ಶಾಲಾ ಮಕ್ಕಳ ಕಾಲಿಗೆ ಶೂ ತೊಡಿಸಿದ ಕಿಚ್ಚ ಸುದೀಪ್
ಸಿನಿಮಾ ನಟರು ಕೇವಲ ಸಿನಿಮಾ ಮಾಡುವುದು ಮಾತ್ರವಲ್ಲ, ಸಾಮಾಜಿಕ ಕೆಲಸಗಳನ್ನ ಕೂಡ ಮಾಡ್ತಾರೆ. ಕೆಲವರು ಬಹಿರಂಗವಾಗಿ ಸಹಾಯ ಮಾಡ್ತಾರೆ, ಇನ್ನು ಕೆಲವರು ಗೌಪ್ಯವಾಗಿ ಸಹಾಯ ಮಾಡ್ತಾರೆ.
ಸ್ಟಾರ್ ನಟರು ಮಾತ್ರವಲ್ಲ, ಅವರ ಅಭಿಮಾನಿ ಸಂಘಗಳು, ಅವರ ಹೆಸರಿನ ಚಾರಿಟಬಲ್ ಟ್ರಸ್ಟ್ ಗಳು ಕೂಡ ಬಡವರಿಗೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ನೆರವು ನೀಡುವಂತಹ ಕೆಲಸಗಳನ್ನ ಮಾಡುತ್ತಿವೆ.
ಇದೀಗ, ಕಿಚ್ಚ ಸುದೀಪ ಚಾರಿಟಬಲ್ ಟ್ರಸ್ಟ್ ಶಾಲಾ ಮಕ್ಕಳಿಗೆ ಶೂ ವಿತರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ಮೂಲಕ ಉತ್ತೇಜನ ನೀಡಿದ್ದಾರೆ. ಸ್ವತಃ ಸುದೀಪ್ ಅವರಿಂದ ಮಕ್ಕಳಿಗೆ ಶೂ ಕೊಡಿಸಲಾಗಿದೆ.

ಸುದೀಪ್ ಅವರ ನೋಡಿದ ಒಂದು ಖುಷಿಯಾದರೆ, ಸುದೀಪ್ ಅವರಿಂದ ಶೂ ಪಡೆದ ಮತ್ತೊಂದು ಖುಷಿ ಆ ಶಾಲಾ ಮಕ್ಕಳಲ್ಲಿ ಕಾಣಿಸುತ್ತಿತ್ತು. ಇನ್ನು ವಿಶೇಷ ಅಂದ್ರೆ ಶಾಲಾ ಮಕ್ಕಳಿಗೆ ಸ್ವತಃ ಸುದೀಪ್ ಅವರೇ ಶೂ ತೊಡಿಸಿದ ದೃಶ್ಯ ಗಮನ ಸೆಳೆಯಿತು.

ಸದ್ಯ, ಪೈಲ್ವಾನ್ ಸಿನಿಮಾ ಶೂಟಿಂಗ್ ಮುಗಿಸಿರುವ ಸುದೀಪ್ ಆ ಕಡೆ ದಬಾಂಗ್ ಸಿನಿಮಾ ಚಿತ್ರೀಕರಣ ಕೂಡ ಮುಗಿಸಿ ಬಂದಿದ್ದಾರೆ. 'ಕೋಟಿಗೊಬ್ಬ-3' ಬಹುತೇಕ ಕಂಪ್ಲಿಟ್ ಆಗಿದೆ. ತೆಲುಗಿನಲ್ಲಿ ಸೈರಾ ಚಿತ್ರವೂ ಮುಗಿದಿದೆ. ಬಹುಶಃ ಅನೂಪ್ ಭಂಡಾರಿ ನಿರ್ದೇಶನದ 'ರಂಗ ಬಿಲ್ಲಾ ಬಾಷಾ' ಸಿನಿಮಾ ಆರಂಭಿಸಬಹುದು.


Click it and Unblock the Notifications











