For Quick Alerts
  ALLOW NOTIFICATIONS  
  For Daily Alerts

  Exclusive: 'ಬಿಲ್ಲ ರಂಗ ಭಾಷಾ' 2 ಪಾರ್ಟ್‌ಗಳಲ್ಲಿ ಬರುತ್ತೆ: 'ವಿಕ್ರಾಂತ್ ರೋಣ' ಕಥೆಯೇನು?

  |

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. 'ಕೆಜಿಎಫ್ 2', '777 ಚಾರ್ಲಿ' ಬಳಿಕ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಸಿನಿಮಾ 'ವಿಕ್ರಾಂತ್ ರೋಣ' ಹೊಸ ದಾಖಲೆ ಬರೆಯುವುದಕ್ಕೆ ತುದಿಗಾಲಲ್ಲಿ ನಿಂತಿದೆ.

  ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್‌ ಸಿನಿಮಾಗಾಗಿ ಇಡೀ ಚಿತ್ರರಂಗವೇ ಕಾದು ಕೂತಿದೆ. ಈ ಸಿನಿಮಾ ಹೇಗಿರುತ್ತೋ? ಅದ್ಯಾವ ಮಟ್ಟಿಗೆ ಮೋಡಿ ಮಾಡುತ್ತೋ ? ಅದ್ಯಾವ ದಾಖಲೆ ಬರೆಯುತ್ತೋ? ಅಂತ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಇದೇ ಕಾಂಬಿನೇಷನ್‌ನ ಮತ್ತೊಂದು ಸಿನಿಮಾ ಬಗ್ಗೆ ಈಗಾಗಲೇ ಟಾಕ್‌ ಶುರುವಾಗಿದೆ.

  Vikrant Rona Trailer : ಗುಮ್ಮ ಗುಮ್ಮ ಗುಮ್ಮ ಬಂದ: 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್Vikrant Rona Trailer : ಗುಮ್ಮ ಗುಮ್ಮ ಗುಮ್ಮ ಬಂದ: 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್

  'ವಿಕ್ರಾಂತ್ ರೋಣ' ಇದೇ ತಿಂಗಳು 28ನೇ ತಾರೀಕು ಪ್ಯಾನ್ ವರ್ಲ್ಡ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದ ಹಲವು ಭಾಷೆಗಳಲ್ಲಿ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಈ ಮಧ್ಯೆ ಸುದೀಪ್ ಹಾಗೂ ಅನುಪ್ ಭಂಡಾರಿಯ 'ಬಿಲ್ಲ ರಂಗ ಭಾಷಾ' ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ಸ್ಟೋರಿಯೊಂದು ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

  'ಬಿಲ್ಲ ರಂಗ ಭಾಷಾ' ಎರಡು ಪಾರ್ಟ್

  'ಬಿಲ್ಲ ರಂಗ ಭಾಷಾ' ಎರಡು ಪಾರ್ಟ್

  ಪ್ಯಾನ್ ಇಂಡಿಯಾ ಸಿನಿಮಾಗಳು ಎರಡೆರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತಿವೆ. ಆದರೆ, 'ವಿಕ್ರಾಂತ್ ರೋಣ' ಮಾತ್ರ ಯಾಕಿಲ್ಲ ಅಂತ ಕಿಚ್ಚನ ಫ್ಯಾನ್ಸ್ ಕೊಚ್ಚ ಬೇಜಾರಾಗಿರಬಹುದು. ಆದರೆ, ಸುದೀಪ್ ಅಭಿಮಾನಿಗಳಿಗೆ ಖುಷಿ ಪಡಿಸುವ ಸುದ್ದಿಯೊಂದಿದೆ. ಅದುವೇ 'ಬಿಲ್ಲ ರಂಗ ಭಾಷಾ'. 'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಅನುಪ್ ಭಂಡಾರಿ ಜೊತೆನೇ ಮತ್ತೊಂದು ಸಿನಿಮಾ ಮಾಡುತ್ತಿರೋದಾಗಿ ಈಗಾಗಲೇ ಸುದೀಪ್ ಅನೌನ್ಸ್ ಮಾಡಿದ್ದಾರೆ. 'ವಿಕ್ರಾಂತ್ ರೋಣ'ದಷ್ಟೇ ಇಂಟ್ರೆಸ್ಟಿಂಗ್ ವಿಷಯಯೊಂದಿದೆ. ಅದೇನೆಂದರೆ 'ಬಿಲ್ಲ ರಂಗ ಭಾಷಾ' ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ.

  ಪ್ಯಾನ್ ಇಂಡಿಯಾ ಸಿನಿಮಾ ಬಂದಿದ್ದಕ್ಕೆ ನಾವು ಈ ಸಿನಿಮಾ ಮಾಡಿಲ್ಲ: ಮುಂಬೈನಲ್ಲಿ 'ವಿಕ್ರಾಂತ್ ರೋಣ' ರಣ ಕಹಳೆಪ್ಯಾನ್ ಇಂಡಿಯಾ ಸಿನಿಮಾ ಬಂದಿದ್ದಕ್ಕೆ ನಾವು ಈ ಸಿನಿಮಾ ಮಾಡಿಲ್ಲ: ಮುಂಬೈನಲ್ಲಿ 'ವಿಕ್ರಾಂತ್ ರೋಣ' ರಣ ಕಹಳೆ

