ಅಜ್ಜಿ ಸೀರೆಯುಟ್ಟ ಕಿಚ್ಚ ಸುದೀಪ್ ಪುತ್ರಿ; ಅಮ್ಮಮ್ಮನಿಗೆ ಸೀರೆಯಲ್ಲಿ ನೋಡೋ ಆಸೆಯಿತ್ತು ಎಂದ ಸಾನ್ವಿ!
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಕಿಚ್ಚ ಸುದೀಪ್ ನಟಿಸಿದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಇರುವಾಗಲೇ ಸುದೀಪ್‌ಗೆ ರಾಜ್ಯ ಪ್ರಶಸ್ತಿ ಕೂಡ ಅನೌನ್ಸ್ ಆಗಿತ್ತು. 2019ರ 'ಪೈಲ್ವಾನ್' ಸಿನಿಮಾದ ನಟನೆಗಾಗಿ ಕಿಚ್ಚನಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿತ್ತು. ಅದನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
ಇತ್ತ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿ ಕಿಚ್ಚ ಸುದೀಪ್ ಸುದ್ದಿಯಲ್ಲಿ ಇದ್ದರೆ, ಇನ್ನೊಂದು ಕಡೆ ಸುದೀಪ್ ಪುತ್ರಿ ಸಾನ್ವಿ ಕೂಡ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರೆಯುಟ್ಟಿರುವ ಎರಡು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿವೆ. ಆ ಫೋಟೊಗಳಿಗೆ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕೂಡ ಇತ್ತೀಚೆಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತಂದೆ ನಟಿಸಿದ್ದ 'ಮ್ಯಾಕ್ಸ್' ಸಿನಿಮಾದ ಒಂದು ಹಾಡನ್ನು ಹಾಡಿ ಕಿಚ್ಚ ಸುದೀಪ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಈಗ ಅಜ್ಜಿಯ ಸೀರೆಯನ್ನು ಧರಿಸಿ ನೆಟ್ಟಿಗರ ಮನಗೆದ್ದಿದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಅಜ್ಜಿಯ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದನ್ನು ಮೆಚ್ಚಿಕೊಂಡಿದ್ದಾರೆ.
ಸಾನ್ವಿ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಲೈಫ್‌ನ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಇತ್ತೀಚೆಗೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರಿಂದ ಅವರಿಗೂ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದ್ದಾರೆ. ಇದೀಗ ಅಜ್ಜಿಯ ಸೀರೆಯುಟ್ಟು ಅವರನ್ನು ನೆನಪಿಸಿಕೊಂಡಿದ್ದಾರೆ. ಅಜ್ಜಿ ಹಾಗೂ ಮೊಮ್ಮಗಳ ನಡುವಿನ ಬಾಂಧವ್ಯಕ್ಕೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸೀರೆಯುಟ್ಟು ಎರಡು ಫೋಟೊಗಳನ್ನು ಶೇರ್ ಮಾಡಿ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ. "ನನ್ನ ಅಮ್ಮಮ್ಮ ಪ್ರತಿಬಾರಿಯೂ ನನ್ನನ್ನು ಸೀರೆಯಲ್ಲಿ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇಂದು ಅವರು ಉಡುತ್ತಿದ್ದ ಸೀರೆಯನ್ನು ಧರಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ" ಎಂದು ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಅಜ್ಜಿ ಹಾಗೂ ಮೊಮ್ಮಗಳ ಬಾಂಧವ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಸಾನ್ವಿ ಸುದೀಪ್ ಸುಂದರ ಫೋಟೊಗಳಿಗೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಹಾಗೇ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಸೇಮ್ ಟು ಸೇಮ್ ನಿಮ್ ಅಜ್ಜಿ ಸರೋಜಮ್ಮ ಅವರ ತರಾನೇ ಇದ್ದೀರಾ ಮೇಡಂ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ನಮ್ಮ ಪುಟ್ಟ ಹುಡುಗಿ ಬೆಳೆದು ಬಿಟ್ಟಳು" ಎಂದು ಹೆಮ್ಮೆಯಿಂದ ಕಾಮೆಂಟ್ ಮಾಡಿದ್ದಾರೆ.
'ಮ್ಯಾಕ್ಸ್' ಪ್ರಚಾರದ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಾಡನ್ನು ಹಾಡಿದ್ದರು. ಈ ವೇಳೆ ಇಂಗ್ಲಿಷ್‌ನಲ್ಲಿಯೇ ಮಾಡಿದ್ದರಿಂದ ಕನ್ನಡಿಗರು ಬೇರೆ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸಾನ್ವಿ ಸುದೀಪ್‌ಗೆ ಕನ್ನಡ ಬರೋದಿಲ್ಲ ಅಂತ ಕಣ್ಣನ್ನು ಕೆಂಪು ಮಾಡಿಕೊಂಡಿದ್ದರು.


Click it and Unblock the Notifications











