ಟ್ವಿಟ್ಟರ್, ಇನ್ಸ್ಟಾಗ್ರಾಮ್ ಬಳಿಕ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್
ಅಭಿನಯ ಕಿಚ್ಚ ಸುದೀಪ್ ಬಣ್ಣದ ಲೋಕದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೌದು, ಸುದೀಪ್ ಸಿನಿ ಜೀವನಕ್ಕೆ 25 ವರ್ಷಗಳು ತುಂಬಿದೆ. ಬೆಂಗಳೂರಿನಿಂದ ದುಬೈವರೆಗು ಕಿಚ್ಚನ ಬೆಳ್ಳಿಹಬ್ಬದ್ದೇ ಮಾತು. ಇದೇ ಸಂತಸದಲ್ಲಿ ಕಿಚ್ಚ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
Recommended Video
ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟು ವರ್ಷಗಳೇ ಕಳೆದಿದೆ. ಇನ್ಸ್ಟಾಗ್ರಾಮ್ ನಲ್ಲೂ ಸಕ್ರೀಯರಾಗಿದ್ದಾರೆ. ಇದೀಗ ಕಿಚ್ಚ ಫೇಸ್ ಬುಕ್ ಗೆ ಕಾಲಿಟ್ಟಿದ್ದಾರೆ. ಕಿಚ್ಚ ಸುದೀಪ್ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದಿದ್ದು, ಈಗಾಗಲೇ ಅಭಿಮಾನಿಗಳು ಲೈಕ್ ಮಾಡಿ ಫಾಲೋ ಮಾಡುತ್ತಿದ್ದಾರೆ.
ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುತ್ತಾರೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಇದುವರೆಗೂ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದ ಕಿಚ್ಚ ಇನ್ಮುಂದೆ ಫೇಸ್ ಬುಕ್ ನಲ್ಲೂ ಸಿಗಲಿದ್ದಾರೆ.

ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಇದ್ದು, ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಜೊತೆಗೆ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಸುದೀಪ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಸದ್ಯ ಬಿಗ್ ಬಾಸ್ ಸೀಸನ್ 8 ನಡೆಸಿಕೊಡಲು ಕಿಚ್ಚ ಸಜ್ಜಾಗುತ್ತಿದ್ದಾರೆ. ಬಿಗ್ ಬಾಸ್ ಬಳಿಕ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವ ಸಿನಿಮಾ, ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಬಹಿರಂಗ ವಾಗಿಲ್ಲ. ಸದ್ಯದಲ್ಲೇ ಸುದೀಪ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications











