ಹೊಸ ಫೋಟೊಶೂಟ್‌ನಲ್ಲಿ ಸುದೀಪ್ ಪುತ್ರಿ ಸಾನ್ವಿ; 'ಲುಕಿಂಗ್ ಲೈಕ್ ಎ ವಾವ್' ಎಂದ ನೆಟ್ಟಿಗರು!

By ಅನಿತಾ ಬನಾರಿ

ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಇದೀಗ ಅಭಿಮಾನಿಗಳ ಹೊಸ ಫೇವರೆಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ರೀತಿಯ ಪೋಸ್ಟ್‌ಗಳನ್ನು ಹಾಕಿ ತಮ್ಮ ಫಾಲೋವರ್ಸ್ ಅನ್ನು ರಂಜಿಸುತ್ತಿರುತ್ತಾರೆ. ಸಂಗೀತವೆಂದರೆ ಬಹಳ ಇಷ್ಟ ಇರುವ ಸಾನ್ವಿ ಸುದೀಪ್ ಆಗಾಗ ಹೊಸ ಹೊಸ ಹಾಡುಗಳನ್ನು ಹಾಡುತ್ತಲೇ ಇರುತ್ತಾರೆ. ಡ್ರಾಯಿಂಗ್‌ನಲ್ಲಿಯೂ ಆಸಕ್ತಿ ಇರುವ ಇವರು ಆಗಾಗ ತಮ್ಮ ಸ್ಕೆಚ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಇದೀಗ ಸಾನ್ವಿ ಸುದೀಪ್‌ ಅವರು ತಂದೆಯ ದಾರಿಯನ್ನು ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಸೋಶಿಯಲ್ ಮೀಡಿಯಾದಲ್ಲಂತೂ ಇತ್ತೀಚೆಗೆ ಬಹಳಷ್ಟು ಆ್ಯಕ್ಟೀವ್ ಇರುವ ಸಾನ್ವಿ ಆಗಾಗ ಬೇರೆ ಬೇರೆ ರೀತಿಯ ಪೋಸ್ಟ್‌ಗಳನ್ನು ಹಾಕಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇವರು ಗನ್ ಹಿಡಿದು ಪೋಸ್ ಕೊಟ್ಟ ಒಂದು ಫೋಟೋ ಬಹಳ ವೈರಲ್ ಆಗಿತ್ತು. ಸಿನಿಮಾ ಇಂಡಸ್ಟ್ರಿಗೆ ಬರ್ತೀರಾ ಎಂಬ ಬಹಳಷ್ಟು ಪ್ರಶ್ನೆಗಳು ಸಾನ್ವಿಗೆ ಕಿಚ್ಚ ಅಭಿಮಾನಿಗಳಿಂದ ಬಂದಿದ್ದವು. ಅದ್ಯಾವುದಕ್ಕೂ ಸರಿಯಾದ ಉತ್ತರ ಕೊಟ್ಟಿರಲಿಲ್ಲ ಸಾನ್ವಿ. ಇದೀಗ ಚೂಡಿದಾರ್ ಹಾಕಿಕೊಂಡು ಬಹಳ ಲಕ್ಷಣವಾಗಿ ಕಾಣಿಸುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಸಾನ್ವಿ ಸುದೀಪ್.

