ಕಾಟೇರ vs ಕಿಚ್ಚ 46 ಟೀಸರ್ ವಾರ್; ಹೆಚ್ಚು ವ್ಯೂಸ್ ಪಡೆದು ಗೆದ್ದ ಚಿತ್ರ ಯಾವುದು?

ನಿನ್ನೆ ( ಜುಲೈ 2 ) ಬಹು ನಿರೀಕ್ಷಿತ ಚಿತ್ರ ಕಿಚ್ಚ 46ನ ಮೊದಲ ಟೀಸರ್ ಬಿಡುಗಡೆಗೊಂಡಿತು. ಕಳೆದ ವರ್ಷ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರವನ್ನು ಯಾವ ನಿರ್ದೇಶಕ ಹಾಗೂ ನಿರ್ಮಾಪಕರ ಜತೆ ಮಾಡಲಿದ್ದಾರೆ ಎಂಬ ಕುತೂಹಲ ಹುಟ್ಟಿಕೊಂಡಿತ್ತು.

ಈ ಕುತೂಹಲಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ಧನು ಬ್ರೇಕ್ ಹಾಕಿದರು. ಕಿಚ್ಚ ಸುದೀಪ್ ನಟನೆಯ 46ನೇ ಚಿತ್ರಕ್ಕೆ ತಾವೇ ಬಂಡವಾಳ ಹೂಡುವುದಾಗಿ ವಿಶೇಷ ವಿಡಿಯೊವೊಂದನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದರು.

Kichcha 46 announcement teaser beats Darshan Kaatera announcement teaser on youtube

ಇನ್ನು ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಎಂಬ ಹೊಸ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರತಂಡ ನಿನ್ನೆ ವಿಶೇಷ ಗ್ಲಿಂಪ್ಸ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟುಹಾಕುವ ಕೆಲಸವನ್ನು ಮಾಡಿದೆ. ಹೌದು, ಕಿಚ್ಚ 46 ಚಿತ್ರದ 'ಡೀಮನ್ ವಾರ್ ಬೆಗಿನ್ಸ್' ಎಂಬ ಟೀಸರ್ ಅನ್ನು ಚಿತ್ರತಂಡ ಬಿಡುಗಡೆಯಾಗಿದ್ದು, ಈ ವಿಡಿಯೊದಲ್ಲಿ ಕಿಚ್ಚ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವೈರಿಗಳ ಮಾರಣಹೋಮ ನಡೆಸಿ ಮತ್ತಷ್ಟು ಖಳರಿಗೆ ತಾನು ಹೊಡೆಯಲು ಸಿದ್ಧ ಎಂಬ ಸಿಗ್ನಲ್ ನೀಡುವ ಕಿಚ್ಚ ಸುದೀಪ್ 'ನಾನು ಮನುಷ್ಯನಲ್ಲ, ರಾಕ್ಷಸ' ಎಂಬ ಡೈಲಾಗ್ ಹೇಳಿ ಈ ಟೀಸರ್‌ನಲ್ಲಿ ಅಬ್ಬರಿಸಿದ್ದು, ಇದೊಂದು ಮಾಸ್ ಸಿನಿಮಾ ಎಂಬ ಸುಳಿವು ಇದರಿಂದ ತಿಳಿದುಬಂದಿದೆ.

ಹೀಗೆ ಸುದೀಪ್ ಮಾಸ್ ಲುಕ್‌ಗೆ ಅಭಿಮಾನಿಗಳು ಹಾಗೂ ಸಿನಿ ರಸಿಕರು ಫಿದಾ ಆಗಿದ್ದು, ಈ ವಿಡಿಯೊ ಯುಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸದ್ಯ ಈ ವಿಡಿಯೊ ಬಿಡುಗಡೆಗೊಂಡು 24 ಗಂಟೆಗಳು ಕಳೆದಿದ್ದು, ಈ ಅವಧಿಗೆ ಈ ವಿಡಿಯೊ 2.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಹೀಗೆ ಕಿಚ್ಚ 46 ಚಿತ್ರದ ಗ್ಲಿಂಪ್ಸ್ ಇಷ್ಟು ವೀಕ್ಷಣೆಗಳನ್ನು ಪಡೆದುಕೊಂಡ ಬೆನ್ನಲ್ಲೇ ಸುದೀಪ್ ಅಭಿಮಾನಿಗಳು ಈ ವಿಡಿಯೊನ ವೀಕ್ಷಣೆಗಳ ಸಂಖ್ಯೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರದ ಮೋಷನ್ ಪೋಸ್ಟರ್ ವೀಕ್ಷಣೆಗಳ ಜತೆ ಹೋಲಿಕೆ ಮಾಡಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಹೌದು, ಕಿಚ್ಚ 46 ಚಿತ್ರದ ಈ ಅನೌನ್ಸ್‌ಮೆಂಟ್ ವಿಡಿಯೊ ಒಂದೇ ದಿನಕ್ಕೆ 2.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಟೇರ ಚಿತ್ರದ ಟೈಟಲ್ ಅನೌನ್ಸ್‌ಮೆಂಟ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ನ ವಿಡಿಯೊ 4 ತಿಂಗಳುಗಳಲ್ಲಿ 1.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಮೂಲಕ ಕಿಚ್ಚ 46 ಕಾಟೇರವನ್ನು ಹಿಂದಿಕ್ಕಿದೆ ಎಂದು ಪೋಸ್ಟ್‌ಗಳು ಹರಿದಾಡುತ್ತಿವೆ.

ಆದರೆ ಕಿಚ್ಚ 46 ಚಿತ್ರದ ಈ ವಿಡಿಯೊದಲ್ಲಿ ದೃಶ್ಯವಿದೆ, ಕಿಚ್ಚ ಸುದೀಪ್ ಅವರ ಡೈಲಾಗ್ ಇದ್ದು, ಕಾಟೇರ ಮೋಷನ್ ಪೋಸ್ಟರ್‌ನಲ್ಲಿ ಇದ್ಯಾವುದೂ ಇಲ್ಲ. ಕೇವಲ ಒಂದು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಬ್ಯಾಕ್‌ಗ್ರೌಂಡ್‌ನಲ್ಲಿ ದರ್ಶನ್ ವಾಯ್ಸ್ ಓವರ್ ಇದ್ದು, ಇದೊಂದು ಮೋಷನ್ ಪೋಸ್ಟರ್ ಆಗಿದೆ. ಹೀಗಾಗಿ ಎರಡೂ ವಿಡಿಯೊಗಳ ನಡುವಿನ ಹೋಲಿಕೆ ಸರಿಯಲ್ಲ ಎಂದೇ ಹೇಳಬಹುದಾಗಿದ್ದು, ಚಿತ್ರಗಳ ಟೀಸರ್‌ಗಳು ಬಿಡುಗಡೆಯಾದ ಬಳಿಕ ಈ ಲೆಕ್ಕಾಚಾರ ಹಾಕಬಹುದಾಗಿದೆ.

More from Filmibeat

English summary
Kichcha 46 announcement teaser beats Darshan Kaatera announcement teaser on youtube. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X