ಸುದೀಪ್ ಮೊದಲ ಚಿತ್ರ 'ಸ್ಪರ್ಶ' ಅಲ್ಲ: ಕಿಚ್ಚನ ಬಣ್ಣದ ಜರ್ನಿಗೆ 26 ವರ್ಷ!

ಕಿಚ್ಚ ಸುದೀಪ್ ಅವರಿಗೆ ಜನವರಿ 31 ತುಂಬಾನೇ ವಿಶೇಷವಾದ ದಿನ. ಇದು ಸುದೀಪ್ ಅವರಿಗೆ ಮಾತ್ರ ಅಲ್ಲ ಅವರ ಅಭಿಮಾನಿಗಳಿಗೂ ಕೂಡ ವಿಶೇಷವಾದ ದಿನ. ಯಾಕೆಂದರೆ ಈ ದಿನ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷ ಆಗಿದೆ. 26 ವರ್ಷಗಳ ಹಿಂದೆ ಜನವರಿ 31 ರಂದು ಸುದೀಪ್ ತಮ್ಮ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿದ್ದರು.

ಇದೇನಿದು ಕಿಚ್ಚ ಸುದೀಪ್ ಅಭಿನಯದ ಮೊದಲ ಚಿತ್ರ 'ಸ್ಪರ್ಶ' ಅಲ್ವಾ? ಅದು 2000ನೇ ಇಸವಿಯ ಅಲ್ಲವಾ?. 'ಸ್ಪರ್ಶ' ಸಿನಿಮಾ ರಿಲೀಸ್ ಆಗಿದ್ದು ಜೂನ್ ತಿಂಗಳಲ್ಲಿ ಅಲ್ವ ಅಂತ ಕನ್ಫೂಸ್ ಆಗ್ಬೇಡಿ. ಯಾಕೆಂದರೆ ಈ ಚಿತ್ರಕ್ಕೂ ಮೊದಲು ಸುದೀಪ್ ಅವರು ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅಷ್ಟಕ್ಕೂ ಸುದೀಪ್ ಅವರು ಮೊದಲು ಬಣ್ಣ ಹಚ್ಚಿದ್ದಾದರು ಯಾವ ಚಿತ್ರಕ್ಕೆ. ಆ ಚಿತ್ರದ ಕಥೆ ಏನಾಯ್ತು, ಈಗ ಕಿಚ್ಚ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಕಿಚ್ಚ ಸುದೀಪ್ ಮೊದಲು ಬಣ್ಣ ಹಚ್ಚಿದ ಚಿತ್ರ 'ಬ್ರಹ್ಮ'!

ಕಿಚ್ಚ ಸುದೀಪ್ ಮೊದಲು ಬಣ್ಣ ಹಚ್ಚಿದ ಚಿತ್ರ 'ಬ್ರಹ್ಮ'!

ನಟ ಸುದೀಪ್ ಅವರ ಮೊದಲ ಸಿನಿಮಾ 'ಬ್ರಹ್ಮ'. 26 ವರ್ಷಗಳ ಹಿಂದೆ ಜನವರಿ 31ರಂದು ಕಿಚ್ಚ ಸುದೀಪ್ ಮೊದಲು ಮುಖಕ್ಕೆ ಬಣ್ಣ ಹಚ್ಚಿ, ಕ್ಯಾಮರಾ ಮುಂದೆ ನಟಿಸಿದರು. ಆದರೆ ಈ ಚಿತ್ರ ತೆರೆಗೆ ಬರಲಿಲ್ಲ. ಸುದೀಪ್ ಅವರು ಮೊದಲು ಅಭಿನಯಿಸಿದ ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಆದರೆ ಮೊದಲು ಅವರು ಈ ಚಿತ್ರಕ್ಕಾಗಿ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ. ಹಾಗಾಗಿ ಇದು ಅವರ ಮೊದಲ ಸಿನಿಮಾ ಆಗುತ್ತೆ.

26 ವರ್ಷದ ಜರ್ನಿ ನೆನೆದ ಸುದೀಪ್!

