀಟ್ ಇಲ್ಲಿಯವರೆಗೂ 11,900 ಲೈಕ್ಸ್ ಪಡೆದುಕೊಂಡಿದೆ.

ಹೀಗೆ ಕಾಟೇರ ಚಿತ್ರದ ಮೊದಲ ಅಪ್‌ಡೇಟ್ ಪೋಸ್ಟರ್ ನಾಲ್ಕು ತಿಂಗಳುಗಳಲ್ಲಿ ಪಡೆದುಕೊಂಡಿರುವ ಲೈಕ್ಸ್ ಅನ್ನು ಕಿಚ್ಚ 46 ಚಿತ್ರದ ಫಸ್ಟ್ ಅಪ್‌ಡೇಟ್ ಪೋಸ್ಟರ್ ಕೇವಲ 2 ದಿನಗಳಲ್ಲಿ ಪಡೆದುಕೊಳ್ಳುವುದರ ಮೂಲಕ ಹಿಂದಿಕ್ಕಿದೆ. ಈ ಲೆಕ್ಕಾಚಾರದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್ ವಿಚಾರ ಭಾರೀ ಚರ್ಚೆಗೀಡಾಗಿದೆ.

ಇನ್ನು ಕಿಚ್ಚ 46 ಟ್ವೀಟ್ ಅನ್ನು 2.8 ಮಿಲಿಯನ್ ಫಾಲೋವರ್ಸ್ ಇರುವ ಸುದೀಪ್ ಅವರ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, D56 ಚಿತ್ರದ ಟ್ವೀಟ್ ಅನ್ನು ಕೇವಲ 1,48,000 ಫಾಲೋವರ್ಸ್ ಇರುವ ತರುಣ್ ಸುಧೀರ್ ಅವರ ಖಾತೆಯಲ್ಲಿ ಮಾಡಲಾಗಿದೆ. ಈ ಅಂಶವನ್ನೂ ಸಹ ಉಲ್ಲೇಖಿಸಿರುವ ದರ್ಶನ್ ಅಭಿಮಾನಿಗಳು ಕಡಿಮೆ ಫಾಲೋವರ್ಸ್ ಇರುವ ಖಾತೆಯ ಟ್ವೀಟ್ ಆದ ಕಾರಣ ಲೈಕ್ಸ್ ಕಡಿಮೆ ಇವೆ ಎಂಬ ಕಾರಣವನ್ನೂ ಸಹ ನೀಡಿದ್ದಾರೆ.

More from Filmibeat

English summary
Kichcha 46 announcement poster beats D 56 announcement poster likes on twitter. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X