Kichcha Sudeep daughter Sanvi charmed again with a new photo shoot

ಚೂಡಿದಾರ್ ಹಾಕಿಕೊಂಡು ಹಣೆಗೆ ದೊಡ್ಡ ಬೊಟ್ಟಿಟ್ಟುಕೊಂಡು ಬಹಳ ಲಕ್ಷಣವಾಗಿ ಪೋಸ್ ಕೊಟ್ಟಿರುವ ಸಾನ್ವಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಒಂದಷ್ಟು ಫೋಟೋಗಳಲ್ಲಿ ರಗಡ್ ಲುಕ್ ಕೊಟ್ಟಿರುವ ಸಾನ್ವಿ ನಟಿಯಾಗುವ ಎಲ್ಲಾ ಲಕ್ಷಣಗಳೂ ಇದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವಿಲನ್ ರೀತಿ ಕಾಣುವ ಸಾನ್ವಿ ಈ ಪೋಸ್ಟ್‌ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮೊದಲೆಲ್ಲ ಅವರು ವೆಸ್ಟರ್ನ್ ಬಟ್ಟೆಗಳನ್ನೇ ಹಾಕುತ್ತಿದ್ದರು, ಆದರೆ ಈ ಇಂಡಿಯನ್ ಬಟ್ಟೆಯಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾರೆ.

Kichcha Sudeep daughter Sanvi charmed again with a new photo shoot

ಅಭಿಮಾನಿಗಳು ಹಾಗೂ ನೆಟ್ಟಿಗರು ಈ ಪೋಸ್ಟ್‌ಗೆ ಲೈಕ್ ಹಾಗೂ ಕಮೆಂಟ್ ಮಾಡಿದ್ದು ಜಸ್ಟ್ ಲುಕಿಂಗ್ ಲೈಕ್ ಎ ವಾವ್, ಸೂಪರ್ ಸಾನ್ವಿ, ಅಪ್ಪನಂತೆ ಇತ್ಯಾದಿ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿದಿದ್ದಾರೆ.

ಈ ಮೊದಲು ಸಾನ್ವಿ ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಸಾಧ್ಯತೆಗಳು ಹೆಚ್ಚಿದೆ ಎನಿಸುತ್ತಿದೆ. ಅದಕ್ಕೆ ಸರಿಯಾಗಿ ಈ ಫೋಟೋದಲ್ಲಿನ ಸ್ಪೆಷಲ್ ಲುಕ್ ಮತ್ತಷ್ಟು ಕುತೂಹಲ ಕೆರಳಿಸಿದೆ. ಹೇಗೂ ಕಿಚ್ಚ ಸುದೀಪ್ ಹಾಗೂ ಸಾನ್ವಿ ಸುದೀಪ್ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಬಹಳ ಹಿಂದಿನ ಕಾಲದಿಂದಲೂ ಸಾನ್ವಿ ಸುದೀಪ್ ಅವರನ್ನು ಇಂಡಸ್ಟ್ರಿಗೆ ಕರೆಯುತ್ತಿದ್ದಾರೆ.

ಈ ಹಿಂದೆ ಸಾನ್ವಿ ಅವರು ಶೇರ್ ಮಾಡಿದ ಫೋಟೋದಲ್ಲಿನ ಪೋಸ್ ನೋಡಿದರೆ, ಆಕೆ ಈಗಾಗಲೇ ಸಿನಿಮಾ ಒಂದರಲ್ಲಿ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದೇ ಹೇಳಬಹುದು. ಆದರೆ, ಅಭಿಮಾನಿಗಳ ಕುತೂಹಲಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಇವರು ಇಂಡಸ್ಟ್ರಿಗೆ ಬರುವುದೇ ಆದರೆ, ಖಂಡಿತವಾಗಿಯೂ ಹೊಸ ಅಭಿಮಾನಿಗಳ ಬಳಗವೇ ಹುಟ್ಟಿಕೊಳ್ಳಲಿದೆ. ಆದರೆ ಸದ್ಯಕ್ಕೆ ಎಲ್ಲವನ್ನು ರಹಸ್ಯವಾಗಿ ಇಟ್ಟಿರುವ ಸಾನ್ವಿ ಸುದ್ದಿ ಅವರ ಮುಂದಿನ ಪ್ಲಾನ್‌ಗ‌ಳೇನು ಎಂಬುದನ್ನು ತಿಳಿಯಬೇಕಿದೆ.

More from Filmibeat

English summary
Sudeep daughter Sanvi charmed again with a new photo shoot. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X