Kichcha 46: ಸುದೀಪ್ ಹುಟ್ಟುಹಬ್ಬಕ್ಕೆ 46ನೇ ಚಿತ್ರದ ಟೈಟಲ್ ರಿವೀಲ್; ಸಮಯ ಫಿಕ್ಸ್

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇನ್ನು ಈ ಬಾರಿ ತಮ್ಮ ನೆಚ್ಚಿನ ನಟ ಹಾಫ್ ಸೆಂಚುರಿ ಬಾರಿಸುವುದರಿಂದ ಹುಟ್ಟುಹಬ್ಬವನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಆಚರಿಸಲು ಕಿಚ್ಚನ ಅಭಿಮಾನಿ ಬಳಗಗಳು ಸಿದ್ಧಪಡಿಸಿಕೊಳ್ಳುತ್ತಿವೆ.

ಒಂದೆಡೆ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸುದೀಪ್ ನಟಿಸಲಿರುವ ಮುಂದಿನ ಚಿತ್ರಗಳ ನಿರ್ಮಾಪಕರು ಆ ಚಿತ್ರಗಳ ಕುರಿತಾದ ಅಪ್‌ಡೇಟ್‌ಗಳನ್ನು ಈ ವಿಶೇಷ ದಿನದಂದು ನೀಡಲು ಮುಂದಾಗಿದ್ದಾರೆ. ಈ ಪೈಕಿ ಸುದೀಪ್ ನಟಿಸಲಿರುವ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಕಿಚ್ಚನ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

Kichcha 46: Sudeeps 46th film title teaser to be out on the occasion of his birthday

ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ಧನು ಬ್ರೇಕ್ ಕಿಚ್ಚ ಸುದೀಪ್ ನಟನೆಯ 46ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ವಿಜಯ್ ಕಾರ್ತಿಕೇಯ ಎಂಬ ಹೊಸ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರತಂಡ ನಿನ್ನೆ ವಿಶೇಷ ಗ್ಲಿಂಪ್ಸ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟುಹಾಕುವ ಕೆಲಸವನ್ನು ಮಾಡಿತ್ತು. ಹೌದು, ಕಿಚ್ಚ 46 ಚಿತ್ರದ 'ಡೀಮನ್ ವಾರ್ ಬೆಗಿನ್ಸ್' ಎಂಬ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ವಿಡಿಯೊದಲ್ಲಿ ಕಿಚ್ಚ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಸುದೀಪ್ ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ತೋರಿಸಿದ್ದ ಚಿತ್ರತಂಡ ಚಿತ್ರಕ್ಕೆ ಯಾವ ಶೀರ್ಷಿಕೆ ಇಟ್ಟಿದ್ದೇವೆ ಎಂಬುದನ್ನು ಮಾತ್ರ ತಿಳಿಸಿರಲಿಲ್ಲ. ಹೀಗಾಗಿ ಕಿಚ್ಚನ ಮುಂದಿನ ಚಿತ್ರದ ಟೈಟಲ್ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಈ ಕುತೂಹಲಕ್ಕೆ ಬ್ರೇಕ್ ಹಾಕುವ ಕೆಲಸಕ್ಕೆ ಇದೀಗ ಚಿತ್ರತಂಡ ಕೈ ಹಾಕಿದ್ದು ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಮಧ್ಯರಾತ್ರಿ 12.01ಕ್ಕೆ ಚಿತ್ರದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಘೋಷಿಸಿದೆ.

ಮನೆಯಲ್ಲಿ ಅಭಿಮಾನಿಗಳನ ಜತೆ ಹುಟ್ಟುಹಬ್ಬ ಆಚರಣೆ ಇಲ್ಲ:

ಇನ್ನು ಇಷ್ಟು ದಿನಗಳ ಹಾಗೆ ಈ ಬಾರಿ ಬೆಂಗಳೂರಿನ ಜೆಪಿ ನಗರದಲ್ಲಿರುವ ಸುದೀಪ್ ಅವರ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಬದಲು ಈ ಬಾರಿ ಹುಟ್ಟಹಬ್ಬ ಆಚರಿಸಲೆಂದೇ ಬೇರೆ ಸ್ಥಳವನ್ನು ಆರಿಸಿದ್ದಾರೆ ಕಿಚ್ಚನ ಫ್ಯಾನ್ಸ್. ಹೌದು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಹೊಸಕೆರೆಹಳ್ಳಿ ಸಮೀಪದಲ್ಲಿರುವ ಪಿಇಎಸ್ ಕಾಲೇಜು ಸಮೀಪದಲ್ಲಿರುವ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಕಿಚ್ಚನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ.

ಈ ರೀತಿಯ ನಿರ್ಧಾರಕ್ಕೆ ಕಾರಣವನ್ನೂ ಸಹ ನೀಡಿರುವ ಕಿಚ್ಚ ಸುದೀಪ್ ಅಭಿಮಾನಿಗಳು ಹುಟ್ಟುಹಬ್ಬದ ಅಂಗವಾಗಿ ಹಲವಾರು ಜನರು ನೆರೆಯುವುದರಿಂದ ಅಭಿಮಾನಿಗಳಿಗೆ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಇನ್ನು ಸೆಪ್ಟೆಂಬರ್ 1ರ ಶುಕ್ರವಾರ ಅಂದರೆ ಸುದೀಪ್ ಹುಟ್ಟುಹಬ್ಬದ ಹಿಂದಿನ ದಿನದ ಸಂಜೆ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಸಮಯದಲ್ಲಿ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.

ಹೀಗೆ ಐದು ಗಂಟೆಗಳ ಕಾಲ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿರುವ ಸುದೀಪ್ ಹನ್ನೆರಡು ಗಂಟೆಗೆ ಅಭಿಮಾನಿಗಳು ತರುವ ಕೇಕ್ ಕತ್ತರಿಸಿದ ಬಳಿಕ ಅಲ್ಲಿಂದ ತೆರಳಲಿದ್ದಾರೆ. ಇನ್ನು ಇದನ್ನು ಹೊರತುಪಡಿಸಿ ಸುದೀಪ್ ಮನೆಯ ಬಳಿಯಾಗಲಿ ಅಥವಾ ಬೇರೆ ಯಾವುದೇ ಜಾಗದಲ್ಲಾಗಲಿ ಕಿಚ್ಚನ ಹುಟ್ಟುಹಬ್ಬದ ಯಾವುದೆ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ. ಹೀಗಾಗಿ ಹುಟ್ಟುಹಬ್ಬದ ದಿನ ಮನೆ ಬಳಿ ಸುದೀಪ್ ಭೇಟಿಯಾಗಲು ಅಭಿಮಾನಿಗಳು ಯಾರೂ ಬರಬಾರದೆಂದು ಸುದೀಪ್ ಫ್ಯಾನ್ಸ್ ಅಸೋಸಿಯೇಷನ್‌ಗಳು ಮನವಿ ಮಾಡಿವೆ.

More from Filmibeat

English summary
Kichcha 46: Sudeep's 46th film title teaser to be out on the occasion of his birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X