»   » ಗಂಟೆ, ತಮಟೆಯೊಂದಿಗೆ 'ಈಗ' ಸುದೀಪ್ ಭಾರೀ ಸದ್ದು

ಗಂಟೆ, ತಮಟೆಯೊಂದಿಗೆ 'ಈಗ' ಸುದೀಪ್ ಭಾರೀ ಸದ್ದು

Posted By:
Subscribe to Filmibeat Kannada

ಕನ್ನಡ ನಟ ಕಿಚ್ಚ ಸುದೀಪ್ 'ಈಗ' ಆಲ್ ಇಂಡಿಯಾ ಲೆವೆಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಬಹುನಿರೀಕ್ಷಿತ ಚಿತ್ರ ಈಗ ಬಿಡುಗಡೆ ಬಳಿಕ, ಈ ಮೊದಲೇ ಎಲ್ಲರೂ ಅಂದುಕೊಂಡಂತೆ, ಸುದೀಪ್ ಭಾರತದ ತುಂಬಾ ಪ್ರಕಾಶಿಸುತ್ತಿದ್ದಾರೆ. ತೆಲುಗು ನಿರ್ದೇಶಕ ರಾಜಮೌಳಿ ಅಮೋಘ ಜಾದೂ, ಅವರ ಒಂಬತ್ತನೆಯ ಚಿತ್ರದಲ್ಲೂ ಮುಂದುವರಿಯುತ್ತಿದೆ.

'ನಮ್ಮೂರಲ್ಲಿ ಗಂಟೆ ಹೊಡೀಬೇಕು, ಪಕ್ಕದ ಊರಲ್ಲಿ ತಮಟೆನೂ ಹೊಡಿಬೇಕು' ಎಂಬ ಕಿಚ್ಚ ಸುದೀಪ್ ಅವರ ಕನ್ನಡದ ಡೈಲಾಗ್, ಚಿತ್ರ ನೊಡಿದ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಚಿತ್ರದ ತುಂಬೆಲ್ಲಾ ಅಲ್ಲಲ್ಲಿ ಸುದೀಪ್ ಕನ್ನಡವನ್ನು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಗೊಣಗುವಾಗಲೂ ಕನ್ನಡತನ ಮೆರೆದಿದ್ದಾರೆ.

ಕನ್ನಡದಲ್ಲಿ ಡಬ್ ಆಗದಿರುವ ಈಗ ಚಿತ್ರದಲ್ಲಿ ಈ ಮೂಲಕ ಎಲ್ಲರಿಗೂ ಕನ್ನಡ ನೆನಪಾಗುವಂತೆ ಮಾಡುವಲ್ಲಿ ಕಿಚ್ಚ ಸುದೀಪ್ ಸಫಲರಾಗಿದ್ದಾರೆ. ಚಿತ್ರ ಪ್ರಾರಂಭವಾದ ಇಪ್ಪತ್ತು ನಿಮಿಷಗಳ ಬಳಿಕ ತೆರೆಯಲ್ಲಿ ಕಾಣಿಸಿಕೊಳ್ಳುವ ಸುದೀಪ್, ನಂತರ ಇಡೀ ಚಿತ್ರವನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಸುದೀಪ್ ಪಾತ್ರಕ್ಕೆ ಕೇವಲ ನಟನಾಗಿರದೇ ಸಂಪೂರ್ಣವಾಗಿ ತಮ್ಮನ್ನು ಅದಕ್ಕೆ ಅರ್ಪಿಸಿಕೊಂಡಿದ್ದಾರೆ.

ಸುದೀಪ್ ಈಗ ಚಿತ್ರದ ಖಳನಾಯಕನ ಪಾತ್ರದಲ್ಲಿ ನಟಿಸಲು ಒಪ್ಪದಿದ್ದರೆ ಚಿತ್ರವನ್ನೇ ಕೈಬಿಡಲು ನಿರ್ಧರಿಸಿದ್ದರು ರಾಜಮೌಳಿ. ಚಿತ್ರ ನೋಡಿದ ಮೇಲೆ ರಾಜಮೌಳಿಯವರ ನಿರ್ಧಾರ ಸರಿಯಾಗಿಯೇ ಇತ್ತು ಇನ್ನದೇ ಬೇರೆ ದಾರಿಯಿಲ್ಲ ಎಂಬಷ್ಟು ಚೆನ್ನಾಗಿ ನಟಿಸಿದ್ದಾರೆ ಸುದೀಪ್. ಸುದೀಪ್ ನಟನೆಯನ್ನು ಈ ಚಿತ್ರ ನೊಡಿದ ಯಾರೇ ಆದರೂ ಕೊಂಡಾಡದೇ ವಿಧಿಯಿಲ್ಲ.

