ಸರ್ವಧರ್ಮ ಸಾಮೂಹಿಕ ವಿವಾಹ: ಮಹತ್ವದ ಕೆಲಸಕ್ಕೆ ಸಜ್ಜಾದ ಸುದೀಪ್ ಚಾರಿಟೇಬಲ್ ಸೊಸೈಟಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಕಷ್ಟದಲ್ಲಿರುವವರಿಗೆ ಸದಾ ನೆರವಿನ ಹಸ್ತ ಚಾಚುವ ಈ ಟ್ರಸ್ಟ್ ಈಗ ಮತ್ತೊಂದು ಮಹತ್ವದ ಕೆಲಸಕ್ಕೆ ಮುಂದಾಗಿದೆ.

ಹೌದು, ಕಿಚ್ಚ ಸುದೀಪ್ ಅವರ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಇದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಹೌದು, 2021 ಸೆಪ್ಟಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವಿದ್ದು, ಅವತ್ತೇ ಉಚಿತ ಸಾಮೂಹಿಕ ವಿವಾಹ ಸಮಾರಂಭ ಕೂಡ ನಡೆಯುತ್ತಿದೆ.

ಈ ಬಗ್ಗೆ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುದೀಪ್ ಅವರಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಯಾವುದೇ ಆಡಂಬರ ಇಲ್ಲದೇ ತುಂಬಾ ಅರ್ಥಪೂರ್ಣವಾಗಿ ಆಚರಿಸಲು ಸುದೀಪ್ ಚಾರಿಟಿ ಮುಂದಾಗಿದೆ.

 Kichcha Sudeep Charitable Trust organises Mass Marriage for Sudeep Birthday

ಸಾಮೂಹಿಕ ವಿವಾಹದಲ್ಲಿ ಒಟ್ಟು 25 ಜೋಡಿಗಳು ಇರಲಿದೆ ಎಂಬ ಮಾಹಿತಿಯಿದೆ. 'ಎರಡು ಮನಸ್ಸುಗಳ ಮಧುರ ಮಿಲನ. ಎಲ್ಲೋ ಬೆಳೆದು. ಮತ್ತೆಲ್ಲೊ ಮತ್ತೊಬ್ಬರಿಗೆ ಆಸರೆಯಾಗಿ ಬದುಕಾಗಿ, ಕೊನೆ ಉಸಿರಿನವರೆಗೂ ಉಸಿರಾಗಿ ಜೊತೆಯಾಗೋ ಸಂಬಂಧವೇ ಮದುವೆ' ಎನ್ನುವ ಸಾಲುಗಳನ್ನು ಬರೆದು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿವರ್ಷ ಹುಟ್ಟುಹಬ್ಬದ ದಿನ ಸುದೀಪ್ ಅಭಿಮಾನಿಗಳೊಂದಿಗೆ ಸಮಯ ಕಳೆಯುತ್ತಾರೆ. ಮನೆ ಮುಂದೆ ಜಮಾಯಿಸುವ ಅಭಿಮಾನಿಗಳನ್ನು ಭೇಟಿಯಾಗಿ ಅವರಿಂದ ಶುಭಾಶಯ ಸ್ವೀಕರಿಸುತ್ತಾರೆ. ಆದರೆ ಈ ಬಾರಿ ಮತ್ತಷ್ಟು ವಿಶೇಷ ಮತ್ತು ವಿನೂತನವಾಗಿ ಆಚರಣೆ ಮಾಡಬೇಕೆಂದು ನಿರ್ಧರಿಸಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಸುದೀಪ್ ಅವರ ಈ ಸಾಮಾಜಿಕ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Recommended Video

ರಾಕಿ ಭಾಯ್ ಹಿಂದೆ ಬಿದ್ದ ತೆಲುಗಿನ ನಿರ್ಮಾಪಕರು | Filmibeat Kannada

More from Filmibeat

English summary
Kichcha Sudeep Charitable Trust organises Mass Marriage on the occasion of Sudeep Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X