'ವ್ಯಕ್ತಿ ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ ಇರುತ್ತೆ...': ವಿಜಯ್ ರಂಗರಾಜು ವಿರುದ್ಧ ಗುಡುಗಿದ ಕಿಚ್ಚ ಸುದೀಪ್
ತೆಲುಗು ಕಲಾವಿದ ವಿಜಯ್ ರಂಗರಾಜು ವಿರುದ್ಧ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗುಡುಗಿದ್ದಾರೆ. 'ವ್ಯಕ್ತಿ ಬದುಕಿದ್ದಾಗ ಮಾತಾಡಿದ್ರೆ ಒಂಚೂರು ಗಂಡಸ್ತನ ಇರುತ್ತೆ ಎನ್ನಬಹುದಿತ್ತು' ಎಂದು ಜಾಡಿಸಿದ್ದಾರೆ.
ಕನ್ನಡದ ಸಾಹಸಸಿಂಹ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ವಿಜಯ್ ರಂಗರಾಜು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ವಿಡಿಯೋ ಕನ್ನಡಿಗರ ಕಣ್ಣಿಗೆ ಬಿದ್ದ ಬಳಿಕ, ವಿಜಯ್ ರಂಗರಾಜು ವಿರುದ್ಧ ಸಿಡಿದೆದ್ದಿದ್ದಾರೆ.
ರಂಗರಾಜು ಈ ಕೂಡಲೇ ಕ್ಷಮೆ ಕೇಳಬೇಕು, ಹೇಳಿಕೆ ಹಿಂಪಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಇದೀಗ, ಕಿಚ್ಚ ಸುದೀಪ್ ಸಹ ಆ ನಟನಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ....

ಬದುಕಿದ್ದಾಗ ಮಾತಾಡಬೇಕು
''ವಿಜಯ್ ರಂಗರಾಜು ಅವರೇ ವಿಷ್ಣು ಸರ್ ಬಗ್ಗೆ ನೀವು ಬಹಳ ಕೆಟ್ಟದಾಗಿ ಮಾತನಾಡಿದ್ದೀರ. ಒಬ್ಬ ವ್ಯಕ್ತಿ ಬಗ್ಗೆ ಏನು ಮಾತಾಡಬೇಕು ಎನ್ನುವುದು ನಿಮಗೆ ಬಿಟ್ಟ ವಿಚಾರ. ಆದ್ರೆ, ಆ ವ್ಯಕ್ತಿ ಬದುಕಿದ್ದಾಗ ಮಾತಾಡಿದ್ರೆ ಒಂಚೂರು ಗಂಡಸ್ತನ ಇರುತ್ತೆ ಎಂದು ನಂಬಿಕೆ ನನ್ನದು'' ಎಂದು ಆಕ್ರೋಶ ಹೊರಹಾಕಿದ್ದಾರೆ.

ಅವರ ಪರ ನಾವಿದ್ದೇವೆ
''ವಿಷ್ಣುವರ್ಧನ್ ಅವರಿಲ್ಲದೇ ಇರಬಹುದು. ಆದ್ರೆ, ಅವರ ಪರವಾಗಿ ನಾವಿದ್ದೇವೆ. ನಾನೊಬ್ಬ ನಟನಾಗಿ ಮತ್ತು ವಿಷ್ಣು ಅವರ ಅಪ್ಪಟ ಅಭಿಮಾನಿ ಹೇಳುತ್ತಿದ್ದೇನೆ. ಕೋಟ್ಯಾಂತರ ಜನರ ಆರಾಧ್ಯ ದೈವ ಎನಿಸಿಕೊಂಡಿರುವ ವಿಷ್ಣುದಾದಾ ಬಗ್ಗೆ ಅವರಿಲ್ಲದ ಸಮಯದಲ್ಲಿ ಈ ರೀತಿ ಹೇಳಿಕೆ ನೀಡುವುದು ಬಹಳ ದೊಡ್ಡ ತಪ್ಪು'' ಎಂದು ಖಂಡಿಸಿದ್ದಾರೆ.

ವಾರ್ನ್ ಕೊಡೋ ಮಟ್ಟಕ್ಕೆ ಹೋಗಬೇಡಿ
''ಮಾತಾಡ್ಬೇಕಾದರೆ, ವಿಷ್ಣು ಸರ್ ಗೆ ವಾರ್ನ್ ಮಾಡಿದೆ, ಇದು ಬೆಂಗಳೂರಲ್ಲ ಅಂತ ಹೇಳ್ತಿದ್ರಿ. ಬೇಡ ರಂಗರಾಜು ಅವರೇ, ಆ ಮಟ್ಟಕ್ಕೆ ಹೋಗಬೇಡಿ, ಇಲ್ಲಿ ಯಾರೂ ಕೈಲಾಗದವರು ಕೂತಿಲ್ಲ. ವಿಷ್ಣುವರ್ಧನ್ ಇಲ್ಲದೇ ಇರಬಹುದು. ಕೋಟ್ಯಾಂತರ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ವಾರ್ನಿಂಗ್ ಎಲ್ಲ ಬೇಡ, ನೀವು ಮಾತಾಡಿರುವ ಮಾತುಗಳನ್ನು ವಾಪಸ್ ಪಡೆದುಕೊಳ್ಳಿ'' ಎಂದು ಎಚ್ಚರಿಕೆ ನೀಡಿದ್ದಾರೆ.
Recommended Video

ನಿಮ್ಮ ಇಂಡಸ್ಟ್ರಿಯವರೇ ಒಪ್ಪಲ್ಲ
''ಎಲ್ಲ ಇಂಡಸ್ಟ್ರಿಯವರು ಬಾಂಧವ್ಯದಿಂದ ನಡೆಯುತ್ತಿರಬೇಕಾದರೆ ನಿಮ್ಮಂತ ವ್ಯಕ್ತಿಯಿಂದ ಇಂಡಸ್ಟ್ರಿ ಚೂರು ಚೂರಾಗಬಾರದು. ಕನ್ನಡ ಚಿತ್ರರಂಗದಲ್ಲಿ ಬೇರೆ ಇಂಡಸ್ಟ್ರಿಯವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ, ಎಲ್ಲರೂ ನಮ್ಮವರೇ ಎಂದು ನೋಡುವ ಸಮಯದಲ್ಲಿ ನೀವು ಇಂತಹ ಹೇಳಿಕೆ ನೀಡುವುದನ್ನು ಬಹುಶಃ ನಿಮ್ಮ ಇಂಡಸ್ಟ್ರಿಯಲ್ಲಿ ಯಾರೂ ಇದನ್ನು ಒಪ್ಪುವುದಿಲ್ಲ'' ಎಂದು ಸುದೀಪ್ ವಿರೋಧಿಸಿದ್ದಾರೆ.


Click it and Unblock the Notifications