  'ವಿಕ್ರಾಂತ್ ರೋಣ' ಬಳಿಕ ಅನುಪ್‌ಗೆ ರೆಸ್ಟ್

  'ವಿಕ್ರಾಂತ್ ರೋಣ' ಬಳಿಕ ಅನುಪ್‌ಗೆ ರೆಸ್ಟ್

  ಕಳೆದ ಮೂರು ವರ್ಷಗಳಿಂದ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆನೇ ನಿರ್ದೇಶಕ ಅನುಪ್ ಭಂಡಾರಿ ಕೆಲಸ ಮಾಡಿದ್ದಾರೆ. ಹೀಗಾಗಿ 'ವಿಕ್ರಾಂತ್ ರೋಣ' ರಿಲೀಸ್ ಬಳಿಕ ಅನುಪ್ ಭಂಡಾರಿ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಫ್ಯಾಮಿಲಿ ಜೊತೆ ಲಾಂಗ್ ಬ್ರೇಕ್ ತೆಗೆದುಕೊಂಡ ಬಳಿಕ 'ಬಿಲ್ಲ ರಂಗ ಭಾಷಾ' ಸಿನಿಮಾಗೆ ಕೂರಲಿದ್ದಾರೆ. ಅಷ್ಟರೊಳಗೆ ಸುದೀಪ್ ಬೇರೊಂದು ಸಿನಿಮಾ ಮಾಡಿ ಮತ್ತೆ 'ಬಿಲ್ಲ ರಂಗ ಭಾಷಾ'ಗೆ ಮರಳಬಹುದು. ಅಥವಾ ಅನುಪ್ ಸ್ಕ್ರಿಪ್ಟ್ ಜೊತೆ ರೆಡಿಯಿದ್ದರೆ, 'ಬಿಲ್ಲ ರಂಗ ಭಾಷಾ'ನೇ ಸೆಟ್ಟೇರಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ.

  'ವಿಕ್ರಾಂತ್ ರೋಣ'ಗಿಂತ ವಿಭಿನ್ನ ಸಿನಿಮಾ

  'ವಿಕ್ರಾಂತ್ ರೋಣ'ಗಿಂತ ವಿಭಿನ್ನ ಸಿನಿಮಾ

  'ಬಿಲ್ಲ ರಂಗ ಭಾಷಾ' ಈ ಹಿಂದೆನೇ ಸೆಟ್ಟೇರಬೇಕಿತ್ತು. ಆದರೆ, ಅದಕ್ಕೆ ಸಾಕಷ್ಟು ಸಮಯ ಬೇಕಿದ್ದರಿಂದ ಅದಕ್ಕೂ ಮುನ್ನ 'ವಿಕ್ರಾಂತ್ ರೋಣ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಲಾಗಿತ್ತು. ಈಗ ಜುಲೈ 28ರಂದು 'ವಿಕ್ರಾಂತ್ ರೋಣ' ಗ್ರ್ಯಾಂಡ್ ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ಆದ್ಮೇಲೆ ಅನುಪ್ 'ಬಿಲ್ಲ ರಂಗ ಭಾಷಾ' ಕೈಗೆತ್ತಿಗೊಳ್ಳಲಿದ್ದಾರೆ. 'ವಿಕ್ರಾಂತ್ ರೋಣ'ಗಿಂತಲೂ 'ಬಿಲ್ಲ ರಂಗ ಭಾಷಾ' ವಿಭಿನ್ನ ಸಿನಿಮಾ ಆಗಿರುತ್ತೆ. ಕ್ರಿ.ಶ. 2209ರ ಕಥೆಯಾಗಿರುತ್ತೆ. ಈ ಕಾರಣಕ್ಕೆ ಈ ಸಿನಿಮಾನೂ ವಿಶಿಷ್ಟ ಅನುಭವ ನೀಡಲಿದೆ ಎನ್ನಲಾಗಿದೆ.

  ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್ರೀ ಅನುಪ್ ಭಂಡಾರಿ, ಸುದೀಪ್ ನನ್ನ ಮಗರೀ.. ಅವನಿಗ್ಯಾಕೆ ಭಯ?- ರವಿಚಂದ್ರನ್

   'ವಿಕ್ರಾಂತ್ ರೋಣ 2' ಬರಬಹುದು!

  'ವಿಕ್ರಾಂತ್ ರೋಣ 2' ಬರಬಹುದು!

  'ವಿಕ್ರಾಂತ್ ರೋಣ' ಸಿನಿಮಾವನ್ನು ಜನರು ಹೇಗೆ ಮೆಚ್ಚಿಕೊಳ್ಳುತ್ತಾರೆ ಅನ್ನೋದನ್ನು ಇಡೀ ಎದುರು ನೋಡುತ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕರೆ, 'ವಿಕ್ರಾಂತ್ ರೋಣ 2' ಬಗ್ಗೆನೂ ಚಿತ್ರತಂಡ ಆಲೋಚನೆ ಮಾಡಬಹುದು ಎನ್ನಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾಗೆ ಸಿಗುವ ರೆಸ್ಪಾನ್ಸ್ ಮುಂದೆ ಎಲ್ಲವೂ ನಿಂತಿದೆ ಎನ್ನಲಾಗಿದೆ.

  English summary
  Kichcha Sudeep And Anup Bhandari Second Combo Billa Ranga Baashaa Will Be In 2 Parts, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X