ನಟ ಕಿಚ್ಚ ಸುದೀಪ್ ಈ ಸಂತಸವನ್ನು ಅಭಿಮಾನಿಗಳು ಮತ್ತು ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ ಸುದೀಪ್. "ಎಲ್ಲಾದಕ್ಕೂ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮಿಂದಲೇ ಈ 26 ವರ್ಷಗಳು ಸ್ಮರಣೀಯ. ಸಿನಿಮಾದವರು ಮತ್ತು ಎಲ್ಲಾ ಮಾಧ್ಯಮದವರಿಗೂ ಪ್ರೀತಿಯ ಕೃತಜ್ಞತೆಗಳು." ಎಂದು ಸುದೀಪ್ ಅವರು ಟ್ವೀಟ್‌ನಲ್ಲಿ ಬರೆದು ಕೊಂಡಿದ್ದಾರೆ.

ಪತ್ನಿಗೆ ಕಿಚ್ಚನ ಅಭಿನಂದನೆಗಳು!

ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತಿಗೆ ಶುಭ ಕೋರಿದ್ದಾರೆ. "ಪ್ರಪಂಚದಾದ್ಯಂತ ನೀವು ಗಳಿಸಿರುವ ಪ್ರೀತಿ ಮತ್ತು ಗೌರವದ ಬಗ್ಗೆ ನಮಗೆ ಅಪಾರವಾದ ಹೆಮ್ಮೆಯಿದೆ. ನಮ್ಮಲ್ಲಿ ಹಲವರು ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಿಮ್ಮ ಕ್ರಿಯಾಶೀಲತೆಯಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುತ್ತೇವೆ." ಎಂದು ಪ್ರಿಯಾ ಅವರು ಮಾಡಿರುವ ಟ್ವೀಟ್‌ಗೆ ಕಿಚ್ಚ ಉತ್ತರಿಸಿ ಪತ್ನಿಗೆ ಧನ್ಯವಾದ ತಿಳಿಸಿದ್ದಾರೆ. "ನೀವು ಈ 26 ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಂಡಿದ್ದೀರಿ, ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ನಾನು ನಿಮಗೆ ಧನ್ಯವಾದ ಹೇಳಲಾರೆ. ನನಗೆ ದೊಡ್ಡ ಶಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ಮತ್ತು ನನ್ನ ಕೆಲಸಗಳಿಗೂ ನೀವು ತೋರಿದ ಪ್ರೀತಿ ಸಹಾಯಕ." ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ಕಿಚ್ಚನ ಮೊದಲ 2 ಚಿತ್ರಗಳು ರಿಲೀಸ್ ಆಗಲೇ ಇಲ್ಲ!

ಕಿಚ್ಚನ ಮೊದಲ 2 ಚಿತ್ರಗಳು ರಿಲೀಸ್ ಆಗಲೇ ಇಲ್ಲ!

ಕಿಚ್ಚನ ಮೊದಲ ಮೂರು ಸಿನಿಮಾಗಳಲ್ಲಿ 'ಬ್ರಹ್ಮ' ಹಾಗೂ 'ಓ ಕುಸುಮ ಬಾಲೆ' ಸಿನಿಮಾಗಳು ರಿಲೀಸ್ ಆಗಲೇ ಇಲ್ಲ. ಆದರೂ, ಛಲ ಬಿಡದೆ ಸುದೀಪ್ ಅವರು ಚಿತ್ರರಂಗದಲ್ಲಿ ಮುಂದುವರೆದರು. ಕಿಚ್ಚನಿಗೆ 'ಸ್ಪರ್ಶ' ಚಿತ್ರದ ಮೂಲಕ ಖ್ಯಾತಿ ಸಿಕ್ಕಿತ್ತು. ನಂತರ, 'ಹುಚ್ಚ' ಚಿತ್ರ ಕಿಚ್ಚನಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಹಿಂದೆ ತಿರುಗಿ ನೋಡೆ ಇಲ್ಲ. ಈಗ ವಿಕ್ರಾಂತ್ ರೋಣನಾಗಿ ಕಿಚ್ಚ ಮತ್ತೊಂಮ್ಮೆ ಬೆಳ್ಳಿ ಪರದೆ ಮೇಲೆ ಸ್ಟಾರ್ ಆಗಿ ಮಿಂಚಲು ಬರ್ತಿದ್ದಾರೆ.

More from Filmibeat

English summary
Kichcha Sudeep Completes 26 Years For In Films, Know About His First Film,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X