ಕಿಚ್ಚ 46 ಚಿತ್ರಕ್ಕೆ ಈ ಮಿಲ್ಕಿ ಬ್ಯೂಟಿ ನಾಯಕಿ? ಫೋಟೊಸ್ ನೋಡಿ ಫಿದಾ ಆದ ಸಿನಿಪ್ರಿಯರು; ಯಾರು ಈ ಬೆಡಗಿ?

Kichcha 46: Simrat Kaur likely to play lead role in Kichcha Sudeeps next film

ವಿಕ್ರಾಂತ್ ರೋಣ ಬಳಿಕ ನಟ ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎಂಬ ಚರ್ಚೆ ಹಾಗೂ ಕುತೂಹಲ ಕಳೆದ ಹಲವಾರು ತಿಂಗಳುಗಳಿಂದ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಳಿ ಮುಂದಿನ ಚಿತ್ರ ಯಾವುದು ಹಾಗೂ ಯಾವಾಗ ಘೋಷಣೆ ಮಾಡ್ತೀರ ಎಂದು ಕೇಳಿ ಸುಸ್ತಾಗಿದ್ದರು.

ವಿಕ್ರಾಂತ್ ರೋಣ ಬಳಿಕ ತುಸು ದೊಡ್ಡ ವಿರಾಮವನ್ನೇ ಪಡೆದುಕೊಂಡಿದ್ದ ಸುದೀಪ್ ಸಿಸಿಎಲ್ ಕ್ರಿಕೆಟ್ ಟೂರ್ನಿ ಹಾಗೂ ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೀಗೆ ಬ್ಯುಸಿ ಇದ್ದ ಸುದೀಪ್ ಬಳಿಕ 3 ಕಥೆಗಳನ್ನು ಕೇಳಿದ್ದು ಅದರಲ್ಲಿ ಒಂದನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದರು.

ಅದರಂತೆ ಕಿಚ್ಚ ಸುದೀಪ್ ಮೇ 24ರಂದು ತಮ್ಮ ಮುಂದಿನ ಸಿನಿಮಾದ ಮಾಹಿತಿಯನ್ನು ಹಂಚಿಕೊಂಡಿದ್ದರು. ತಮಿಳಿನ ಕಲೈಪುಲಿ ಎಸ್ ತನು ಎಂಬ ನಿರ್ಮಾಪಕರ ಚಿತ್ರದಲ್ಲಿ ನಟಿಸುವುದಾಗಿ ಸುದೀಪ್ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದರು.

ಈ ಚಿತ್ರದ ಶೀರ್ಷಿಕೆಯಾಗಲಿ, ನಿರ್ದೇಶಕರಾಗಲಿ, ನಾಯಕಿಯಾಗಲಿ ಹಾಗೂ ಇತರೆ ಕಲಾವಿದರ ಮತ್ತು ತಂತ್ರಜ್ಞರ ಬಗ್ಗೆಯಾಗಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿರಲಿಲ್ಲ. ಇನ್ನು ಕಿಚ್ಚ ಮುಂದಿನ ಚಿತ್ರ ಯಾವುದೆಂದು ಅರಿತ ಸುದೀಪ್ ಅಭಿಮಾನಿಗಳಲ್ಲಿ ಆ ಚಿತ್ರದ ನಾಯಕಿ ಹಾಗೂ ನಿರ್ದೇಶಕರು ಯಾರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿದ್ದವು.

ಚಿತ್ರತಂಡ ಚಿತ್ರ ಘೋಷಣೆಯಾಗಿ ವಾರ ಕಳೆದರೂ ಈ ಕುರಿತು ಮಾಹಿತಿ ಬಿಟ್ಟುಕೊಡದೇ ಇದ್ದರೂ ಕೆಲವು ವೆಬ್ ತಾಣಗಳು ಈ ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನೀಡಿವೆ. ಇಂಡಿಯಾ ಟುಡೇ ಸುದ್ದಿಯ ಪ್ರಕಾರ ಮಹಾರಾಷ್ಟ್ರದ ಮುಂಬೈ ಮೂಲದ ನಟಿ ಸಿಮ್ರಾತ್ ಕೌರ್ ಸುದೀಪ್ 46ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ಈ ಸುದ್ದಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ನಟಿ ಯಾರು, ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ. ಈ ನಟಿಯ ಸಾಮಾಜಿಕ ಜಾಲತಾಣದ ಖಾತೆಗಳನ್ನು ಜಾಲಾಡುತ್ತಿರುವ ಸಿನಿ ರಸಿಕರು ನಟಿಯ ಲುಕ್‌ಗೆ ಫಿದಾ ಆಗಿದ್ದಾರೆ. ಸುದೀಪ್ ಅವರಿಗೆ ತೆರೆ ಮೇಲೆ ಒಳ್ಳೆಯ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಸಿಮ್ರಾತ್ ಕೌರ್ ಮೂಲತಃ ಮಹಾರಾಷ್ಟ್ರದ ನಟಿಯಾದರೂ ನಟನೆ ಆರಂಭಿಸಿದ್ದು ತೆಲುಗು ಚಿತ್ರರಂಗದ ಮೂಲಕ. ಕಾರ್ತಿಕೇಯ ನಾಯಕನಾಗಿ ನಟಿಸಿದ್ದ ಪ್ರೇಮತೊ ಮೀ ಕಾರ್ತಿಕ್ ಎಂಬ ಚಿತ್ರದಲ್ಲಿ ನಟಿಸಿದ್ದ ಈಕೆ ಬಳಿಕ ಪರಿಚಯಂ ಎಂಬ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಿದ್ದರು. ನಂತರ ಸೋನಿ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸಿಮ್ರಾತ್ ಕೌರ್ ಡರ್ಟಿ ಹರಿ ಹಾಗೂ ಬಂಗಾರ್ರಾಜು ಎಂಬ ಸಿನಿಮಾಗಳಲ್ಲಿ ನಟಿಸಿ ಈಗ ಬಿಡುಗಡೆಗೆ ಸಿದ್ಧವಾಗಿರುವ ಗದಾರ್ 2 ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಕಾರಿನಿಂದ ಇಳಿದು ಬಂದು ನಿರ್ಮಾಪಕರ ಕೈಕುಲುಕಿ ಕನ್ನಡಿ ಮುಂದೆ ನಿಂತು ಚಿತ್ರೀಕರಣಕ್ಕೆ ಸಿದ್ಧವಾಗುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇದ್ದು, 'ಸ್ಟೆಪಿಂಗ್ ಇನ್‌ಟು ಎ ನ್ಯೂ ವರ್ಲ್ಡ್ ಆಫ್ ???' ಎಂಬ ಪ್ರಶ್ನೆಯನ್ನು ಇಟ್ಟು ಕುತೂಹಲ ಕೆರಳಿಸಲಾಗಿದೆ ಹಾಗೂ ಟೀಸರ್‌ನೊಂದಿಗೆ ನಿಮ್ಮ ಮುಂದೆ ಬರುತ್ತೇವೆ ಎಂದು ಚಿತ್ರತಂಡ ಘೋಷಿಸಿದೆ.

More from Filmibeat

English summary
Kichcha 46: Simrat Kaur likely to play lead role in Kichcha Sudeep's next film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X