CCL 2025 ; ಮೊದಲ ಸಮರಕ್ಕೂ ಮುನ್ನ ರಣಕಲಿಗಳಿಗೆ ಹೇಳಿದ್ದೇನು ಸುದೀಪ್ ? ರಣರೋಚಕ ಪಂದ್ಯಕ್ಕೆ ಕ್ಷಣಗಣನೆ..!

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.

ಇಂಥಾ ನಶೆಯನ್ನು ಹೊಂದಿರುವ ಉದ್ಯಮ ಇಂದಿನಿಂದ { ಫೆಬ್ರವರಿ 8 } ಮತ್ತೆ ತೆರೆಯಲಿದೆ. 2025ರ ಬಹು ನಿರೀಕ್ಷಿತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರುವಾಗಲಿದೆ.ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸುದೀಪ್ ತಮ್ಮ ತಂಡದ ಸದಸ್ಯರ ಜೊತೆ ಮನಸಾರೆ ಮಾತನಾಡಿದ್ದಾರೆ. ಧೈರ್ಯ ತುಂಬಿದ್ದಾರೆ. ತಂಡದ ನಾಯಕನಾಗಿ ಎಲ್ಲರಲ್ಲಿಯೂ ಆತ್ಮವಿಶ್ವಾಸವನ್ನು ತುಂಬಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪ್ರ್ಯಾಕ್ಟೀಸ್ ಮಾಡುತ್ತಿದ್ದ ಸಮಯದಲ್ಲಿ ತಂಡವನ್ನು ಉದ್ದೇಶಿಸಿ ಸುದೀಪ್ ಮಾತನಾಡಿದ್ದು ಸದ್ಯ ಸುದೀಪ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ನಿಜಾ. ಈ ವಿಡಿಯೋದಲ್ಲಿ ಸುದೀಪ್ ಮಾತನಾಡಿರುವ ಮಾತುಗಳು ಸರಿಯಾಗಿ ಕೇಳಿಸುವುದಿಲ್ಲ. ಆದರೆ ಕಿಚ್ಚನ ಭಾವನೆಗಳಿಗೆ ಕೈಗನ್ನಡಿ ಹಿಡಿಯಲು ಅವರ ಕಣ್ಣುಗಳೇ ಸಾಕು.

Kichcha Sudeep captain of Karnataka Bulldozers motivates players ahead of CCL 2025

ಇಂದು { ಫೆಬ್ರವರಿ 8 } ಸಂಜೆ ಶುರುವಾಗಲಿರುವ ಸಿಸಿಎಲ್‌ನಲ್ಲಿ ಸುದೀಪ್ ಸಾರಥ್ಯದ ತಂಡ ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಅಖಿಲ್ ಅಕ್ಕಿನೇನಿ ಈ ತಂಡದ ಕ್ಯಾಪ್ಟನ್. ಇಡೀ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ದೋಜರ್ಸ್ ಹೊರತು ಪಡಿಸಿದರೆ ಈ ಸಿಸಿಎಲ್‌ನಲ್ಲಿ ಅತ್ಯಂತ ಬಲಿಷ್ಠ ತಂಡ ಇವರದ್ದು. ಇದಕ್ಕೆ ಕೈಗನ್ನಡಿ ಎನ್ನುವಂತೆ ಅಖಿಲ್ ಅಕ್ಕಿನೇನಿಯ ತೆಲುಗು ವಾರಿಯರ್ಸ್ ನಾಲ್ಕು ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಇನ್ನು ಇತ್ತೀಚೆಗೆ ತೆಲುಗು ವಾರಿಯರ್ಸ್ ತಂಡದ ಜರ್ಸಿ ಅನಾವರಣ ಕಾರ್ಯಕ್ರಮದ ಸಮಾರಂಭದಲ್ಲಿ ಅಖಿಲ್ ಅಕ್ಕಿನೇನಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ನೇರ ಸವಾಲು ಹಾಕಿದ್ದರು. ಐದನೇ ಬಾರಿ ಕೂಡ ಟ್ರೋಫಿ ನಮ್ಮದೇ ಆಟದ ಜೊತೆಗೆ ಎಲ್ಲರನ್ನು ರಂಜಿಸಬೇಕು ಎನ್ನುವುದು ನಮ್ಮ ಉದ್ದೇಶವೆನ್ನುವುದನ್ನು ಹೇಳಿದ್ದರು. ಸಹಜವಾಗಿ ಸುದೀಪ್ ಈ ಎಲ್ಲ ಮಾತುಗಳನ್ನು ಗಮನಿಸಿರುತ್ತಾರೆ. ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಗೆಲುವಿನ ಮುನ್ನುಡಿಯನ್ನು ಬರೆಯುವುದು ಹೇಗೆ ಎಂದು ಆಲೋಚನೆಯನ್ನು ಕೂಡ ಮಾಡಿರುತ್ತಾರೆ. ಈ ದಿಸೆಯಲ್ಲಿ ಮೊದಲ ಪಂದ್ಯಕ್ಕೂ ಮುನ್ನ ತಮ್ಮ ರಣಕಲಿಗಳನ್ನು ಉದ್ದೇಶಿಸಿ ಸುದೀಪ್ ಮಾತನಾಡಿರುವ ಸಾಧ್ಯತೆ ಕೂಡ ಇದೆ.

ಇನ್ನುಳಿದಂತೆ ಕರ್ನಾಟಕ ಬುಲ್ಡೋಜರ್ಸ್ Vs ತೆಲುಗು ವಾರಿಯರ್ಸ್ ಪಂದ್ಯ ಸೋನಿ ಸ್ಪೋರ್ಟ್ಸ್ 3 ನೇರ ಪ್ರಸಾರ ಮಾಡುತ್ತಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲೂ ಕೂಡ ಪಂದ್ಯ ಇಂದು ನೇರ ಪ್ರಸಾರ ಆಗಲಿದೆ. ಇನ್ನು ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ನಡುವಿನ ಈ ಮ್ಯಾಚ್‌ಗೆ ಡಿಮ್ಯಾಂಡ್ ವ್ಯಾಪಕವಾಗಿ ಇದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಟಿಕೆಟ್‌ ಮೂರು ದಿನ ಮುನ್ನವೇ ಎಲ್ಲಾ ಸೋಲ್ಡ್ ಔಟ್ ಆಗಿವೆ.

ಕರ್ನಾಟಕ ಬುಲ್ಡೋಜರ್ಸ್ ತಂಡ


ಕಿಚ್ಚ ಸುದೀಪ್, ಗಣೇಶ್, ಡಾರ್ಲಿಂಗ್ ಕೃಷ್ಣ, ಕಾರ್ತಿಕ್ ಜಯರಾಮ್, ಸುನಿಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ತ್ರಿವಿಕ್ರಮ್, ಅಲಕಾನಂದ

ತೆಲುಗು ವಾರಿಯರ್ಸ್ ತಂಡ

ಅಖಿಲ್ ಅಕ್ಕಿನೇನಿ, ಆದರ್ಶ್, ನಿಖಿಲ್, ರಘು, ತಾರಕ ರತ್ನ, ಸಚಿನ್ ಜೋಶಿ, ಅಶ್ವಿನ್ ಬಾಬು, ಧರಮ್ ತರುಣ್ , ಹರೀಶ್, ನಂದ ಕಿಶೋರ್, ಸಾಮ್ರಾಟ್, ವಿಶ್ವ , ಪ್ರಿನ್ಸ್ , ಸುಶಾಂತ್, ಖಯ್ಯೂಮ್

More from Filmibeat

Read more about: ccl 2025 sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X