Viral Video: ಶಮಂತ್ ಬ್ರೋ ಗೌಡ BMW ಕಾರು ಡ್ರೈವ್ ಮಾಡಿದ ಕಿಚ್ಚ ಸುದೀಪ್
ಕನ್ನಡ ಚಿತ್ರ ರಂಗದಲ್ಲಿ ನಟ ಕಿಚ್ಚ ಸುದೀಪ್ ಅವರಿಗೆ ಕಲಾವಿದರಲ್ಲಿ ಅಭಿಮಾನಿಗಳು ಇದ್ದಾರೆ. ಅಂದ್ರೆ ಒಂದಷ್ಟು ಕಲಾವಿದರು ಸುದೀಪ್ ಅವರನ್ನು ಅಷ್ಟು ಇಷ್ಟ ಪಡುತ್ತಾರೆ. ಇದಕ್ಕೆ ರಿಯಾಲಿಟಿ ಶೋ ಸ್ಪರ್ಧಿಗಳು ಹೊರತಲ್ಲ. ಕಿಚ್ಚನ ಮೇಲಿನ ಪ್ರೀತಿಯನ್ನು ವಿಡಿಯೋ ಒಂದರ ಮೂಲಕ ತೋರಿಸಿದ್ದಾರೆ ರಿಯಾಲಿಟಿ ಶೋ ಖ್ಯಾತಿಯ ಶಮಂತ್ ಬ್ರೋ ಗೌಡ.
ಶಮಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ ಆಗಿರುತ್ತಾರೆ. ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋಯರ್‌ಗಳು ಇದ್ದಾರೆ. ಇತ್ತೀಚೆಗೆ ಅವರು ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಅವರ ಹೊಸ ಕಾರನ್ನು ನಟ ಕಿಚ್ಚ ಸುದೀಪ್ ಅವರು ರೈಡ್ ಮಾಡಿದ್ದಾರೆ. ಈ ವಿಡಿಯೋವನ್ನು ಶಮಂತ್ ಹಂಚಿಕೊಂಡಿದ್ದಾರೆ. ವಿಡಿಯೋ ಈಗ ವೈರಲ್ ಲಿಸ್ಟ್ ಸೇರಿದೆ.

ಇದನ್ನು ವಿಡಿಯೋದಲ್ಲಿ ಅವರೇ ಹೇಳಿಕೊಂಡಿದ್ದಾರೆ. ವಿಡಿಯೋ ಆರಂಭದಲ್ಲಿ ಶಮಂತ್ ಅವರು ಈ ಸರ್ಪ್ರೈಸ್ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಸರ್ ಅವರಿಗೆ ಕಾರು ತೋರಿಸಲು ಹೋಗುತ್ತಿದ್ದೇನೆ. ಅದರೊಂದಿಗೆ ಮತ್ತೊಂದು ವಿಶೇಷ ಇದೆ ಎಂದು ಹೇಳುವ ಮೂಲಕ ಅವರು ಮಾತು ಆರಂಭಿಸಿದ್ದಾರೆ.
ಶಮಂತ್ ಅವರು ತಮ್ಮ ಬಿಎಂಡಬ್ಲ್ಯೂ ಕಾರನ್ನು ಸುದೀಪ್ ಮನೆಗೆ ತಂದಿದ್ದಾರೆ. ಸುದೀಪ್ ಅವರು ಕಾರನ್ನು ಓಡಿಸಿದ್ದಾರೆ. ಅಲ್ಲದೆ, ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಕೂಡ ಹಾಕಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸುದೀಪ್ ಆಶೀರ್ವಾದ ಪಡೆದ ಶಮಂತ್ ಸಾಕಷ್ಟು ಖುಷಿ ಇಂದು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನು ನಟ ಕಿಚ್ಚ ಸುದೀಪ್ ಅವರ ವಿಚಾರಕ್ಕೆ ಬಂದರೆ. ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ಸಿದ್ದ ಆಗ್ತಿದೆ. ಇದೇ ಫೆಬ್ರವರಿ 24ಕ್ಕೆ ಸಿನಿಮಾ ರಿಲೀಸ್ ಆಗಲು ಎಲ್ಲಾ ತಯಾರಿ ನಡೆಸಿದೆ ಚಿತ್ರ ತಂಡ. ಈ ಚಿತ್ರ ಸಾಕಷ್ಟು ಕಾರಣಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ 3ಡಿಯಲ್ಲಿ ರಿಲೀಸ್ ಆಗುವುದು ಕೂಡ ಚಿತ್ರದ ಮೇಲಿನ ನಿರೀಕ್ಷೆಗಳಲ್ಲಿ ಒಂದು ಕಾರಣ ಆಗಿದೆ.


Click it and Unblock the Notifications











