ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಮತ್ತೆ ಶುರು ಟ್ವಿಟರ್ ಫ್ಯಾನ್ ವಾರ್!

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡ್ರೂ ಅಲ್ಲಿ ಫ್ಯಾನ್ ವಾರ್ ಸರ್ವೇಸಾಮಾನ್ಯ. ಅದರಲ್ಲಿಯೂ ಈ ಸಿನಿಮಾ ಕ್ಷೇತ್ರದಲ್ಲಂತೂ ಫ್ಯಾನ್ ವಾರ್‌ಗೆ ಮಿತಿ ಎಂಬುದೇ ಇಲ್ಲ. ಪಕ್ಕದ ತೆಲುಗು ಚಿತ್ರರಂಗದಲ್ಲಿ ಈ ಫ್ಯಾನ್ ವಾರ್‌ಗೆ ಜೀವ ಹೋದ ಉದಾಹರಣೆಗಳೂ ಸಹ ಇವೆ.

ಇನ್ನು ಕನ್ನಡ ಚಿತ್ರರಂಗಕ್ಕೇನೂ ಈ ಫ್ಯಾನ್ ವಾರ್ ಹೊಸತಲ್ಲ. ತೊಂಬತ್ತರ ದಶಕದಲ್ಲೂ ಸಹ ಫ್ಯಾನ್ ವಾರ್ ದೊಡ್ಡ ಮಟ್ಟದಲ್ಲಿ ಇತ್ತು. ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಬಡಿದಾಡಿಕೊಂಡ ಘಟನೆಗಳು ನಡೆದಿವೆ. ಹೀಗೆ ಚಿತ್ರರಂಗಗಳಿಗೆ ಎಂದೂ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಅಂಟಿಕೊಂಡಿರುವ ಈ ಫ್ಯಾನ್ ವಾರ್ ಇದೀಗ ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Kichcha Sudeep and Darshan fans online war turnig worse

ಹೌದು, ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಸುದೀಪ್ ಅಭಿಮಾನಿಗಳು ದರ್ಶನ್ ವಿರುದ್ಧ ನೆಗೆಟಿವ್ ಟ್ವಿಟರ್ ಟ್ರೆಂಡ್ ಮಾಡಿದರೆ, ದರ್ಶನ್ ಫ್ಯಾನ್ಸ್ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡಿ ಕಿಡಿಕಾರಿದ್ದಾರೆ.

ಇನ್ನು ಈ ಫ್ಯಾನ್ ವಾರ್ ದಿಢೀರನೆ ಶುರುವಾಗಲು ಕಾರಣ ನಿರ್ಮಾಪಕರು ಸುದೀಪ್ ವಿರುದ್ಧ ಹಣದ ಆರೋಪ ಮಾಡಿದ್ದು. ಹೌದು, ನಿರ್ಮಾಪಕ ಎಂ ಎನ್ ಕುಮಾರ್ ಸುದೀಪ್ ಹಣ ತೆಗೆದುಕೊಂಡು ಸಿನಿಮಾ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲು ಶುರು ಮಾಡಿದರು.

ಇದರಿಂದ ಕೋಪಕ್ಕೊಳಗಾದ ಸುದೀಪ್ ಅಭಿಮಾನಿಗಳು ದರ್ಶನ್ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡಿದರು. #BanFlopStarDarshanandSaveKFI ( ದರ್ಶನ್ ಅವರನ್ನು ಬ್ಯಾನ್ ಮಾಡಿ ಕನ್ನಡ ಚಿತ್ರರಂಗವನ್ನು ರಕ್ಷಿಸಿ ) ಎಂಬ ಟ್ಯಾಗ್ ಬಳಸಿ ಮೂರು ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ದರ್ಶನ್ ಅಭಿಮಾನಿಗಳೂ ಸಹ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡಿದ್ದಾರೆ.

#LossMakingLordKichcha ( ನಷ್ಟ ಸೃಷ್ಟಿಸುವ ರಾಜ ಕಿಚ್ಚ ) ಎಂಬ ಟ್ಯಾಗನ್ನು ಬಳಸಿ ದರ್ಶನ್ ಅಭಿಮಾನಿಗಳು ಟ್ರೆಂಡ್ ಮಾಡಿ ಸುದೀಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ಮಾಡಿರುವ ಈ ನೆಗೆಟಿವ್ ಟ್ರೆಂಡ್ 7 ಲಕ್ಷಕ್ಕೂ ಅಧಿಕ ಟ್ವೀಟ್‌ಳನ್ನು ಹೊಂದಿದ್ದು, ಕನ್ನಡ ಚಲನಚಿತ್ರರಂಗದಲ್ಲಿ ಆದ ಅತಿದೊಡ್ಡ ನೆಗೆಟಿವ್ ಎಂಬ ದಾಖಲೆಯನ್ನು ಬರೆದಿದೆ. ಅಲ್ಲಲ್ಲ ಬೇಡವಾಗಿದ್ದ ದಾಖಲೆಯನ್ನು ಬರೆದಿದೆ.

ಒಟ್ಟಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪ್ರೀತಿಯ ಮೇಲೆ ಸಿಕ್ಕ ಸಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಂಡು ಇಂತಹ ಅನಗತ್ಯ ಕೆಲಸಗಳನ್ನು ಮಾಡಿ ತಮ್ಮ ನಡುವಿನ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುವ ಮೂಲಕ ಇಡೀ ದೇಶಕ್ಕೆ ತಿಳಿಯುವ ಹಾಗೆ ಮಾಡುತ್ತಿದ್ದಾರೆ. ಇದರಿಂದ ಅವರವರ ನಟರಿಗೆ ಲಾಭವಂತೂ ಖಂಡಿತ ಆಗುತ್ತಿಲ್ಲ, ಆದರೆ ಇಂಡಸ್ಟ್ರಿಗೆ ಕಪ್ಪು ಚುಕ್ಕೆಯಾಗುತ್ತಿರುವುದಂತೂ ಪಕ್ಕಾ.

More from Filmibeat

English summary
Kichcha Sudeep and Darshan fans online war turnig worse . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X