»   » ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬ ಸಂಭ್ರಮ

ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬ ಸಂಭ್ರಮ

Posted By:
Subscribe to Filmibeat Kannada
<ul id="pagination-digg"><li class="next"><a href="/news/kichcha-sudeep-new-project-chakravyooha-mn-kumar-067739.html">Next »</a></li></ul>
ಕನ್ನಡದ ಹೆಮ್ಮೆಯ ನಟ, ಹೊಸ 'ಸೌತ್ ಇಂಡಿಯನ್ ಸ್ಟಾರ್' ಕಿಚ್ಚ ಸುದೀಪ್ ಇಂದು (02, ಸೆಪ್ಟೆಂಬರ್) ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ 38 ವರ್ಷಗಳ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡ ಈ ನಟ, ಕನ್ನಡ ಚಿತ್ರರಂಗದ ಮೂಲಕವೇ ನಟನೆ ಪ್ರಾರಂಭಿಸಿದರೂ ಕನ್ನಡವನ್ನು ಮೀರಿ, 'ಆಲ್ ಇಂಡಿಯಾ' ಲೆವೆಲ್ ಗೆ ಬೆಳೆದುನಿಂತಿದ್ದಾರೆ. ಕಿಚ್ಚನ ಈ ಸಾಧನೆ ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ.

'ನೋವು ನಲಿವು ಎಂಬುದು ಬಾಳ ರೈಲು ಕಂಬಿಗಳು. ನಡುವೆ ನಮ್ಮ ಈ ಪಯಣ ನಗುತಾ ಸಾಗೋ ಹಗಲಿರುಳು ಎನ್ನುವುದು ಚಿತ್ರರಂಗದಲ್ಲಿ ನಾ ಕಂಡ ಸತ್ಯ' ಇದು ಕಿಚ್ಚ ಸುದೀಪ್ ಪತ್ರಿಕಾ ಕಚೇರಿಗಳಿಗೆ ತಮ್ಮ ಬರ್ತ್ ಡೇ ನಿಮಿತ್ತ ಕಳುಹಿಸಿದ ಸ್ವೀಟ್ ಬಾಕ್ಸ್ ನ ಜೊತೆಗಿದ್ದ ಪತ್ರದಲ್ಲಿನ ಸಾಲುಗಳು. 'ಸುದೀಪ್ ಅಪ್ರತಿಮ ಸಾಧಕ ಮಾತ್ರವಲ್ಲ, ಭಾವ ಜೀವಿಯೂ ಹೌದು' ಎಂಬುದಕ್ಕೆ ಇದು ಸಿಕ್ಕ ಸಾಕ್ಷಿ ಎನ್ನಬಹುದು.

ಪತ್ರದ ಮುಂದಿನ ಸಾಲುಗಳಲ್ಲಿ 'ಮಾಧ್ಯಮ ಕ್ಷೇತ್ರದ ಎಲ್ಲಾ ನನ್ನ ಸ್ನೇಹಿತರಿಗೆ ನಿಮ್ಮ ಕಿಚ್ಚ ಸುದೀಪನ ನಮಸ್ಕಾರಗಳು' ಎಂಬ ಸಾಲುಗಳು ಮಿಂಚುತ್ತಿದ್ದವು. ತಮ್ಮ ಹಾಗೂ ಪ್ರೇಕ್ಷಕರ ನಡುವಿನ ಸಂಬಂಧದ ಸೇತುವೆಯಾಗಿರುವ ಮಾಧ್ಯಮ, ತಮ್ಮ ಮೇಲೆ ನಿರಂತರ ಕಣ್ಣಿಟ್ಟು, ತಪ್ಪುಗಳನ್ನು ತಿಳಿಸಿಹೇಳಿ, ತಿದ್ದಿಕೊಂಡು ಸರಿದಾರಿಯಲ್ಲಿ ಹೋಗುವಂತೆ ಮಾಡಿ ತಮ್ಮ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿದೆ. ಇದಕ್ಕಾಗಿ ಪತ್ರಕರ್ತ ಮಿತ್ರರಿಗೆ ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ ಸುದೀಪ್.

ತಮ್ಮ ನಟನೆಯ ಬಹುಭಾಷಾ ತೆಲುಗು ಚಿತ್ರ 'ಈಗ' ಯಶಸ್ವಿಯಾಗಿ '50' ದಿನಗಳನ್ನು ಪೂರೈಸಿದ್ದು ಹಾಗೂ ತಮ್ಮ 'ಹುಟ್ಟುಹಬ್ಬದ ಸಂಭ್ರಮ' ಈ ಎರಡೂ ಕಾರಣಕ್ಕೆ ಮಾಧ್ಯಮದ ಮಿತ್ರರನ್ನು ನೆನಪಿಸಿಕೊಂಡ ಸುದೀಪ್, ತಮ್ಮ ಹುಟ್ಟುಹಬ್ಬವನ್ನು ಮನೆಯಲ್ಲೇ ಸಿಂಪಲ್ಲಾಗಿ ಆಚರಿಸಿಕೊಳ್ಳಲು ಯೋಚಿಸಿದ್ದರು. ಆದರೆ ಈಗ ಸೌತ್ ಇಂಡಿಯನ್ ಸ್ಟಾರ್ ಆಗಿರುವ ಸುದೀಪ್ ಅವರಿಗೆ ಅದು ಸಾಧ್ಯವಾಗಲಿಲ್ಲ. ಸುದೀಪ್ ಹುಟ್ಟುಹಬ್ಬವೀಗ ಅಭಿಮಾನಿಗಳ ಪಾಲಿನ ಹಬ್ಬವಾಗಿದೆ.

ಅಷ್ಟೇ ಅಲ್ಲ, 'ಅಖಿಲ ಕರ್ನಾಟಕ ಸುದೀಪ್ ಅಭಿಮಾನಿಗಳ ಸಂಘ' (KKSFA) ಕಿಚ್ಚ ಸುದೀಪ್ ಅವರ ಹುಟ್ಟುಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ಅದರಂತೆ, ಸಾಕಷ್ಟು ಸಿದ್ಥತೆ ಮಾಡಿಕೊಂಡಿರುವ ಸಂಘ, ಇಂದು ಸುದೀಪ್ ಅಭಿಮಾನಿಗಳಿಗೆ ಸ್ವೀಟ್ ಹಂಚುವುದಲ್ಲದೇ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಅನಾಥರಿಗೆ ಹಣ್ಣು,ಹಾಲು ಹಂಚುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/kichcha-sudeep-new-project-chakravyooha-mn-kumar-067739.html">Next »</a></li></ul>
English summary
Today (2 September, 2012) Kannada actor Kichcha Sudeep is celebration his 39th Birthday. There is Grand celebration of his Birthday in JP Nagr, Bangalore. And also, Sudeep New Project 'Chakravyooha', MN Kumar's Production in Four Languages is Announced Today. &#13; &#13;
Please Wait while comments are loading...