ಈಗ ಚಿತ್ರದ ನಟನೆ ಮೂಲಕ ಕನ್ನಡದ ಕಿಚ್ಚ ಸುದೀಪ್ ಅಂತಾರಾಷ್ಷ್ರೀಯ ಮಟ್ಟದಲ್ಲಿ ಕನ್ನಡ ಭಾಷೆ, ಕನ್ನಡ ನಟರು ಹಾಗೂ ಕನ್ನಡತನವನ್ನು ಮೆರೆದಿದ್ದಾರೆ ಎಂಬ ಎಲ್ಲೆಡೆಯ್ಲೂ ಈಗ ಕೇಳಿಬರುತ್ತಿರುವ ಮಾತು ಅಕ್ಷರಶಃ ನಿಜ ಎನ್ನಲೇಬೇಕು. ಆ ಮಟ್ಟಿಗೆ ಶ್ರದ್ಧೆಯಿಂದ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಸುದೀಪ್. ಇನ್ನು ನಿರ್ದೇಶಕ ರಾಜಮೌಳಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಏಕೆಂದರೆ, ಸುದೀಪ್ ಅವರಂತ ಪ್ರತಿಭೆಯನ್ನು ಗುರುತಿಸಿ, ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ, ರಾಜಮೌಳಿಯವರು ಸುದೀಪ್ ಮೂಲಕ ಕನ್ನಡಿಗರ ಪಾಲಿಗೆ 'ಗಾಡ್ ಫಾದರ್' ಎನಿಸಿದ್ದಾರೆ. ಇಂದು ಸುದೀಪ್ ಏರಿರುವ ಎತ್ತರಕ್ಕೆ, ಸುದೀಪ್ ಸ್ವಪ್ರತಿಭೆ ಜೊತೆ ರಾಜಮೌಳಿಯವರ ಕೊಡುಗೆಯನ್ನು ಸರಿಸಮವಾಗಿ ಹೇಳಬೇಕಾಗುತ್ತದೆ. ಇದು ಶಿಲ್ಪಿಯಿಲ್ಲದೇ ಮೂರ್ತಿಯಿಲ್ಲ ಎಂಬಷ್ಟೇ ಸಹಜ.

ಒಟ್ಟಿನಲ್ಲಿ ಅಂದುಕೊಂಡಂತೆ ಸುದೀಪ್ ಈಗ, ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಎಸ್ ಎಸ್ ರಾಜಮೌಳಿಯವರ ಚಿತ್ರದ ಮೂಲಕ ಪ್ರಕಾಶಿಸುತ್ತಿದ್ದಾರೆ. ರಾಜಮೌಳಿಯವರು ಅಮೋಘವಾಗಿ ತಮ್ಮ 9 ನೇ ಚಿತ್ರವನ್ನೂ ಕೂಡ ತುಂಬಾ ಚೆನ್ನಾಗಿ ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಬಿಡುಗಡೆಯಾದಲ್ಲೆಲ್ಲಾ 'ಹೌಸ್ ಫುಲ್' ಪ್ರದರ್ಶನ ಕಾಣುವ ಮೂಲಕ ಈಗ ಚಿತ್ರ ಇವೆಲ್ಲಕ್ಕೂ ಸಾಕ್ಷಿ ನೀಡಿದೆ. ಸುದೀಪ್ ಮೂಲಕ ಕನ್ನಡಿಗರು ಅಂತಾರಾಷ್ಷ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Kichcha Sudeep acted ,Telugu famous director SS Rajamouli's Eega Movie got 'Massive Response' from everywhere and screening houseful show. Sudeep acted extremely good in this movie as already Rajmouli told. 
 
Please Wait while comments are loading...