ಕಿಚ್ಚ 46 ಗ್ಲಿಂಪ್ಸ್ ಮಾತ್ರವಲ್ಲ, ಜುಲೈ ತಿಂಗಳಲ್ಲಿ ಬರಲಿದೆ ಈ ಎಲ್ಲಾ ದೊಡ್ಡ ಚಿತ್ರಗಳ ಅಪ್‌ಡೇಟ್ಸ್!
2023 ವರ್ಷದ ಮೊದಲ ಆರು ತಿಂಗಳು ಮುಗಿದುಹೋಗಿವೆ. ವರ್ಷದ ಮೊದಲಾರ್ಧದ ಮುಕ್ತಾಯದ ಹಂತಕ್ಕೆ ದೇಶದ ಬಹುತೇಕ ಎಲ್ಲಾ ಚಿತ್ರರಂಗಗಳು ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ನೀಡಿವೆ.
ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗಗಳ ಹಲವು ಚಿತ್ರಗಳು ಯಶಸ್ವಿಯಾಗಿ ನೂರು ಕೋಟಿಗಿಂತ ಅಧಿಕ ಗಳಿಸಿ ಬಾಕ್ಸ್ ಆಫೀಸಿನಲ್ಲಿ ಅಬ್ಬರಿಸಿವೆ.

ಇತ್ತ ಕನ್ನಡ ಚಿತ್ರರಂಗದಿಂದ ಈ ವರ್ಷ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಕೆಲವು ಚಿತ್ರಗಳು ಬಿಡುಗಡೆಯಾದರೂ ಸಹ ಯಾವ ಚಿತ್ರವೂ ನೂರು ಕೋಟಿ ಗಡಿ ದಾಟಲಿಲ್ಲ. ಹೀಗೆ ಈ ವರ್ಷದ ಮೊದಲಾರ್ಧದಲ್ಲಿ ಚಂದನವನ ಕಳೆದ ವರ್ಷದ ಹಾಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ ಎಂದೇ ಹೇಳಬಹುದು.
ಆದರೆ ವರ್ಷದ ಉಳಿದ ಆರು ತಿಂಗಳು ಬಿಡುಗಡೆಗೊಳ್ಳಲಿರುವ ಕೆಲವು ಕನ್ನಡ ಚಿತ್ರಗಳು ನೂರು ಕೋಟಿ ಗಳಿಸುವ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಕನ್ನಡ ಮಾತ್ರವಲ್ಲದೇ ಉಳಿದ ಚಿತ್ರರಂಗಗಳ ಅನೇಕ ಚಿತ್ರಗಳು ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುವುದು ಪಕ್ಕಾ.
ಇನ್ನು ವರ್ಷದ ಮೊದಲಾರ್ಧದ ಮುಕ್ತಾಯದ ಬಳಿಕ ಜುಲೈ ತಿಂಗಳಿನಲ್ಲಿ ಹಲವು ದೊಡ್ಡ ಚಿತ್ರಗಳ ಅಪ್ ಡೇಟ್ ಹೊರಬೀಳಲು ತಯಾರಾಗಿವೆ ಹಾಗೂ ಕೆಲ ದೊಡ್ಡ ದೊಡ್ಡ ಚಿತ್ರಗಳೂ ಸಹ ತೆರೆಗೆ ಬರಲು ಸಿದ್ಧವಾಗಿವೆ. ಇಂದು ( ಜುಲೈ 1 ) ತಿಂಗಳ ಮೊದಲ ದಿನವೇ ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಿಡುಗಡೆ ಯಾವಾಗ ಎಂಬ ಮಾಹಿತಿ ಹೊರಬೀಳಲಿದೆ. ಈ ಚಿತ್ರದ ಜತೆಗೆ ಈ ತಿಂಗಳು ಯಾವ ಯಾವ ಚಿತ್ರಗಳ ಅಪ್ ಡೇಟ್ ಹೊರ ಬೀಳಿಲಿದೆ ಮತ್ತು ಯಾವ ಚಿತ್ರಗಳು ತೆರೆಗೆ ಬರಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಿಡುಗಡೆ ದಿನಾಂಕ ಯಾವಾಗ ಎಂಬುದನ್ನು ಇಂದು ( ಜುಲೈ 1 ) ಸಂಜೆ 5.04ಕ್ಕೆ ತಂಡ ಘೋಷಿಸಲಿದೆ.
* ನಾಳೆ ( ಜುಲೈ 2 ) ಬೆಳಗ್ಗೆ 11.46ಕ್ಕೆ ಕಿಚ್ಚ ಸುದೀಪ್ ನಟನೆಯ 46ನೇ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಲಿದೆ. ಈ ಚಿತ್ರದ ಟೈಟಲ್ ಸಹ ನಾಳೆಯೇ ರಿವೀಲ್ ಆಗುವ ಸಂಭವವಿದೆ. ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಎಂಬ ನಿರ್ದೇಶನವಿದ್ದು, ತಮಿಳಿನ ಕಲೈಪುಲಿ ಎಸ್ ಧನು ಬಂಡವಾಳ ಹೂಡುತ್ತಿದ್ದಾರೆ.
* ಜುಲೈ 10ರಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೈಲರ್ ಬಿಡುಗಡೆಗೊಳ್ಳಲಿದೆ.
* ಜುಲೈ 12ರಂದು ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಘೋಸ್ಟ್ ಟೀಸರ್ ಬಿಡುಗಡೆಯಾಗಲಿದೆ.
* ಇನ್ನು ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್ ನ ಸಲಾರ್ ಚಿತ್ರದ ಟೀಸರ್ ಸಹ ಇದೇ ತಿಂಗಳು ಹೊರ ಬೀಳಲಿದೆ.
* ಶಾರುಖ್ ಖಾನ್ ಹಾಗೂ ತಮಿಳು ನಿರ್ದೇಶಕ ಅಟ್ಲಿ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಜವಾನ್ ಚಿತ್ರದ ಟೀಸರ್ ಸಹ ಇದೇ ತಿಂಗಳು ಬಿಡುಗಡೆಯಾಗಲಿದೆ.
* ಜುಲೈ 12ರಂದು ಮಿಷನ್ ಇಂಪಾಸಿಬಲ್ 7 ಚಿತ್ರ ತೆರೆಗೆ ಬರಲಿದೆ.
* ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್ಹೈಮರ್ ಚಿತ್ರ ಜುಲೈ 21ರಂದು ತೆರೆಗೆ ಬರಲಿದೆ.
* ಬಾರ್ಬಿ ಚಿತ್ರ ಸಹ ಜುಲೈ 21ರಂದು ತೆರೆಕಾಣಲಿದೆ


Click it and Unblock the Notifications











