ಮೋಹನ್ ಲಾಲ್ ಹುಟ್ಟುಹಬ್ಬ: ಸೂಪರ್ ಸ್ಟಾರ್‌ಗೆ ವಿಶ್ ಮಾಡಿದ ಸುದೀಪ್
ಮಲಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ಇಂದು (ಮೇ 21) ಹುಟ್ಟುಹಬ್ಬದ ಸಂಭ್ರಮ. 61ನೇ ವಸಂತಕ್ಕೆ ಕಾಲಿಟ್ಟಿರುವ ಸೂಪರ್ ಸ್ಟಾರ್‌ಗೆ ಅಭಿಮಾನಿಗಳು ಮತ್ತು ಮಲಯಾಳಂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸುಮಾರು 3 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೋಹನ್ ಲಾಲ್ ಇಂದಿಗೂ ಅದೇ ಚಾರ್ಮ್ ನಲ್ಲಿದ್ದಾರೆ.
ಕೇವಲ ಕೇರಳ ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಮೋಹನ್ ಲಾಲ್‌ಗೆ ಬೇರೆ ಭಾಷೆಯ ಕಲಾವಿದರು ವಿಶ್ ಮಾಡುತ್ತಿದ್ದಾರೆ. 'ಸಂತೋಷ ಮತ್ತು ಆರೋಗ್ಯವಾಗಿರಿ. ಮತ್ತಷ್ಟು ಶಕ್ತಿ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ವಿಶ್ ಮಾಡಿದ್ದಾರೆ.
ಸುದೀಪ್ ಅಭಿಮಾನಿಗಳು ಮೋಹನ್ ಮತ್ತು ಸುದೀಪ್ ಫೋಟೋ ಶೇರ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಸುದೀಪ್ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯದ ಸಿನಿಮಾ ಕಲಾವಿದರ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಮಿಂಚಿರುವ ಸುದೀಪ್ ಇನ್ನು ಮಲಯಾಳಂ ಸಿನಿಮಾದಲ್ಲಿ ನಟನೆ ಮಾಡಿಲ್ಲ.

ಸದ್ಯ ಸುದೀಪ್ ಮಲಯಾಳಂ ಸಿನಿಮಾದಲ್ಲೂ ನಟಿಸಲು ಸಜ್ಜಾಗಿದ್ದಾರೆ. ಆದರೆ ಯಾವ ಸಿನಿಮಾ, ಯಾರ ಜೊತೆ ಎನ್ನುವುದು ರಿವೀಲ್ ಮಾಡಿಲ್ಲ. ಇತ್ತೀಚಿಗಷ್ಟೆ 25 ವರ್ಷದ ಸಿನಿಜೀವನವನ್ನು ಆಚರಣೆ ಮಾಡಿಕೊಂಡ ಸುದೀಪ್‌ಗೆ ಮೋಹನ್ ಲಾಲ್ ವಿಶ್ ಮಾಡಿದ್ದರು.
ಇನ್ನು ಮಲಯಾಳಂನ ಖ್ಯಾತ ನಟರಾದ ಪೃಥ್ವಿರಾಜ್ ಸುಕುಮಾರನ್, ಟೊವಿನೋ ಥಾಮಸ್ ಕೂಡ ಸೂಪರ್ ಸ್ಟಾರ್‌ಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಮೋಹನ್ ಲಾಲ್ ಕೊನೆಯದಾಗಿ ದೃಶ್ಯಂ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಮರಕ್ಕರ್, ರಾಮ್, ಆರಾಟ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ನಟನೆ ಜೊತೆಗೆ ನಿರ್ದೇಶನಕ್ಕೂ ಇಳಿದಿದ್ದಾರೆ ಮೋಹನ್ ಲಾಲ್. ಬರೋಜ್ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈ ಹಾಕಿರುವ ಮೋಹನ್ ಲಾಲ್‌ಗೆ ಸುದೀಪ್ ಶುಭ ಹಾರೈಸಿದ್ದರು.


Click it and Unblock the Notifications











